The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
MySQL® is a registered trademark of MySQL AB in the United States, the European Union and other countries.
All other trademarks are the property of their respective owners.
Red Hat Enterprise Linux ನ ಸಣ್ಣ ಬಿಡುಗಡೆಯಲ್ಲಿ ಪ್ರತ್ಯೇಕ ಸುಧಾರಣೆ, ಸುರಕ್ಷತೆ ಹಾಗು ದೋಷ ಪರಿಹಾರದ ಎರಾಟದ ಒಂದು ಒಗ್ಗೂಡಿಕೆಯಾಗಿರುತ್ತದೆ. ಈ ಬಿಡುಗಡೆಗಾಗಿನ Red Hat Enterprise Linux 5 ಕಾರ್ಯವ್ಯವಸ್ಥೆ ಹಾಗು ಅದಕ್ಕೆ ಸಂಬಂಧಿಸಿದ ಅನ್ವಯಗಳ ಬಗೆಗಿನ ಮಾಹಿತಿಯನ್ನು Red Hat Enterprise Linux 5.6 ರ ಬಿಡುಗಡೆ ಟಿಪ್ಪಣಿಗಳ ದಸ್ತಾವೇಜಿನಲ್ಲಿ ನೀಡಲಾಗಿದೆ. ಈ ಚಿಕ್ಕ ಬಿಡುಗಡೆಯಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ಬಗೆಗಿನ ಸವಿವರವಾದ ಮಾಹಿತಿಯನ್ನು ತಾಂತ್ರಿಕ ಟಿಪ್ಪಣಿಗಳಲ್ಲಿ ಕಾಣಬಹುದಾಗಿದೆ.
ಕಿಕ್ಸ್ಟಾರ್ಟ್ ಎನ್ನುವುದು Red Hat Enterprise Linux ಅನ್ನು ಅನುಸ್ಥಾಪಿಸಲು ವ್ಯವಸ್ಥೆಯ ನಿರ್ವಾಹಕರು ಬಳಸುವ ಸ್ವಯಂಚಾಲಿತವಾದ ವಿಧಾನವಾಗಿದೆ. ಕಿಕ್ಸ್ಟಾರ್ಟನ್ನು ಬಳಸಿಕೊಂಡು, ಒಂದು ಸಾಮಾನ್ಯ ರೀತಿಯ ಅನುಸ್ಥಾಪನೆಯಲ್ಲಿ ಕೇಳಲಾಗುವ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಹೊಂದಿರುವ ಒಂದು ಕಡತವನ್ನು ರಚಿಸಲಾಗುತ್ತದೆ.
ಕಿಕ್ಸ್ಟಾರ್ಟ್ ಅನುಸ್ಥಾಪನೆಯ ಕೆಲವು ಸಂದರ್ಭಗಳಲ್ಲಿ, ತಾತ್ಕಾಲಿಕವಾಗಿ ಅಲಭ್ಯವಾಗಿರುವಂತಹ (ಉದಾ. ಓವರ್-ಲೋಡ್ ಆದಂತಹ Red Hat Network Satellite ) ಒಂದು ರೆಪೊಸಿಟರಿಯಿಂದ ಅನುಸ್ಥಾಪಕವು ಪ್ಯಾಕೇಜನ್ನು ಡೌನ್ಲೋಡ್ ಮಾಡಿಕೊಳ್ಳು ಪ್ರಯತ್ನಿಸಬಹುದು. ಇದರ ಪರಿಣಾಮವಾಗಿ, Red Hat Enterprise Linux 5 ರ ಈ ಹಿಂದಿನ ಬಿಡುಗಡೆಗಳಲ್ಲಿ, ಮತ್ತೊಮ್ಮೆ ಡೌನ್ಲೋಡ್ಗಾಗಿ ಪ್ರಯತ್ನಿಸಲು ಅಥವ ಸ್ಥಗಿತಗೊಳಿಸಲು ಬಳಕೆದಾರರು ಮಧ್ಯವರ್ತಿಕೆಯ ಅಗತ್ಯವಿರುತ್ತಿತ್ತು. Red Hat Enterprise Linux 5.6 ಬೀಟಾದಲ್ಲಿನ ಅನುಸ್ಥಾಪಕವು ರೆಪೊಸಿಟರಿಯೊಂದಿಗೆ ಮರಳಿ ಸಂಪರ್ಕ ಸಾಧಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತದೆ ಹಾಗಯ ಅಗತ್ಯವಿರುವ ಪ್ಯಾಕೇಜ ಅನ್ನು ಲಭ್ಯವಿದ್ದಾಗ ಡೌನ್ಲೋಡ್ ಮಾಡಿಕೊಳ್ಳುತ್ತದೆ.
ಸುಧಾರಿತ ಚಾಲಕ ಬೆಂಬಲ
Red Hat Enterprise Linux 5.6 ಬೀಟಾದಲ್ಲಿ ಅನುಸ್ಥಾಪನಾ ಪ್ರಕ್ರಿಯೆಯಲ್ಲಿ ಅಗತ್ಯವಾದ ಸಾಧನಗಳಿಗಾಗಿ ಸುಧಾರಿತ ಚಾಲಕ ಬೆಂಬಲವನ್ನು ಸೇರಿಸಲಾಗಿದೆ. ಈ ಬಿಡುಗಡೆಯಲ್ಲಿ ಅನುಸ್ಥಾಪಕಕ್ಕೆ ಈ ಕೆಳಗಿನ ಚಾಲಕಗಳು ಹಾಗು ಸಾಧನಗಳಿಗಾಗಿನ ಬೆಂಬಲವನ್ನು ಸೇರಿಸಲಾಗಿದೆ:
Red Hat Enterprise Linux 5.6 ರಲ್ಲಿನ ಇತರೆ ಚಾಲಕಗಳ ಬಗೆಗೆ ವಿಭಾಗ 9, “ಸಾಧನ ಚಾಲಕಗಳು” ಎಂಬಲ್ಲಿ ವಿವರಿಸಲಾಗಿದೆ
ಸೂಚನೆ — ಹೆಚ್ಚಿನ ಓದಿಗಾಗಿ
Red Hat Enterprise Linux 5 ಅನುಸ್ಥಾಪನಾ ಮಾರ್ಗದರ್ಶಿಯು ಅನುಸ್ಥಾಪಕ ಹಾಗು ಅನುಸ್ಥಾಪನಾ ಪ್ರಕ್ರಿಯೆಯ ಬಗೆಗಿನ ವಿವರವಾದ ದಸ್ತಾವೇಜನ್ನು ಒದಗಿಸುತ್ತದೆ.
2. ವರ್ಚುವಲೈಸೇಶನ್
ಪ್ಯಾರಾ-ವರ್ಚುವಲೈಸ್ಡ್ ಚಾಲಕಗಳು
ಪ್ಯಾರಾ-ವರ್ಚುವಲೈಸ್ಡ್ ಚಾಲಕಗಳು (ವಿರ್ಟಿಯೊ ಚಾಲಕಗಳು) ವರ್ಚುವಲ್ ಗಣಕದ ಖಂಡ ಹಾಗು ಜಾಲಬಂಧ ಸಾಧನಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಅತಿಥಿಗಳು ತಮಗೆ ಎಷ್ಟು ಮೆಮೊರಿಯ ಅಗತ್ಯವಿದೆ ಎಂದು ಹೈಪರ್ವೈಸರಿಗೆ ತಿಳಿಸಲು ವಿರ್ಟಿಯೊ ಬಲೂನ್ ಚಾಲಕವು ಅನುವು ಮಾಡಿಕೊಡುತ್ತದೆ. ಬಲೂನ್ ಚಾಲಕದಿಂದಾಗಿ ಅತಿಥೇಯಗಳು ಅತಿಥಿಗಳಿಗೆ ಪರಿಣಾಮಕಾರಿಯಾಗಿ ಮೆಮೊರಿಯನ್ನು ನಿಯೋಜಿಸಲು ಹಾಗು ಬಾಕಿ ಉಳಿದ ಮೆಮೊರಿಯನ್ನು ಇತರೆ ಅತಿಥಿಗಳಲ್ಲಿ ಹಾಗು ಪ್ರಕ್ರಿಯೆಗಳಲ್ಲಿ ಹಂಚಲು ಸಹಾಯವಾಗುತ್ತದೆ. Red Hat Enterprise Linux 5.6 ರಲ್ಲಿ, ವಿರ್ಟಿಯೊ ಬಲೂನ್ ಚಾಲಕವು ಮೆಮೊರಿ ಅಂಕಿ ಅಂಶಗಳನ್ನು ಸಂಗ್ರಹಣೆ ಹಾಗು ವರದಿ ಮಾಡಬಹುದಾಗಿರುತ್ತದೆ.
libvirt
Libvirt ಎನ್ನುವುದು ಹಲವು ಕಾರ್ಯವ್ಯವಸ್ಥೆಗಳಾದ್ಯಂತ ವರ್ಚುವಲೈಸೇಶನ್ ಸಾಮಾರ್ಥ್ಯಗಳೊಂದಿಗೆ ಯಶಸ್ವಿಯಾಗಿ ವ್ಯವಹರಿಸುವ ಒಂದು ಹೈಪರ್ವೈಸರ್ ಮುಕ್ತವಾದ API ಆಗಿದೆ. ಒಂದು ಆತಿಥೇಯದಲ್ಲಿ ವರ್ಚುವಲ್ಗೊಳಿಸಲಾದ ಅತಿಥಿಗಳನ್ನು ಸುರಕ್ಷಿತವಾಗಿ ನಿರ್ವಹಿಸಲು libvirt ಒಂದು ಸಾಮಾನ್ಯವಾದ, ವಿಶಿಷ್ಟವಾದ ಹಾಗು ಸ್ಥಿರವಾದ ಪದರಗಳನ್ನು ಒದಗಿಸುತ್ತದೆ.
Red Hat Enterprise Linux 5.6 ರಲ್ಲಿ, libvirt ಅನ್ನು ಆವೃತ್ತಿ 0.8.2 ಕ್ಕೆ ಅಪ್ಡೇಟ್ ಮಾಡಲಾಗಿದ್ದು, ಇದು sVirt ಅನ್ನು ಶಕ್ತಗೊಳಿಸುತ್ತದೆ. sVirt ಎನ್ನುವುದು Red Hat Enterprise Linux 5 ರಲ್ಲಿ ಸೇರ್ಪಡಿಸಲಾದ ಒಂದು ತಂತ್ರಜ್ಞಾನವಾಗಿದ್ದು ಇದು SELinux ಹಾಗು ವರ್ಚುವಲೈಸೇಶನ್ ಅನ್ನು ಸಂಘಟಿಸುತ್ತದೆ. sVirt ಸುರಕ್ಷತೆಯನ್ನು ಸುಧಾರಿಸುತ್ತದೆ ಹಾಗು ಆತಿಥೇಯ ಅಥವ ಬೇರೊಂದು ವರ್ಚುವಲ್ಗೊಳಿಸಲಾದ ಅತಿಥಿಗಾಗಿ ಒಂದು ದಾಳಿಕಾರಕ ವೆಕ್ಟರ್ ಆಗಿ ಬಳಸಬಹುದಾದ ಹೈಪರ್ವೈಸರಿನ ದೋಷದ ವಿರುದ್ಧ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ.
pvclock ಗಾಗಿ ಜಾಗತಿಕವಾದ ಮೇಳೈಸುವ ಬಿಂದು
pvclock ಎನ್ನುವುದು ಆತಿಥೇಯದ ಗಡಿಯಾರದ ಸಮಯವನ್ನು ಅತಿಥಿಯು ಓದಲು ಶಕ್ತಗೊಳಿಸುತ್ತದೆ. Red Hat Enterprise Linux 5.6 ರಲ್ಲಿ pvclock ಗೆ ಒಂದು ಜಾಗತಿಕ ಮೇಳೈಸುವ ಬಿಂದುವನ್ನು ಸೇರಿಸಲಾಗುತ್ತದೆ, ಇದರಿಂದಾಗಿ ಅತಿಥಿಗಳಿಗೆ ಹೆಚ್ಚು ಸ್ಥಿರವಾದ ಸಮಯವು ದೊರೆಯುತ್ತದೆ.
virtio-serial
virtio-serial ಚಾಲಕವನ್ನು ಸೇರಿಸಲಾಗಿದ್ದು, ಇದು Red Hat Enterprise Linux 6 ಆತಿಥೇಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ Red Hat Enterprise Linux 5.6 ಅತಿಥಿಗಳಲ್ಲಿ vmchanne ಸಾಮರ್ಥ್ಯಗಳನ್ನು ಶಕ್ತಗೊಳಿಸುತ್ತದೆ. VMchannel ಎನ್ನುವುದು ಒಂದು ಆತಿಥೇಯ ಬಳಕೆದಾರಸ್ಥಳ ಹಾಗು ಅತಿಥಿ ಬಳಕೆದಾರಸ್ಥಳದ ನಡುವೆ ವ್ಯವಹರಿಸಲು ಬಳಸಲಾಗುವ ಒಂದು ಸಂವಹನ ವ್ಯವಸ್ಥೆಯಾಗಿದೆ.
3. ಜಾಲಬಂಧ
ಬರ್ಕಲೆ ಇಂಟರ್ನೆಟ್ ನೇಮ್ ಡೊಮೈನ್ (BIND)
ಅಂತರಜಾಲವೂ ಸೇರಿದಂತೆ ಹೆಚ್ಚಿನ ಆಧುನಿಕ ಜಾಲಬಂಧಗಳಲ್ಲಿ, ಬಳಕೆದಾರರು ಗಣಕಗಳನ್ನು ಹೆಸರುಗಳ ಮುಖಾಂತರ ಗುರುತಿಸುತ್ತಾರೆ. ಇದರಿಂದ ಬಳಕೆದಾರರನ್ನು ಜಾಲಬಂಧ ಸಂಪನ್ಮೂಲಕಗಳ ಭಯಹುಟ್ಟಿಸುವ ಅಂಕೆಯ ರೂಪದ ವಿಳಾಸವನ್ನು ನೆನಪಿಟ್ಟುಕೊಳ್ಳುವ ಕೆಲಸದಿಂದ ಮುಕ್ತಗೊಳಿಸುತ್ತದೆ. ಒಂದು ಜಾಲಬಂಧವನ್ನು ಅಂತಹ ಹೆಸರು ಆಧರಿತವಾದ ಸಂಪರ್ಕಗಳು ಒಂದು ಡೊಮೈನ್ ನೇಮ್ ಸರ್ವರ್ (DNS) ಅಥವ ನೇಮ್ಸರ್ವರ್ ಅನ್ನು ಸಿದ್ಧಗೊಳಿಸುವಂತೆ ಜಾಲಬಂಧವನ್ನು ಸಂರಚಿಸುವುದು ಒಂದು ಪರಿಣಾಮಕಾರಿಯಾದ ಕ್ರಮವಾಗಿರುತ್ತದೆ, ಇದು ಜಾಲಬಂಧದಲ್ಲಿನ ಆತಿಥೇಯ ಹೆಸರುಗಳನ್ನು ಅಂಕೆ ರೂಪದ ವಿಳಾಸಗಳಾಗಿಯೂ ಹಾಗು ಅಂಕೆ ರೂಪದ ವಿಳಾಸಗಳನ್ನು ಆತಿಥೇಯ ಹೆಸರುಗಳನ್ನಾಗಿ ಪರಿವರ್ತಿಸುತ್ತದೆ.
ಬರ್ಕಲೆ ಇಂಟರ್ನೆಟ್ ನೇಮ್ ಡೊಮೈನ್ (BIND) ಎನ್ನುವುದು DNS ಪ್ರೊಟೊಕಾಲ್ಗಳನ್ನು ಅನ್ವಯಿಸುವ ಒಂದು ವ್ಯವಸ್ಥೆಯಾಗಿರುತ್ತದೆ. DNS ಪರಿಚಾರಕ, ಒಂದು ರಿಸಾಲ್ವರ್ ಲೈಬ್ರರಿ, ಹಾಗು ಆ DNS ಪರಿಚಾರಕವು ಸರಿಯಾಗಿ ಕೆಲಸ ಮಾಡುತ್ತಿದೆಯೆ ಇಲ್ಲವೆ ಎಂದು ಖಚಿತಪಡಿಸಿಕೊಳ್ಳುವ ಉಪಕರಣವನ್ನು BIND ಹೊಂದಿರುತ್ತದೆ. Red Hat Enterprise Linux 5.6 ಬೀಟಾವು BIND ಅನ್ವಯಿಸುವಿಕೆಯ ಆವೃತ್ತಿ 9.7 ಅನ್ನು ಹೊಂದಿದೆ. ಈ ಅಪ್ಡೇಟ್ ಆದಂತಹ ಪ್ಯಾಕೇಜುಗಳು DNS Security Extensions (DNSSEC) ನಲ್ಲಿನ Next Secure (NSEC3) ನ ಆವೃತ್ತಿಗೆ ಬೆಂಬಲವನ್ನು ಸೇರಿಸುತ್ತದೆ. ಹೆಚ್ಚುವರಿಯಾಗಿ, ಈ ಅಪ್ಡೇಟ್ DNSSEC ನಲ್ಲಿ RSA/SHA-2 ಅಲ್ಗಾರಿತಮ್ಗಳಿಗೆ, ಹಾಗು Transaction Signatures (TSIG) ಗಾಗಿನ HMAC-SHA2 ಅಲ್ಗಾರಿತಮ್ಗಳಿಗೆ ಬೆಂಬಲವನ್ನು ಹೊಂದಿರುತ್ತದೆ.
ಡ್ರಾಪ್ವಾಚ್ ಅನ್ನು ಬಳಸಿಕೊಂಡು ಜಾಲಬಂಧ ದೋಷನಿವಾರಣೆ
ವಿವರವಾದ ಜಾಲಬಂಧ ಪ್ಯಾಕೆಟ್ ಕಾಣೆಯಾಗುವಿಕೆಯನ್ನು ಮೇಲ್ವಿಚಾರಣೆ ನಡೆಸುವ ಸೇವೆಯನ್ನು ಒದಗಿಸುವ Netlink Drop Monitor (DROP_MONITOR) ಅನ್ನು ಹೊಂದಿದೆ. Red Hat Enterprise Linux 5.6 ರಲ್ಲಿ ಡ್ರಾಪ್ ಮೇಲ್ವಿಚಾರಣಾ ಸೇವೆಯನ್ನು ಹೊಂದಿರುವ dropwatch ಸವಲತ್ತನ್ನು ಸೇರಿಸಲಾಗಿದೆ, ಹಾಗು ಫಲಿತಾಂಶವನ್ನು ಬಳಕೆದಾರಸ್ಥಳಕ್ಕೆ ಮರಳಿಸುತ್ತಿದೆ.
ಎತರ್ನೆಟ್ ಬ್ರಿಜ್ ಟ್ಯಾಬ್ಲೆಟ್ಗಳು
ಎತರ್ನೆಟ್ ಬ್ರಿಡ್ಜ್ ಟೇಬಲ್ಸ್ (ebtables) ಎನ್ನುವುದು ಒಂದು ಬ್ರಿಡ್ಜ್ ಮೂಲಕ ಹಾದು ಹೋಗುವ ಜಾಲಬಂಧ ಸಂದಣಿಯನ್ನು ಪಾರದರ್ಶಕವಾಗಿ ಫಿಲ್ಟರ್ ಮಾಡುವ ಒಂದು ಫೈರ್ವಾಲ್ ಉಪಕರಣವಾಗಿದೆ. The filtering possibilities are limited to link layer filtering and basic filtering on higher network layers. ebtables is a new package for the Red Hat Enterprise Linux 5.6 release.
4. ಜಾಲ ಪರಿಚಾರಕಗಳು ಹಾಗು ಸೇವೆಗಳು
ಹೈಪರ್ಟೆಕ್ಸ್ಟ್ ಪ್ರಿಪ್ರೊಸೆಸರ್ (PHP) 5.3
ಹೈಪರ್ಟೆಕ್ಸ್ಟ್ ಪ್ರಿಪ್ರೊಸೆಸರ್ (PHP) ಎನ್ನುವುದು ಒಂದು HTML-ಅಡಕಗೊಳಿಸಲಾದ ಸ್ಕ್ರಿಪ್ಟಿಂಗ್ ಭಾಷೆಯಾಗಿದ್ದು ಇದನ್ನು ಸಾಮಾನ್ಯವಾಗಿ ಅಪಾಚೆ HTTP ಜಾಲ ಪರಿಚಾರಕದಲ್ಲಿ ಬಳಸಲಾಗುತ್ತದೆ. PHP ಯ ಆವೃತ್ತಿ 5.3.2 ಈಗ Red Hat Enterprise Linux 5.6 ಬೀಟಾದಲ್ಲಿ ಪ್ರತ್ಯೇಕವಾದ php53 ಪ್ಯಾಕೇಜ್ ಆಗಿ ಲಭ್ಯವಿರುತ್ತದೆ.
ಸೂಚನೆ
php ಪ್ಯಾಕೇಜ್ PHP ಯ ಆವೃತ್ತಿ 5.1.6 ಅನ್ನು ಒದಗಿಸುತ್ತದೆ, ಹಾಗು Red Hat Enterprise Linux 5.6 ರಲ್ಲಿ ಇದು ಇನ್ನೂ ಸಹ ಲಭ್ಯವಿರುತ್ತದೆ. php53 ಅನ್ನು ಅನುಸ್ಥಾಪಿಸುವ ಮೊದಲು php ಪ್ಯಾಕೇಜ್ ಹಾಗು ಅದಕ್ಕೆ ಲಭ್ಯವಿರುವ ಅವಲಂಬನೆಗಳನ್ನು ತೆಗೆದುಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
mod_nss
mod_nss ಎನ್ನುವುದು Apache ಜಾಲ ಪರಿಚಾರಕಕ್ಕಾಗಿ ಸೆಕ್ಯೂರ್ ಸಾಕೆಟ್ಸ್ ಲೇಯರ್ (SSL) ಹಾಗು ಟ್ರಾನ್ಸ್ಪೋರ್ಟ್ ಲೇಯರ್ ಸೆಕ್ಯುರಿಟಿ (TLS) ಪ್ರೊಟೊಕಾಲ್ಗಳ ಮೂಲಕ ನೆಟ್ವರ್ಕ್ ಸೆಕ್ಯುರಿಟಿ ಲೈಬ್ರರಿಯನ್ನು (NSS) ಬಳಸಿಕೊಂಡು ಸದೃಢವಾದ ಕ್ರಿಪ್ಟೊಗ್ರಾಫಿಯನ್ನು ಒದಗಿಸುತ್ತದೆ. ಈ ಬಿಡುಗಡೆಯಲ್ಲಿ, mod_nss ಅನ್ನು ಆವೃತ್ತಿ 1.0.8 ಕ್ಕೆ ಅಪ್ಡೇಟ್ ಮಾಡಲಾಗಿದ್ದು, ಇದು ಆನ್ಲೈನ್ ಸರ್ಟಿಫಿಕೇಟ್ ಸ್ಟೇಟಸ್ ಪ್ರೊಟೊಕಾಲ್ಗೆ (OCSP) ಬೆಂಬಲವನ್ನು ಒದಗಿಸುತ್ತದೆ
5. ಕಡತವ್ಯವಸ್ಥೆಗಳು ಹಾಗು ಶೇಖರಣೆ
ಫೋರ್ತ್ ಎಕ್ಸ್ಟೆಂಡೆಂಡ್ ಫೈಲ್ಸಿಸ್ಟಮ್ (ext4) ಬೆಂಬಲ
ಫೋರ್ತ್ ಎಕ್ಸ್ಟೆಂಡೆಂಡ್ ಫೈಲ್ಸಿಸ್ಟಮ್ (ext4) ಈಗ Red Hat Enterprise Linux 5.6 ರಲ್ಲಿ ಸಂಪೂರ್ಣವಾಗಿ ಬೆಂಬಲಿತವಾಗಿರುತ್ತದೆ. ext4 ಎನ್ನುವುದು ತರ್ಡ್ ಎಕ್ಸ್ಟೆಂಡೆಡ್ ಫೈಲ್ಸಿಸ್ಟಮ್ (ext3) ಆಧರಿತವಾಗಿದೆ ಹಾಗು ಹಲವಾರು ಸುಧಾರಣೆಗಳನ್ನು ಹೊಂದಿದೆ, ಅವುಗಳೆಂದರೆ: ಬೃಹತ್ ಗಾತ್ರದ ಕಡತಗಳಿಗೆ ಹಾಗು ಆಫ್ಸೆಟ್ಗೆ ಬೆಂಬಲ, ವೇಗವಾಗಿ ಹಾಗು ಹೆಚ್ಚು ಸಕ್ಷಮವಾಗಿ ಡಿಸ್ಕಿನ ಜಾಗವನ್ನು ನಿಯೋಜಿಸುವಿಕೆ, ಒಂದು ಕೋಶದ ಅಡಿಯಲ್ಲಿ ನಿರ್ಮಿಸಬಹುದಾದ ಉಪಕೋಶಗಳಿಗೆ ಯಾವುದೆ ಮಿತಿ ಇಲ್ಲದಿರುವಿಕೆ, ವೇಗವಾಗಿ ಕಡತ ವ್ಯವಸ್ಥೆಯನ್ನು ಪರಿಶೀಲಿಸುವಿಕೆ, ಹಾಗು ಹೆಚ್ಚು ಸದೃಢವಾದ ಜರ್ನಲಿಂಗ್.
Red Hat Enterprise Linux 5.6 ಬೀಟಾದಲ್ಲಿ ext4 ಅನ್ನು ಸಂಪೂರ್ಣ ಬೆಂಬಲಿತವಾದ ಸ್ಥಿತಿಯಲ್ಲಿ ಸೇರಿವುದಕ್ಕೆ ಪೂರಕವಾಗಿ, e4fsprogs ಪ್ಯಾಕೇಜನ್ನು ಅದರ ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ. e4fsprogs ನಲ್ಲಿ ext4 ಕಡತವ್ಯವಸ್ಥೆಯನ್ನು ರಚಿಸಲು, ಮಾರ್ಪಡಿಸಲು, ಪರಿಶೀಲಿಸಲು ಹಾಗು ಸರಿಪಡಿಸಲು ನೆರವಾಗುವ ಉಪಕರಣಗಳು ಇವೆ.
ಸೂಚನೆ
Red Hat Enterprise Linux 5 ರ ಈ ಹಿಂದಿನ ಬಿಡುಗಡೆಗಳಲ್ಲಿ, ext4 ಕಡತವ್ಯವಸ್ಥೆಯನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗಿತ್ತು ಹಾಗು, ಅದರ ಬಿಡುಗಡೆಯ ಹೆಸರಾದ ext4dev ಎಂದೂ ಸಹ ಕರೆಯಲಾಗುತ್ತಿತ್ತು.
5.1. ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ (LVM)
ಪರಿಮಾಣ ನಿರ್ವಹಣೆಯು ತಾರ್ಕಿಕ ಶೇಖರಣಾ ಪರಿಮಾಣಗಳನ್ನು ರಚಿಸುವ ಮೂಲಕ ಭೌತಿಕ ಶೇಖರಣೆಯ ಮೇಲೆ ಒಂದು ಸಂಕ್ಷಿಪ್ತಗೊಳಿಸಲಾದ ಪದರವನ್ನು ನಿರ್ಮಿಸುತ್ತದೆ. ಇದರಿಂದಾಗಿ ಕೇವಲ ಭೌತಿಕ ಶೇಖರಣೆಯನ್ನು ನೇರವಾಗಿ ಬಳಸುವುದು ಮಾತ್ರವಲ್ಲದೆ ಉತ್ತಮವಾದ ಹೊಂದಾಣಿಕೆಯನ್ನೂ ಸಹ ಒದಗಿಸುತ್ತದೆ. Red Hat Enterprise Linux 5.6 ತಾರ್ಕಿಕ ಪರಿಮಾಣಗಳನ್ನು ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ ಬಳಸಿಕೊಂಡು ನಿರ್ವಹಿಸುತ್ತದೆ.
ಹೆಚ್ಚಿನ ಓದಿಗಾಗಿ
ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ ನಿರ್ವಹಣೆ ದಸ್ತಾವೇಜು ಒಂದು ಕ್ಲಸ್ಟರ್ಡ್ ಪರಿಸರದಲ್ಲಿ LVM ಅನ್ನು ಚಲಾಯಿಸುವ ಕುರಿತಾದ ಮಾಹಿತಿಯೊಂದಿಗೆ LVM ತಾರ್ಕಿಕ ಪರಿಮಾಣ ನಿರ್ವಾಹಕವನ್ನು ವಿವರಿಸುತ್ತದೆ.
ಮಿರರ್ ದಾಖಲೆಗಳನ್ನು ತದ್ರೂಪುಗೊಳಿಸುವಿಕೆ
LVM ಒಂದು ಸಣ್ಣ ದಾಖಲೆಯನ್ನು ಇರಿಸಿಕೊಳ್ಳುತ್ತದೆ (ಬೇರೊಂದು ಸಾಧನದಲ್ಲಿ), ಇದರ ಮೂಲಕ ಮಿರರ್ ಅಥವ ಮಿರರುಗಳೊಂದಿಗೆ ಯಾವ ಸ್ಥಳಗಳು ಮೇಳೈಸುತ್ತವೆ ಎನ್ನುವ ದಾಖಲೆಯನ್ನು ಇರಿಸಿಕೊಳ್ಳುತ್ತದೆ. Red Hat Enterprise Linux 5.6 ರಲ್ಲಿ ಈ ದಾಖಲೆ ಸಾಧನದ ತದ್ರೂಪುಗೊಳಿಸುವ ಅವಕಾಶವಿರುತ್ತದೆ.
ಒಂದು ಮಿರರಿನ ರಿಡಂಡೆಂಟ್ ಚಿತ್ರಿಕೆಯನ್ನು ವಿಭಜಿಸುವಿಕೆ
Red Hat Enterprise Linux 5.6 ರಲ್ಲಿ, lvconvert ಆಜ್ಞೆಯಲ್ಲಿನ --splitmirrors ಆರ್ಗ್ಯುಮೆಂಟ್ ಬಳಕೆಯನ್ನು ಪರಿಚಯಿಸಲಾಗುತ್ತದೆ, ಇದನ್ನು ಬಳಸಿಕೊಂಡು ತದ್ರೂಪುಗೊಳಿಸಲಾದ ತಾರ್ಕಿಕ ಪರಿಮಾಣದ ರಿಡಂಡೆಂಟ್ ಚಿತ್ರಿಕೆಯನ್ನು ವಿಭಜಿಸಿ ಹೊಸತೊಂದು ತಾರ್ಕಿಕ ಪರಿಮಾಣವನ್ನು ರಚಿಸಲು ಸಾಧ್ಯವಿರುತ್ತದೆ.
ಸಂರಚನೆ
Red Hat Enterprise Linux 5.6 ರಲ್ಲಿನ LVM ನಲ್ಲಿ ಪೂರ್ವನಿಯೋಜಿತ ದತ್ತಾಂಶ ಹೊಂದಿಕೆ ಹಾಗು ಪರಿಮಾಣ ಸಮೂಹ ಮೆಟಾಡೇಟಾಕ್ಕಾಗಿ ಹೆಚ್ಚುವರಿ ಸಂರಚನಾ ಆಯ್ಕೆಗಳನ್ನೂ ಸಹ ಒದಗಿಸುತ್ತದೆ.
6. ದೃಢೀಕರಣ ಹಾಗು ಅಂತರಕಾರ್ಯನಿರ್ವಹಿಸುವಿಕೆ
ಸಿಸ್ಟಮ್ ಸೆಕ್ಯುರಿಟಿ ಸರ್ವಿಸಸ್ ಡೆಮನ್ (SSSD)
ಸಿಸ್ಟಮ್ ಸೆಕ್ಯುರಿಟಿ ಸರ್ವಿಸಸ್ ಡೀಮನ್ (SSSD) ಎನ್ನುವುದು Red Hat Enterprise Linux 5.6 ರಲ್ಲಿನ ಹೊಸ ಸವಲತ್ತು ಆಗಿದ್ದು, ಇದು ಗುರುತಿಸುವಿಕೆ ಹಾಗು ದೃಢೀಕರಣದ ಕೇಂದ್ರ ನಿರ್ವಹಣೆಗಾಗಿ ಹಲವು ಸೇವೆಗಳ ನಿಯೋಜನೆಯನ್ನು ಮಾಡುತ್ತದೆ. ಗುರುತಿಸುವಿಕೆ ಹಾಗು ದೃಢೀಕರಣವನ್ನು ಕೇಂದ್ರೀಕೃತಗೊಳಿಸುವುದರಿಂದ ಗುರುತುಗಳು (ಐಡೆಂಟಿಟಿ) ಸ್ಥಳೀಯವಾಗಿ ಶೇಖರಿಸಿಡಲು ಅವಕಾಶವಾಗುತ್ತದೆ, ಇದರಿಂದಾಗಿ ಬಳಕೆದಾರರು ಪರಿಚಾರಕದೊಂದಿಗಿನ ಸಂಪರ್ಕಕ್ಕೆ ತಡೆಯುಂಟಾದರೂ ಸಹ ಗುರುತಿಸಲು ಸಾಧ್ಯವಿರುತ್ತದೆ. SSSDಯು ಹಲವು ಬಗೆಯ ಗುರುತಿಸುವಿಕೆ ಹಾಗು ದೃಢೀಕರಣವನ್ನು ಬೆಂಬಲಿಸುತ್ತದೆ, ಅವುಗಳೆಂದರೆ: Red Hat Directory Server, Active Directory, OpenLDAP, 389, Kerberos ಹಾಗು LDAP.
Samba
Samba ಎನ್ನುವುದು ಕಡತಗಳನ್ನು, ಮುದ್ರಕಗಳನ್ನು ಹಾಗು ಇತರೆ ಮಾಹಿತಿಗಳನ್ನು ಹಂಚಿಕೊಳ್ಳಲು, TCP/IP (NetBT) ಮೂಲಕ NetBIOS ಅನ್ನು ಬಳಸುವ ಒಂದು ಪ್ರೊಗ್ರಾಮ್ಗಳ ಸೂಟ್ ಆಗಿರುತ್ತದೆ. ಈ ಪ್ಯಾಕೇಜ್ ಒಂದು ಸರ್ವರ್ ಮೆಸೇಜ್ ಬ್ಲಾಕ್ ಅಥವ SMB ಪರಿಚಾರಕವನ್ನು ಒದಗಿಸಲಿದ್ದು (ಕಾಮನ್ ಇಂಟರ್ನೆಟ್ ಫೈಲ್ ಸಿಸ್ಟಮ್ ಅಥವ CIFS ಪರಿಚಾರಕ ಎಂದೂ ಸಹ ಕರೆಯಲಾಗುವ) ಇದು SMB/CIFS ಕ್ಲೈಂಟ್ಗಳಿಗೆ ಜಾಲಬಂಧ ಸೇವೆಗಳನ್ನು ಒದಗಿಸುತ್ತದೆ.
ಪರಸ್ಪರ ಪ್ರತ್ಯೇಕವಾದ Samba ವು (samba ಅಥವ samba3x ಇಂದ ಒದಗಿಸಲಾದ) ಲಭ್ಯವಿದೆ. Red Hat Enterprise Linux 5.6 ರಲ್ಲಿ samba3x ಅನ್ನು ಆವೃತ್ತಿ 3.5.4 ಕ್ಕೆ ಅಪ್ಡೇಟ್ ಮಾಡಲಾಗಿದ್ದು, ಇದು LDAP-ಆಧರಿತವಾದ ಶೇಖರಣೆಗಳಿಗೆ ಹಾಗು IPv6 ಮುಖಾಂತರದ Winbind ಗೆ ಹೆಚ್ಚುವರಿಯಾಗಿ ಬೆಂಬಲವನ್ನು ಸೇರಿಸುತ್ತದೆ.
7. ಗಣಕತೆರೆ
ಜಾಪನೀಸ್ IPA ಅಕ್ಷರಶೈಲಿ ಬೆಂಬಲ
IPA ಅಕ್ಷರಶೈಲಿ ಎನ್ನುವುದು ಒಂದು JIS X 0213:2004 ಹೊಂದಿಕೆಯಾದ ಜಾಪನೀಸ್ OpenType ಅಕ್ಷರಶೈಲಿಯಾಗಿದ್ದು ಇದನ್ನು Information-Technology Promotion Agency, Japan ಇಂದ ಒದಗಿಸಲಾಗಿದೆ. Red Hat Enterprise Linux 5.6 ರಲ್ಲಿ ಹೊಸತಾದ ipa-gothic-fonts ಪ್ಯಾಕೇಜು, ಗೋತಿಕ್ (sans-serif) ಬಗೆಯ ಅಕ್ಷರಶೈಲಿ ಹಾಗು ipa-mincho-fonts ಪ್ಯಾಕೇಜು, Mincho-ಬಗೆಯ ಅಕ್ಷರಶೈಲಿಯನ್ನು ಸೇರಿಸಲಾಗಿದೆ.
ಟ್ಯಾಬ್ಲೆಟ್ ಬೆಂಬಲ
Red Hat Enterprise Linux 5.6 ರಲ್ಲಿ Wacom Cintiq 21UX2 ಗ್ರಾಫಿಕ್ಸ್ ಟ್ಯಾಬ್ಲೆಟ್ಗೆ ಬೆಂಬಲವನ್ನು ಹೊಂದಿದೆ.
ghostscript
ಗೋಸ್ಟ್ಸ್ಕ್ರಿಪ್ಟ್ ಸೂಟ್ ಒಂದು PostScript(TM) ಇಂಟರ್ಪ್ರಿಟರ್ ಅನ್ನು ಒದಗಿಸುತ್ತದೆ, ಇದು ಒಂದು C ವಿಧಾನಗಳ ಸೆಟ್ (PostScript ಭಾಷೆಯಲ್ಲಿ ಗ್ರಾಫಿಕ್ಸ್ ಸಾಮರ್ಥ್ಯಗಳನ್ನು ಅನ್ವಯಿಸುವ ಒಂದು ಗೋಸ್ಟ್ಸ್ಕ್ರಿಪ್ಟ್ ಲೈಬ್ರರಿಯಾಗಿದೆ), ಹಾಗು ಇಂಟರ್-ಪ್ರಿಟರ್ PDF ಕಡತಗಳನ್ನು ಒದಗಿಸುತ್ತದೆ. PostScript ಸಂಕೇತವನ್ನು ಗೋಸ್ಟ್ಸ್ಕ್ರಿಪ್ಟ್ ಹೆಚ್ಚಿನ ಮುದ್ರಕಗಳು ಹಾಗು ಪ್ರದರ್ಶಕಗಳು ಅರ್ಥ ಮಾಡಿಕೊಳ್ಳುವಂತಹ ಹಲವಾರು ಸಾಮಾನ್ಯವಾದ, ಬಿಟ್ಮ್ಯಾಪ್ ಮಾಡಲಾದ ರಚನೆಯಾಗಿ ಆಗಿ ಅನುವಾದಿಸುತ್ತದೆ. ಇದರಿಂದಾಗಿ ಬಳಕೆದಾರರು PostScript ಕಡತಗಳನ್ನು ನೋಡಲು ಹಾಗು ಅವುಗಳನ್ನು PostScript ಅಲ್ಲದ ಮುದ್ರಕಗಳಲ್ಲಿ ಮುದ್ರಿಸಲು ಸಾಧ್ಯವಿರುತ್ತದೆ.
Red Hat Enterprise Linux 5.6 ರಲ್ಲಿ, ghostscript ಅನ್ನು ಆವೃತ್ತಿ 8.70 ಕ್ಕೆ ಅಪ್ಡೇಟ್ ಮಾಡಲಾಗಿದ್ದು, ಇದು OPVP 1.0 ಗೆ ಬೆಂಬಲವನ್ನು ಒದಗಿಸುತ್ತದೆ.
8. ಕರ್ನಲ್
Red Hat Enterprise Linux 5.6 ರಲ್ಲಿ ಸೇರಿಸಲಾದ ಕರ್ನಲ್ ನೂರಾರು ದೋಷ ನಿವಾರಣೆಗಳು ಹಾಗು ಲಿನಕ್ಸ್ ಕರ್ನಲ್ಗೆ ಮಾಡಲಾದ ವರ್ಧನೆಗಳನ್ನು ಹೊಂದಿರುತ್ತದೆ.ಈ ಬಿಡುಗಡೆಯಲ್ಲಿನ ಲಿನಕ್ಸ್ ಕರ್ನಲ್ನ ಪ್ರತಿಯೊಂದು ದೋಷ ನಿವಾರಣೆ ಹಾಗು ವರ್ಧನೆಯ ಕುರಿತಾದ ವಿವರಗಳಿಗಾಗಿ Red Hat Enterprise Linux 5.6 Technical Notes ಅನ್ನು ನೋಡಿ.
ಈ ಬಿಡುಗಡೆಯಲ್ಲಿನ ಹೆಚ್ಚು ಗಮನಾರ್ಹವಾದ ಅಪ್ಡೇಟ್ಗಳು ಹಾಗು ಕರ್ನಲ್ಗೆ ಮಾಡಲಾದ ಸೇರ್ಪಡೆಗಳೆಂದರೆ:
ಟ್ರಸ್ಟೆಡ್ ಪ್ಲಾಟ್ಫಾರ್ಮ್ ಮಾಡ್ಯೂಲ್ (TPM) ಮೈಕ್ರೊಕಂಟ್ರೋಲರುಗಳಿಗಾಗಿನ tpm_tis ಚಾಲಕವು ಈಗ ಬೂಟ್ ಸಮಯದಲ್ಲಿ ಸ್ವಯಂಚಾಲಿತವಾಗಿ ಲೋಡ್ ಆಗುತ್ತದೆ.
AMD ಸಂಸ್ಕಾರಕಗಳಲ್ಲಿ ಆಕ್ಚುವಲ್ ಪರ್ಫಾರ್ಮೆನ್ಸ್ ಕ್ಲಾಕ್ ಕೌಂಟರ್ (APERF) ಹಾಗು ಮ್ಯಾಕ್ಸಿಮಮ್ ಕ್ವಾಲಿಫೈಡ್ ಪರ್ಫಾರ್ಮೆನ್ಸ್ ಕ್ಲಾಕ್ ಕೌಂಟರ್ (MPERF) ಮಾಡೆಲ್-ಸ್ಪೆಸಿಫಿಕ್ ರಿಜಿಸ್ಟರ್ಸ್ (MSRs) ಗೆ ಬೆಂಬಲವನ್ನು ಸೇರಿಸಲಾಗಿದೆ.
ITE-887x ಚಿಪ್ಗಳಿಗಾಗಿನ ಬೆಂಬಲ
Power PC ಪ್ಲಾಟ್ಫಾರ್ಮುಗಳಿಗಾಗಿ VIO ವಿದ್ಯುಚ್ಛಕ್ತಿ ನಿರ್ವಹಣಾ ಬೆಂಬಲ
qeth ಚಾಲಕದಲ್ಲಿ OSX ಹಾಗು OSM OSA CHPID ಗಳಿಗೆ ಬೆಂಬಲವನ್ನು ಸೇರಿಸಲಾಗಿದೆ
ಅಡ್ವಾನ್ಸಡ್ ಲಿನಕ್ಸ್ ಸೌಂಡ್ ಆರ್ಕಿಟೆಕ್ಚರ್ - ಹೈ ಡೆಫಿನೇಶನ್ ಆಡಿಯೊ (ALSA-HDA) ಚಾಲಕಗಳನ್ನು ಅಪ್ಡೇಟ್ ಮಾಡಲಾಗಿದೆ.
SystemTap ನ ಆವೃತ್ತಿ 1.3, ಸಂಘಟಿತವಾದ ಕಂಪೈಲ್-ಪರಿಚಾರಕ ಕ್ಲೈಂಟ್, ಸ್ವಯಂಚಾಲಿತವಾದ ಪ್ರೆಟಿ-ಪ್ರಿಂಟಿಂಗ್ ರಚನೆ, ವೇಗವಾದ ಹಾಗು ಸುಧಾರಿತ ಸ್ಟಾಕ್ ಬ್ಯಾಕ್ಟ್ರೇಸ್ಗಳು, ಹಾಗು ಹೊಸ ಮಾದರಿ ಸ್ಕ್ರಿಪ್ಟುಗಳನ್ನು ಹೊಂದಿದೆ.
ಕರ್ನಲ್ ಪ್ರೋಬ್ಗಳ (kprobes) ಅನ್ವಯಿಸುವಿಕೆಯಲ್ಲಿನ ಒಂದು ಅಪ್ಡೇಟ್
ಪ್ರತಿ-ಕಾರ್ಯದ ಅಂಕಿಅಂಶಗಳ ಸಂಪರ್ಕಸಾಧನವನ್ನು (taskstats) ಅಪ್ಡೇಟ್ ಮಾಡಲಾಗಿದೆ
TCP ಕ್ಯೂಬಿಕ್ ಕಂಜೆಸ್ಟೆಡ್ ನಿಯಂತ್ರಣಕ್ಕೆ ಹೊಸ ಬೆಂಬಲ
ಜಾಲಬಂಧದ ಜೋಡಣೆಯಲ್ಲಿನ ಒಂದು ಪ್ಯಾಕೇಟ್ ಶೆಡ್ಯೂಲರಿಗಾಗಿ ಹೊಸ ಬೆಂಬಲ
ಬಳಕೆದಾರರಿಗೆ ತರ್ಡ್-ಪಾರ್ಟಿ ಅನ್ವಯಗಳಿಗೆ ಸಂಪರ್ಕಸ್ಥಾನಗಳನ್ನು ಕಾದಿರಿಸಲು, ಹಾಗು ಕೇಡು ಮಾಡುವ ಸಂಪರ್ಕಸ್ಥಾನಗಳನ್ನು ಬ್ಲಾಕ್ಲಿಸ್ಟ್ ಮಾಡಲು ಎರಡು ಜಾಲಬಂಧ ಟ್ಯೂನಿಂಗ್ ನಿಯತಾಂಕಗಳಾದಂತಹ, ip_local_reserved_ports ಹಾಗು ip_local_port_range ನಿಯತಾಂಕಗಳನ್ನು ಹೊಂದಿರುತ್ತದೆ.
/dev/zero device ನಲ್ಲಿನ ZERO_PAGE mmap ಅನ್ನು /proc/sys/vm/vm_devzero_optimized ಕಡೆಗಣಿಸುತ್ತದೆ
iSCSI ಆರಂಭಕ, ಹಾಗು iSNS ಪರಿಚಾರಕದಲ್ಲಿನ iSNSಗಾಗಿನ ಸುಧಾರಣೆಗಳು
kABI ಅಪ್ಡೇಟ್ಗಳು
9. ಸಾಧನ ಚಾಲಕಗಳು
9.1. ಜಾಲಬಂಧ ಸಾಧನ ಚಾಲಕಗಳು
I/O AT (I/O Acceleration Technology) ಹಾಗು DCA ಚಾಲಕಗಳನ್ನು ಅಪ್ಡೇಟ್ ಮಾಡಲಾಗಿದೆ. I/O AT ಎನ್ನುವುದು Intel ನಿಂದ ನಿರ್ಮಿತವಾದ, ಕಾಪಿ ಕಾರ್ಯಗಳನ್ನು ಆಫ್ಲೋಡ್ ಮಾಡುವ ಮೂಲಕ ಜಾಲಬಂಧ ತ್ರೂಪುಟ್ ಅನ್ನು ಸುಧಾರಿಸುವಂತಹ ತಂತ್ರಗಳ ಒಂದು ಸಂಗ್ರಹವಾಗಿದೆ. Direct Cache Access (DCA) ಎನ್ನುವುದು I/O AT ಸಂಸ್ಕಾರಕದ ಕ್ಯಾಶೆಗಳಿಗೆ ನೇರವಾಗಿ ದತ್ತಾಂಶವನ್ನು ತಲುಪಿಸುವ ಒಂದು ಸೌಕರ್ಯವಾಗಿದೆ.
ZyDAS ZD1211(b) 802.11a/b/g USB WLAN ಸಾಧನಕ್ಕಾಗಿನ zd1211 ಅನ್ನು ಈಗ Red Hat Enterprise Linux 5.6 ಬೀಟಾದಲ್ಲಿ ಈಗ ಬೆಂಬಲಿಸಲಾಗುತ್ತದೆ.
qlcnic ಚಾಲಕವನ್ನು ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ
ServerEngines BladeEngine2 10Gbps ಜಾಲಬಂಧ ಸಾಧನಗಳಿಗಾಗಿನ be2net ಚಾಲಕವನ್ನು ಅಪ್ಡೇಟ್ ಮಾಡಲಾಗಿದೆ ಆವೃತ್ತಿ 2.102.512r ಗೆ ಅಪ್ಡೇಟ್ ಮಾಡಲಾಗಿದೆ
Broadcom NetXtreme II ಜಾಲಬಂಧ ಸಾಧನಗಳಿಗಾಗಿನ bnx2 ಚಾಲಕವನ್ನು ಆವೃತ್ತಿ 2.0.8 ಗೆ ಅಪ್ಡೇಟ್ ಮಾಡಲಾಗಿದೆ
Broadcom Everest ಜಾಲಬಂಧ ಸಾಧನಕ್ಕಾಗಿನ bnx2x ಚಾಲಕವನ್ನು ಆವೃತ್ತಿ 1.52.53-4 ಗೆ ಅಪ್ಡೇಟ್ ಮಾಡಲಾಗಿದೆ
Intel PRO/1000 ಇತರ್ನೆಟ್ ಸಾಧನಗಳಿಗಾಗಿನ e1000e ಚಾಲಕವನ್ನು ಅಪ್ಸ್ಟ್ರೀಮ್ ಆವೃತ್ತಿ 1.2.7-k2 ಕ್ಕೆ ಅಪ್ಡೇಟ್ ಮಾಡಲಾಗಿದೆ
Cisco 10G ಇತರ್ನೆಟ್ ಸಾಧನಗಳಿಗಾಗಿನ enic ಚಾಲಕವನ್ನು ಆವೃತ್ತಿ 1.4.1.2 ಗೆ ಅಪ್ಡೇಟ್ ಮಾಡಲಾಗಿದೆ.
Intel Gigabit ಇತರ್ನೆಟ್ ಅಡಾಪ್ಟರುಗಳಿಗಾಗಿನ igb ಚಾಲಕವನ್ನು ಅಪ್ಡೇಟ್ ಮಾಡಲಾಗಿದ್ದು, ಇದು PCI-AER ಗೆ ಬೆಂಬಲವನ್ನು ಒದಗಿಸುತ್ತದೆ
Intel 10 Gigabit PCI Express ಜಾಲಬಂಧ ಸಾಧನಗಳಿಗಾಗಿನ ixgbe ಚಾಲಕವನ್ನು ಆವೃತ್ತಿ 2.0.84-k2 ಕ್ಕೆ ಅಪ್ಡೇಟ್ ಮಾಡಲಾಗಿದೆ
NetXen Multi port (1/10) Gigabit ಜಾಲಬಂಧ ಸಾಧನಗಳಿಗಾಗಿನ netxen ಚಾಲಕವನ್ನು ಆವೃತ್ತಿ 4.0.73 ಅಪ್ಡೇಟ್ ಮಾಡಲಾಗಿದೆ
QLogic 10 Gigabit PCI-E ಎತರ್ನೆಟ್ qlge ಚಾಲಕವನ್ನು ಆವೃತ್ತಿ 1.00.00.25 ಗೆ ಅಪ್ಡೇಟ್ ಮಾಡಲಾಗಿದೆ
Solarflare ಚಾಲಕವನ್ನು (sfc) ಆವೃತ್ತಿ 2.6.36-4c1 ಗೆ ಅಪ್ಡೇಟ್ ಮಾಡಲಾಗಿದೆ
Broadcom Tigon3 ಎತರ್ನೆಟ್ ಸಾಧನಗಳಿಗಾಗಿನ tg3 ಚಾಲಕವನ್ನು ಆವೃತ್ತಿ 3.108+ ಗೆ ಅಪ್ಡೇಟ್ ಮಾಡಲಾಗಿದೆ
Neterion's X3100 Series 10GbE PCIe ಸಾಧನಗಳಿಗಾಗಿನ vxge ಚಾಲಕವನ್ನು ಆವೃತ್ತಿ 2.0.8.20182-k ಗೆ ಅಪ್ಡೇಟ್ ಮಾಡಲಾಗಿದೆ
9.2. ಶೇಖರಣಾ ಸಾಧನ ಚಾಲಕಗಳು
HP Smart Array ನಿಯಂತ್ರಕಗಳಿಗಾಗಿನ cciss ಚಾಲಕವನ್ನು 3.6.22.RH1 ಗೆ ಅಪ್ಡೇಟ್ ಮಾಡಲಾಗಿದೆ
qla4xxxqla4xxx ಚಾಲಕವನ್ನು ಆವೃತ್ತಿ 5.02.03.00.05.06-d1 ಗೆ ಅಪ್ಡೇಟ್ ಮಾಡಲಾಗಿದೆ
Broadcom NetXtreme II iSCSI ಜಾಲಬಂಧ ಸಾಧನಗಳಿಗಾಗಿನ bnx2i ಚಾಲಕವನ್ನು ಆವೃತ್ತಿ 2.1.3 ಗೆ ಅಪ್ಡೇಟ್ ಮಾಡಲಾಗಿದೆ
ServerEngines BladeEngine 2 Open iSCSI ಸಾಧನಗಳಿಗಾಗಿನ be2iscsi ಚಾಲಕವನ್ನು ಅಪ್ಡೇಟ್ ಮಾಡಲಾಗಿದೆ.
Emulex ಫೈಬರ್ ಚಾನಲ್ ಹೋಸ್ಟ್ ಬಸ್ ಅಡಾಪ್ಟರುಗಳಿಗಾಗಿನ lpfc ಚಾಲಕವನ್ನು ಆವೃತ್ತಿ 8.2.0.87 ಗೆ ಅಪ್ಡೇಟ್ ಮಾಡಲಾಗಿದೆ
ipr ಚಾಲಕವನ್ನು ಆವೃತ್ತಿ 2.2.0.4 ಕ್ಕೆ ಅಪ್ಡೇಟ್ ಮಾಡಲಾಗಿದೆ
3w-sas ಚಾಲಕವನ್ನು 3.26.00.028-2.6.18RH ಗೆ ಅಪ್ಡೇಟ್ ಮಾಡಲಾಗಿದೆ
3w-xxxx ಚಾಲಕವನ್ನು 3.26.00.028-2.6.18RH ಗೆ ಅಪ್ಡೇಟ್ ಮಾಡಲಾಗಿದೆ
Chelsio ಹೋಸ್ಟ್ ಬಸ್ ಅಡಾಪ್ಟರುಗಳಿಗಾಗಿನ (HBAs) cxgb3i ಚಾಲಕವನ್ನು ಅಪ್ಡೇಟ್ ಮಾಡಲಾಗಿದೆ.
LSI MegaRAID SAS ನಿಯಂತ್ರಕಗಳಿಗಾಗಿನ megaraid_sas ಚಾಲಕವನ್ನು ಆವೃತ್ತಿ 4.17 ಗೆ ಅಪ್ಡೇಟ್ ಮಾಡಲಾಗಿದೆ.
LSI ಯ SAS-2 ಪಂಗಡದ ಅಡಾಪ್ಟರುಗಳನ್ನು ಬೆಂಬಲಿಸುವ mpt2sas ಎಂಬ ಚಾಲಕವನ್ನು ಆವೃತ್ತಿ 05.101.00.02 ಗೆ ಅಪ್ಡೇಟ್ ಮಾಡಲಾಗಿದೆ.
QLogic Fibre Channel HBAಗಳಿಗಾಗಿನ qla2xxx ಚಾಲಕವನ್ನು ಆವೃತ್ತಿ 8.03.01.05.05.06-k ಗೆ ಅಪ್ಡೇಟ್ ಮಾಡಲಾಗಿದೆ.
9.3. ಗಣಕತೆರೆ ಚಾಲಕ ಅಪ್ಡೇಟ್ಗಳು
Intel ನ ಇಂಟಿಗ್ರೇಟೆಡ್ ಪ್ರದರ್ಶನ ಸಾಧನಗಳಿಗಾಗಿನ i810 ಚಾಲಕಗಳಿಗೆ ಬೆಂಬಲ ಒದಗಿಸುವಂತೆ ಅಪ್ಡೇಟ್ ಮಾಡಲಾಗಿದ್ದು ಇದು IronLake ಗ್ರಾಫಿಕ್ಸಿಗೆ ಬೆಂಬಲವನ್ನು ಸೇರಿಸುತ್ತದೆ.
sis ಚಾಲಕವನ್ನು Volari Z9s ಸಾಧನಗಳಿಗೆ ಬೆಂಬಲ ಒದಗಿಸುವಂತೆ ಅಪ್ಡೇಟ್ ಮಾಡಲಾಗಿದೆ.
Matrox ವೀಡಿಯೊ ಸಾಧನಗಳಿಗಾಗಿನ mga ಚಾಲಕವನ್ನು ಅಪ್ಡೇಟ್ ಮಾಡಲಾಗಿದ್ದು ಇದು G200eH ಸಾಧನಕ್ಕೆ ಬೆಂಬಲವನ್ನು ಒದಗಿಸುತ್ತದೆ.
9.4. ಮುದ್ರಕ ಚಾಲಕಗಳು
HPLIP (Hewlett-Packard Linux Imaging and Printing Project) ಪ್ಯಾಕೇಜ್ HP ಮುದ್ರಕಗಳು ಹಾಗು ಬಹು-ಕಾರ್ಯ ಬಾಹ್ಯಸಾಧನಗಳಿಗೆ ಅಗತ್ಯವಿರುವ ಚಾಲಕಗಳನ್ನು ಒದಗಿಸುತ್ತದೆ. HPLIP ನ ಆವೃತ್ತಿ 3.9.8 ಯು ಈಗ ಒಂದು ಪ್ರತ್ಯೇಕ hplip3 ಪ್ಯಾಕೇಜಿನಲ್ಲಿ ಲಭ್ಯವಿದೆ. hplip3 ಪ್ಯಾಕೇಜ್ Red Hat Enterprise Linux 5 ರೊಂದಿಗೆ ನೀಡಲಾದ ಆವೃತ್ತಿಯ ಜೊತೆಗೆ ಅನುಸ್ಥಾಪಿಸಬಹುದಾದ ಒಂದು ಹೊಸ ಆವೃತ್ತಿಯನ್ನು HPLIP ನ ಒದಗಿಸುತ್ತದೆ ಎನ್ನುವುದನ್ನು ನೆನಪಿಡಿ. ಸೂಕ್ತವಾದ ಆಜ್ಞಾಸಾಲಿನ ಸವಲತ್ತುಗಳನ್ನು hp- ಪ್ರಿಫಿಕ್ಸಿನ ಬದಲಿಗೆ, hp3- ಅನ್ನು ಬಳಸಿಕೊಂಡು ಪಡೆಯಬಹುದಾಗಿದೆ, ಉದಾಹರಣೆಗೆ : hp3-setup.
10. ವಿಕಸನಾ ಉಪಕರಣಗಳು
GNU gettext
GNU gettext ಎನ್ನುವುದು ಪ್ರೊಗ್ರಾಮ್ಗಳಲ್ಲಿ ಬಹು-ಭಾಷಾ ಸಂಬಂಧಿ ಸಂದೇಶಗಳನ್ನು ಉತ್ಪಾದಿಸಲು ಉಪಕರಣಗಳನ್ನು ಹಾಗು ದಸ್ತಾವೇಜನ್ನು ಒದಗಿಸುವ ಒಂದು ಪ್ಯಾಕೇಜ್ ಆಗಿದೆ. Red Hat Enterprise Linux 5.6 ರಲ್ಲಿ, gettext ಅನ್ನು ಆವೃತ್ತಿ 0.17 ಕ್ಕೆ ಅಪ್ಡೇಟ್ ಮಾಡಲಾಗಿದೆ. ಜಾವಾ ಹಾಗು libintl.jar ಬೆಂಬಲವನ್ನು ಅಪ್ಡೇಟ್ ಮಾಡಲಾದ gettext ಪ್ಯಾಕೇಜಿನಿಂದ ತೆಗೆದುಹಾಕಲಾಗಿದೆ.
ಸಬ್ವರ್ಶನ್
ಸಬ್ವರ್ಶನ್ (SVN) ಎನ್ನುವುದು ಮಾಡಲಾದ ಎಲ್ಲಾ ಬದಲಾವಣೆಗಳ ಇತಿಹಾಸವನ್ನು ಇರಿಸಿಕೊಂಡು ಒಂದು ಅಥವ ಹೆಚ್ಚಿನ ಬಳಕೆದಾರರು ಕಡತಗಳ ಹಾಗು ಕೋಶಗಳ ಶ್ರೇಣಿ ವ್ಯವಸ್ಥೆಯ (ಹೈರಾರ್ಕಿ) ವಿಕಸನೆ ಹಾಗು ಮೇಲ್ವಿಚಾರಣೆಯಲ್ಲಿ ಸಹಭಾಗಿತ್ವ ನಡೆಸುವುದನ್ನು ಶಕ್ತಗೊಳಿಸುವ ಒಂದು ಸಮಕಾಲೀನವಾದ ವರ್ಶನ್ ನಿಯಂತ್ರಣ ವ್ಯವಸ್ಥೆಯಾಗಿದೆ. Red Hat Enterprise Linux 5.6 ರಲ್ಲಿನ ಸಬ್ವರ್ಶನ್ ಅನ್ನು ಆವೃತ್ತಿ 1.6.11 ಕ್ಕೆ ಅಪ್ಡೇಟ್ ಮಾಡಲಾಗಿದ್ದು, ಇದು ಹೊಸ ವಿಲೀನವನ್ನು ಜಾಡು ಇರಿಸುವ ಹಾಗು ಸಂವಾದಾತ್ಮಕವಾಗಿ ಭಿನ್ನಾಭಿಪ್ರಾಯವನ್ನು ಪರಿಹರಿಸುವ ಸವಲತ್ತನ್ನು ಹೊಂದಿದೆ.
GDB ಯಲ್ಲಿನ ಪೈತಾನ್ ಸ್ಕ್ರಿಪ್ಟಿಂಗ್
ಈ ಅಪ್ಡೇಟ್ GNU ಪ್ರಾಜೆಕ್ಟ್ ಡೀಬಗ್ಗರ್ (GDB) ನ ಹೊಸ ಆವೃತ್ತಿಯನ್ನು ಒದಗಿಸಲಿದ್ದು, ಇದು ಹೊಸ ಪೈತಾನ್ API ಅನ್ನು ಹೊಂದಿರುತ್ತದೆ. ಈ API, ಪೈತಾನ್ ಪ್ರೊಗ್ರಾಮಿಂಗ್ ಭಾಷೆಯಲ್ಲಿ ಬರೆಯಲಾದ ಸ್ಕ್ರಿಪ್ಟುಗಳನ್ನು ಬಳಸಿಕೊಂಡು GDB ಸ್ವಯಂಚಾಲಿತಗೊಳ್ಳುವಂತೆ ಮಾಡುತ್ತದೆ.
ಪೈತಾನ್ API ನಲ್ಲಿರುವ ಒಂದು ಗಮನಾರ್ಹ ಸವಲತ್ತೆಂದರೆ ಪೈತಾನ್ ಸ್ಕ್ರಿಪ್ಟನ್ನು ಬಳಸಿಕೊಂಡು GDB ಔಟ್ಪುಟ್ ಅನ್ನು (ಸಾಮಾನ್ಯವಾಗಿ ಪ್ರೆಟಿ-ಪ್ರಿಂಟಿಂಗ್ ಎಂದು ಕರೆಯಲಾಗುತ್ತದೆ) ಫಾರ್ಮ್ಯಾಟ್ ಮಾಡುವ ಸಾಮರ್ಥ್ಯ. ಈ ಹಿಂದೆ GDB ಯಲ್ಲಿ, ಒಂದು ಶಿಷ್ಟವಾದ ಮುದ್ರಣ ಸಿದ್ಧತೆಗಳನ್ನು ಬಳಸಿಕೊಂಡು ಪ್ರೆಟಿ-ಪ್ರಿಂಟಿಂಗ್ ಅನ್ನು ಸಂರಚಿಸಲಾಗಿತ್ತು.ಇಚ್ಛೆಯ ಪ್ರೆಟಿ-ಪ್ರಿಂಟರ್ ಸ್ಕ್ರಿಪ್ಟುಗಳನ್ನು ರಚಿಸುವ ಸಾಮರ್ಥ್ಯದಿಂದಾಗಿ GDBಯು ಕೆಲವು ನಿಶ್ಚಿತ ಅನ್ವಯಗಳಿಗೆ ಮಾಹಿತಿಯನ್ನು ಹೇಗೆ ತೋರಿಸುತ್ತದೆ ಎನ್ನುವುದರ ಬಗೆಗೆ ಬಳಕೆದಾರರು ನಿಯಂತ್ರಣವನ್ನು ಹೊಂದಲು ಸಾಧ್ಯವಿರುತ್ತದೆ. Red Hat Enterprise Linux ನಲ್ಲಿ GNU Standard C++ ಲೈಬ್ರರಿಗಾಗಿನ (libstdc++) ಪ್ರೆಟಿ-ಪ್ರಿಂಟರಿನ ಸಂಪೂರ್ಣವಾದ ಸೂಟ್ ಅನ್ನು ಹೊಂದಿರುತ್ತದೆ.
GNU ಕಂಪೈಲರ ಕಲೆಕ್ಷನ್ (GCC)
GNU ಕಂಪೈಲರ್ ಕಲೆಕ್ಷನ್ (GCC) ಬೇರೆಯವುಗಳ ಜೊತೆಗೆ, C, C++, ಹಾಗು ಜಾವಾ GNU ಕಂಪೈಲರ್ ಹಾಗು ಸಂಬಂಧಿಸಿದ ಬೆಂಬಲ ಲೈಬ್ರರಿಗಳನ್ನು ಹೊಂದಿದೆ. Red Hat Enterprise Linux 5.6 ರಲ್ಲಿ GCC ಯ ಆವೃತ್ತಿ 4.4 ಅನ್ನು ಹೊಂದಿದ್ದು, ಇದು Red Hat Enterprise Linux 6 ರೊಂದಿಗೆ ಪರಸ್ಪರ ಹೊಂದಿಕೊಳ್ಳಲು ನೆರವಾಗುತ್ತದೆ.
GNU C ಲೈಬ್ರರಿ (glibc)
GNU C ಲೈಬ್ರರಿ (glibc) ಪ್ಯಾಕೇಜುಗಳು Red Hat Enterprise Linux ನಲ್ಲಿನ ಹಲವಾರು ಪ್ರೊಗ್ರಾಮ್ಗಳು ಬಳಸುವ ಶಿಷ್ಟವಾದ C ಲೈಬ್ರರಿಗಳನ್ನು ಹೊಂದಿರುತ್ತದೆ. ಈ ಪ್ಯಾಕೇಜುಗಳು ಶಿಷ್ಟವಾದ C ಹಾಗು ಶಿಷ್ಟವಾದ math ಲೈಬ್ರರಿಗಳನ್ನು ಹೊಂದಿರುತ್ತವೆ. ಈ ಎರಡು ಲೈಬ್ರರಿಗಳಿಲ್ಲದೆ, ಲಿನಕ್ಸ್ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದು ಸಾಧ್ಯವಿರುವುದಿಲ್ಲ.
Red Hat Enterprise Linux 5.6 ರಲ್ಲಿ glibc ಅನ್ನು ಅಪ್ಡೇಟ್ ಮಾಡಲಾಗಿದ್ದು, ಇದು POWER7 ಹಾಗು ISA 2.06 CPUಗಳಿಗೆ ಬೆಂಬಲವನ್ನು ಸೇರಿಸುತ್ತದೆ.
OpenJDK
Red Hat Enterprise Linux 5.6 ರಲ್ಲಿನ OpenJDK ಅನ್ನು IcedTea ಯ ಆವೃತ್ತಿ 1.7.5 ಕ್ಕೆ ಅಪ್ಡೇಟ್ ಮಾಡಲಾಗಿದೆ. ಈ ಅಪ್ಡೇಟ್ ಈ ಕೆಳಗಿನ ಗಮನಾರ್ಹ ಸೇರ್ಪಡಿಕೆಗಳನ್ನು ಒದಗಿಸುತ್ತದೆ:
HotSpot ಸ್ಥಿರತೆ ಹಾಗು ಕಾರ್ಯಕ್ಷಮತೆ ಬೆಂಬಲಗಳು
Xrender ಪೈಪ್ಲೈನ್ ಬೆಂಬಲ
tzdata ಬಳಸಿಕೊಂಡು ದೃಷ್ಟಿ ಮಾಂದ್ಯರಿಗಾಗಿನ ಸಿಂಕ್ರೊನಸ್ ಕಾಲವಲಯ ಬೆಂಬಲವನ್ನು ಸರಿಪಡಿಸಲಾಗಿದೆ
ಸುಧಾರಿತ ಗ್ರಾಫಿಕ್ಸ್ ಕಡತ ಬೆಂಬಲ ಹಾಗು ಒಟ್ಟಾರೆ JAR ಕಾರ್ಯಕ್ಷಮತೆ