Product SiteDocumentation Site

Red Hat Enterprise Linux 5

5.9 ಬಿಡುಗಡೆ ಟಿಪ್ಪಣಿಗಳು

Red Hat Enterprise Linux 5.9 ಕ್ಕಾಗಿನ ಬಿಡುಗಡೆ ಟಿಪ್ಪಣಿಗಳು

ಆವೃತ್ತಿ 9

ಲೀಗಲ್ ನೋಟೀಸ್

Copyright © 2012 Red Hat, Inc.

The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.

Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.

Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.

Linux® is the registered trademark of Linus Torvalds in the United States and other countries.

Java® is a registered trademark of Oracle and/or its affiliates.

XFS® is a trademark of Silicon Graphics International Corp. or its subsidiaries in the United States and/or other countries.

MySQL® is a registered trademark of MySQL AB in the United States, the European Union and other countries.

All other trademarks are the property of their respective owners.


1801 Varsity Drive
RaleighNC 27606-2072 USA
Phone: +1 919 754 3700
Phone: 888 733 4281
Fax: +1 919 754 3701

ಸಾರಾಂಶ

Red Hat Enterprise Linux ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 5.8 ಬಿಡುಗಡೆ ಟಿಪ್ಪಣಿಗಳಲ್ಲಿ Red Hat Enterprise Linux 6 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಸಣ್ಣ ಬಿಡುಗಡೆಯಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ಬಗೆಗಿನ ವಿವರಗಳಿಗಾಗಿ Technical Notes ಅನ್ನು ನೋಡಿ.
ಪೀಠಿಕೆ
1. ಯಂತ್ರಾಂಶ ಬೆಂಬಲ
2. ಕರ್ನಲ್
3. ಸಾಧನದ ಚಾಲಕಗಳು
3.1. ಶೇಖರಣಾ ಚಾಲಕಗಳು
3.2. ಜಾಲಬಂಧ ಚಾಲಕಗಳು
3.3. ವಿವಿಧ ಚಾಲಕಗಳು
4. ಕಡತವ್ಯವಸ್ಥೆ ಹಾಗು ಶೇಖರಣಾ ವ್ಯವಸ್ಥಾಪನೆ
5. ಚಂದಾದಾರಿಕೆ ವ್ಯವಸ್ಥಾಪನೆ
6. ಸುರಕ್ಷತೆ ಮತ್ತು ದೃಢೀಕರಣ
7. ಕಂಪೈಲರ್ ಹಾಗು ಉಪಕರಣಗಳು
8. ಕ್ಲಸ್ಟರಿಂಗ್
9. ವರ್ಚುವಲೈಸೇಶನ್
10. ಸಾಮಾನ್ಯ ಅಪ್‌ಡೇಟ್‌ಗಳು
A. ಪುನರಾವರ್ತನಾ ಇತಿಹಾಸ

ಪೀಠಿಕೆ

Red Hat Enterprise Linux 6.2 ರಲ್ಲಿ ಅನ್ವಯಿಸಲಾಗಿರುವ ಸುಧಾರಣೆಗಳು ಹಾಗು ಸೇರ್ಪಡೆಗಳನ್ನು ಅತ್ಯುತ್ತಮ ಮಟ್ಟದ ವಿವರಣೆಯನ್ನು ಬಿಡುಗಡೆ ಟಿಪ್ಪಣಿಗಳು ಒದಗಿಸುತ್ತದೆ. Red Hat Enterprise Linux ನ 6.2 ರ ಅಪ್‌ಡೇಟ್‌ನಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ದಸ್ತಾವೇಜನ್ನು ನೋಡಲು ತಾಂತ್ರಿಕ ಟಿಪ್ಪಣಿಗಳನ್ನು ನೋಡಿ.

ಅಧ್ಯಾಯ 1. ಯಂತ್ರಾಂಶ ಬೆಂಬಲ

ConnectX-3 ಗಾಗಿನ mstflint ಬೆಂಬಲ
Mellanox ಫರ್ಮವೇರ್ ಬರೆಯುವಿಕೆ ಮತ್ತು ದೋಷ ನಿಧಾನ ಉಪಕರಣಗಳನ್ನು ಒದಗಿಸುವ mstflint ಈಗ, Mellanox ConnectX-3 ಸಾಧನಗಳಿಗೆ ಬೆಂಬಲವನ್ನು ಹೊಂದಿದೆ.

HP Smart Array ನಿಯಂತ್ರಕಗಳು ಮತ್ತು MegaRAID ಗಾಗಿನ smartmontools ಬೆಂಬಲ
SMART-ಸಾಮರ್ಥ್ಯವನ್ನು ಹೊಂದಿದ ಹಾರ್ಡ್ ಡ್ರೈವ್‌ಗಳನ್ನು ಮೇಲ್ವಿಚಾರಣೆ ನಡೆಸುವ ಉಪಕರಣಗಳನ್ನು ಒದಗಿಸುವ smartmontools ಎಂಬ ಪ್ಯಾಕೇಜನ್ನು HP Smart Array ನಿಯಂತ್ರಕಗಳನ್ನು ಬೆಂಬಲಿಸುವಂತೆ ನವೀಕರಿಸಲಾಗಿದೆ. ಈ ಅಪ್‌ಡೇಟ್ ಸುಧಾರಿತ MegaRAID ಬೆಂಬಲವನ್ನೂ ಸಹ ಸೇರಿಸುತ್ತದೆ.

ipmitool delloem ಆಜ್ಞೆಗಳ ನವೀಕರಣ
ipmitool ಸವಲತ್ತಿಗೆ delloem ಎಂಬ ಉಪ ಆಜ್ಞೆಯನ್ನು ಸೇರಿಸುವ Dell-ನಿಶ್ಚಿತ IPMI ವಿಸ್ತರಣೆಯನ್ನು ಈ ಕೆಳಗಿನ ಸುಧಾರಣೆಗಳನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ:
  • ಒಂದು ಹೊಸ vFlash ಆಜ್ಞೆ, ಇದು ವಿಸ್ತರಿಸಲಾದ SD ಕಾರ್ಡುಗಳ ಕುರಿತಾದ ಮಾಹಿತಿಯನ್ನು ತೋರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
  • ಹಿಂದಿನ ಪಟ್ಟಿಯ LED ಸ್ಥಿತಿಯನ್ನು ತೋರಿಸುವ ಒಂದು ಹೊಸ setled ಆಜ್ಞೆ.
  • ಸುಧಾರಿತ ದೋಷ ವಿವರಣೆಗಳು.
  • ಹೊಸ ಯಂತ್ರಾಂಶಗಳಿಗೆ ಬೆಂಬಲವನ್ನು ಸೇರಿಸಲಾಗಿದೆ.
  • ipmitool ಮಾಹಿತಿ ಪುಟದಲ್ಲಿ ipmitool delloem ಆಜ್ಞೆಗಳ ಕುರಿತಾದ ಮಾಹಿತಿಯನ್ನು ಅಪ್ಡೇಟ್ ಮಾಡಲಾಗಿದೆ.

NetApp LUNಗಳಿಗಾಗಿ ಸಂರಚನೆಯನ್ನು ಅಪ್‌ಡೇಟ್ ಮಾಡಲಾಗಿದೆ
NetApp LUN ಒಳ-ನಿರ್ಮಿತ ಸಂರಚನೆಯು ಈಗ ಪೂರ್ವನಿಯೋಜಿತವಾಗಿ tur ಮಾರ್ಗ ಗುರುತುಗಾರನನ್ನು ಬಳಸುತ್ತದೆ. ಜೊತೆಗೆ ಈ ಕೆಳಗಿನ ಯಂತ್ರಾಂಶ ಕೋಷ್ಟಕ ನಿಯತಾಂಕಗಳನ್ನು ಅಪ್‌ಡೇಟ್ ಮಾಡಲಾಗಿದೆ:
  • flush_on_last_del ಅನ್ನು ಸಕ್ರಿಯಗೊಳಿಸಲಾಗಿದೆ.
  • dev_loss_tmo ಅನ್ನು 600 ಎಂಬುದಕ್ಕೆ ಹೊಂದಿಸಲಾಗಿದೆ,
  • fast_io_fail_tmo ಅನ್ನು 5 ಎಂಬುದಕ್ಕೆ ಹೊಂದಿಸಲಾಗಿದೆ,
  • ಮತ್ತು pg_init_retries ಅನ್ನು 50 ಗೆ ಹೊಂದಿಸಲಾಗಿದೆ.

ಅಧ್ಯಾಯ 2. ಕರ್ನಲ್

ವ್ಯವಸ್ಥೆಯ ಕರೆಗಳ ಟ್ರೇಸ್‌ಬಿಂದುಗಳು
ವ್ಯವಸ್ಥೆಯ ಕರೆಯ ಘಟನೆಗಳಿಗಾಗಿ ಈ ಕೆಳಗಿನ ಟ್ರೇಸ್‌ಬಿಂದುಗಳನ್ನು ಸೇರಿಸಲಾಗಿದೆ:
  • sys_enter
  • sys_exit

ವ್ಯವಸ್ಥೆಯ ಕರೆಯ ಕೇಂದ್ರ ಮತ್ತು ಟ್ರೇಸ್‌ಬಿಂದುಗಳು ಕೇವಲ HAVE_SYSCALL_TRACEPOINTS ಸಂರಚನಾ ಆಯ್ಕೆಗಳು ಸಕ್ರಿಯವಾಗಿರುವ ಆರ್ಕಿಟೆಕ್ಚರುಗಳಲ್ಲಿ ಮಾತ್ರ ಬೆಂಬಲಿತವಾಗಿದೆ.

IPv6 UDP ಯಂತ್ರಾಂಶ ಚೆಕ್‌ಸಮ್
Red Hat Enterprise Linux 5.9 ರಲ್ಲಿ IPv6 ನಲ್ಲಿ ಚಲಾಯಿತಗೊಳ್ಳುತ್ತಿರುವ UDP ಗಾಗಿ ಯಂತ್ರಾಂಶ ಚೆಕ್‌ಸಮ್‌ಗಾಗಿ ಬೆಂಬಲವನ್ನು ಸೇರಿಸಲಾಗಿದೆ .

ಪ್ರಕ್ರಿಯೆ-ಪೂರ್ವ ಸಂಪನ್ಮೂಲ ಮಿತಿಗಳು
/proc/<PID>/limits (ಈ ಕಡತಕ್ಕೆ ಈಗ ಬರೆಯಬಹುದಾಗಿರುತ್ತದೆ) ಕಡತದ ಮೂಲಕ ಚಲಾಯಿತಗೊಳ್ಳುತ್ತಿರುವ ಪ್ರಕ್ರಿಯೆಗಳ ಮಿತಿಗಳನ್ನು ಕ್ರಿಯಾತ್ಮಕವಾಗಿ ಬದಲಾಯಿಸಲು ಬಳಕೆದಾರರಿಗೆ ಅನುವು ಮಾಡಿಕೊಡುವ prlimit64() ವ್ಯವಸ್ಥೆಯ ಕರೆಯನ್ನು ಸೇರಿಸಲಾಗಿದೆ.

pktgen VLAN ಬೆಂಬಲವನ್ನು ಸೇರಿಸಲಾಗಿದೆ
pktgen ಮಾಡ್ಯೂಲ್‌ಗೆ VLAN ಬೆಂಬಲವನ್ನು ಸೇರಿಸಲಾಗಿದೆ. pktgen ಮಾಡ್ಯೂಲ್ ಈಗ 802.1Q ಟ್ಯಾಗ್ ಮಾಡಲಾದ ಚೌಕಟ್ಟುಗಳನ್ನು ಉತ್ಪಾದಿಸಲು ಸಮರ್ಥವಾಗಿರುತ್ತದೆ.

/proc/<PID>/ ಗೆ ನಿಲುಕನ್ನು ನಿರ್ಬಂಧಿಸಲಾಗುತ್ತಿದೆ
/proc/<PID>/ ಕೋಶಗಳಿಗೆ ಅನುಮತಿಯನ್ನು ನಿರ್ಬಂಧಿಸುವುದನ್ನು ಅನುಮತಿಸುವಂತೆ hidepid= ಮತ್ತು gid= ಆರೋಹಣಾ ಆಯ್ಕೆಗಳನ್ನು procfs ಗೆ ಸೇರಿಸಲಾಗಿದೆ.

DSCP ಪ್ರದೇಶ ವಿರೂಪಗೊಳಿಸುವಿಕೆ
Red Hat Enterprise Linux 5.9 ರಲ್ಲಿ, netfilter ಮಾಡ್ಯೂಲ್ ಈಗ DSCP ಪ್ರದೇಶವನ್ನು ವಿರೂಪಗೊಳಿಸುವುದನ್ನು ಬೆಂಬಲಿಸುತ್ತದೆ.

ಅಧ್ಯಾಯ 3. ಸಾಧನದ ಚಾಲಕಗಳು

3.1. ಶೇಖರಣಾ ಚಾಲಕಗಳು

  • mptfusion ಚಾಲಕವನ್ನು ಆವೃತ್ತಿ 3.04.20 ಗೆ ಅಪ್‌ಡೇಟ್ ಮಾಡಲಾಗಿದೆ. ಇದು ಈ ಕೆಳಗಿನ ಸಾಧನ ID ಯನ್ನು ಸೇರಿಸುತ್ತದೆ: SAS1068_820XELP.
  • ಕ್ಯುಲಾಜಿಕ್ ಫೈಬರ್ ಚಾನಲ್ HBAಗಳ qla2xxx ಚಾಲಕವನ್ನು ಆವೃತ್ತಿ 8.04.00.05.05.09-k ಗೆ ಅಪ್‌ಡೇಟ್ ಮಾಡಲಾಗಿದೆ.
  • qla4xxx ಚಾಲಕವನ್ನು 5.02.04.05.05.09-d0 ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • ಎಮುಲೆಕ್ಸ್ ಫೈಬರ್ ಚಾನಲ್ ಹೋಸ್ಟ್‍ ಬಸ್‌ ಅಡಾಪ್ಟರುಗಳಗಾಗಿನ Ipfc ಚಾಲಕವನ್ನು ಆವೃತ್ತಿ 8.2.0.128.3p ಗೆ ಅಪ್‌ಡೇಟ್ ಮಾಡಲಾಗಿದೆ.
  • ServerEngines BladeEngine 2 Open iSCSI ಸಾಧನಗಳಿಗಾಗಿನ be2iscsi ಚಾಲಕವನ್ನು ಆವೃತ್ತಿ 4.2.162.0r ಗೆ ಅಪ್‌ಡೇಟ್ ಮಾಡಲಾಗಿದೆ.
  • ಬ್ರಾಡ್‌ಕಾಮ್‌ NetXtreme II iSCSI ಗಾಗಿನ bnx2i ಚಾಲಕವನ್ನು ಆವೃತ್ತಿ 2.7.2.2 ಗೆ ಅಪ್‌ಡೇಟ್ ಮಾಡಲಾಗಿದೆ.
  • Brocade BFA FC SCSI ಚಾಲಕ (bfa ಚಾಲಕ) ಇನ್ನು ಮುಂದೆ ತಂತ್ರಜ್ಞಾನ ಮುನ್ನೋಟವಾಗಿರುವುದಿಲ್ಲ. Red Hat Enterprise Linux 5.9 ರಲ್ಲಿ, BFA ಚಾಲಕವು ಸಂಪೂರ್ಣವಾಗಿ ಬೆಂಬಲಿತವಾಗಿದೆ. ಹೆಚ್ಚುವರಿಯಾಗಿ, Brocade bfa FC SCSI ಚಾಲಕವನ್ನು 3.0.23.0 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಬೇರೆಯವುಗಳ ಜೊತೆಗೆ ಈ ಕೆಳಗಿನ ಸುಧಾರಣೆಗಳನ್ನು ಹೊಂದಿರುತ್ತದೆ:
    • ಒಂದು ಫೈಬರ್-ಚಾನಲ್ ಆತಿಥೇಯದಿಂದ ಲೂಪ್ ಇನಿಶಿಯಲೈಸೇಶನ್ ಪ್ರೊಟೊಕಾಲ್ (LIP) ಒದಗಿಸುವುದನ್ನು ಬೆಂಬಲಿಸುತ್ತದೆ.
    • ಎಕ್ಸಟೆಂಡೆಂಡ್ ಲಿಂಕ್ ಸರ್ವಿಸ್ (ELS) ಗಾಗಿನ ಬೆಂಬಲ ಮತ್ತು ಕಾಮನ್ ಟ್ರಾನ್ಸಪೋರ್ಟ್ (CT) ಫೈಬರ್-ಚಾನಲ್ ಪಾಸ್‌ತ್ರೂ ಅಜ್ಞೆಗಳಿಗೆ ಬೆಂಬಲ.
    • IOCTL ಸಂಪರ್ಕಸಾಧನವನ್ನು ಸೇರಿಸಲಾಗಿದೆ.
  • bfa ಫರ್ಮ್ ವೇರ್ ಅನ್ನು ಆವೃತ್ತಿ 3.0.23.2 ಗೆ ಅಪ್‌ಡೇಟ್ ಮಾಡಲಾಗಿದೆ.
  • mpt2sas ಚಾಲಕವನ್ನು ಆವೃತ್ತಿ 13.101.00.00 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು NUMA I/O ಬೆಂಬಲ, ಫಾಸ್ಟ್ ಲೋಡ್ ಬೆಂಬಲ, ಮತ್ತು ಗ್ರಾಹಕ ನಿಶ್ಚಿತ ಬ್ರಾಂಡಿಂಗ್‌ಗೆ ಬೆಂಬಲವನ್ನು ಸೇರಿಸುತ್ತದೆ.
  • megaraid_sas ಚಾಲಕವನ್ನು ಆವೃತ್ತಿ 00.00.06.15-rh ಗೆ ಅಪ್‌ಡೇಟ್ ಮಾಡಲಾಗಿದೆ, ಇದು Dell PowerEdge RAID ಕಂಟ್ರೋಲರ್ (PERC) 9, LSI MegaRAID SAS 9360/9380 12GB/s ನಿಯಂತ್ರಕಗಳು, ಮತ್ತು ಅನೇಕ MSI-X ವೆಕ್ಟರ್ ಮತ್ತು ಅನೇಕ ಪ್ರತಿಕ್ರಿಯೆ ಸರತಿಗೆ ಬೆಂಬಲವನ್ನು ಸೇರಿಸುತ್ತದೆ.
  • Broadcom NetXtreme II BCM5706/5708/5709 ಸರಣಿಗಳ PCI/PCI-X ಗಿಗಾಬಿಟ್ ಇತರ್ನೆಟ್ ಇಂಟರ್ಫೇಸ್ ಕಾರ್ಡ್ (NIC) ಗಾಗಿನ ಮತ್ತು Broadcom NetXtreme II BCM57710/57711/57712/57800/57810/57840 ಸರಣಿಗಳ PCI-E 10 ಗಾಬಿಟ್ ಇತರ್ನೆಟ್ ಇಂಟರ್ಫೇಸ್ ಕಾರ್ಡಿಗಾಗಿನ iscsiuio ಅನ್ನು ಆವೃತ್ತಿ 0.7.4.3 ಗೆ ಅಪ್ಡೇಟ್ ಮಾಡಲಾಗಿದೆ. ಇದು, ಬೇರೆ ಸುಧಾರಣೆಗಳೊಂದಿಗೆ, VLAN ಮತ್ತು ರೌಟಿಂಗ್ ಬೆಂಬಲವನ್ನು ಒದಗಿಸುತ್ತದೆ.

3.2. ಜಾಲಬಂಧ ಚಾಲಕಗಳು

  • Red Hat Enterprise Linux 5.9 ರಲ್ಲಿ ಸೇರಿಸಲಾದ ib_qib ಸಾಧನ ಚಾಲಕಕ್ಕೆ ಬೆಂಬಲವನ್ನು ಸೇರಿಸಲಾಗಿದೆ. ib_qib ಚಾಲಕವು QLogic ನ ib_ipath InfiniBand Host Channel Adapter (HCA) ಚಾಲಕದ ಒಂದು ಅಪ್‌ಡೇಟ್ ಮಾಡಲಾದ ಆವೃತ್ತಿ (ಮತ್ತು ಬದಲಿ)ಆಗಿದ್ದು ಮತ್ತು ಇದು SDR, DDR, ಮತ್ತು QDR InfiniBand ಅಡಾಪ್ಟರುಗಳ ಇತ್ತೀಚಿನ PCI ಎಕ್ಸಪ್ರೆಸ್ QLE-ಸರಣಿಗೆ ಬೆಂಬಲವನ್ನು ಒದಗಿಸುತ್ತದೆ.
  • Solarflare ಚಾಲಕವನ್ನು (sfc) ಆವೃತ್ತಿ 3.1 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು SFE4003 ಬೋರ್ಡಿಗೆ ಮತ್ತು TXC43128 PHY ಬೆಂಬಲವನ್ನು ಸೇರಿಸುತ್ತದೆ.
  • bnx2x ಫರ್ಮವೇರನ್ನು ಆವೃತ್ತಿ 7.2.51 ಗೆ ಅಪ್‌ಡೇಟ್ ಮಾಡಲಾಗಿದ್ದು ಇದು ಬ್ರಾಡ್‌ಕಾಮ್ 57710/57711/57712 ಚಿಪ್‌ಗಳನ್ನು ಬೆಂಬಲಿಸುತ್ತದೆ.
  • bnx2x ಚಾಲಕವನ್ನು ಆವೃತ್ತಿ 1.72.51-0+ ಗೆ ಅಪ್‌ಡೇಟ್ ಮಾಡಲಾಗಿದ್ದು ಇದು 578xx ಗುಂಪಿನ ಚಿಪ್‌ಗಳನ್ನು ಬೆಂಬಲಿಸುತ್ತದೆ, iSCSI ಆಫ್‌ಲೋಡ್‌ ಅನ್ನು ಬೆಂಬಲಿಸಲು, ಹೆಚ್ಚಿನ PHY ಗಳನ್ನು (EEE ಸಹ ಸೇರಿದಂತೆ), OEM-ನಿಶ್ಚಿತ ಸವಲತ್ತುಗಳನ್ನು, ಮತ್ತು ಹಲವಾರು ದೋಷಗಳನ್ನು ಪರಿಹರಿಸಲು ಬೆಂಬಲವನ್ನು ಒದಗಿಸುತ್ತದೆ.
  • bnx2 ಚಾಲಕವನ್ನು ಆವೃತ್ತಿ 2.2.1+ ಗೆ ಅಪ್‌ಡೇಟ್ ಮಾಡಲಾಗಿದೆ.
  • CoE ಪ್ಯಾರಿಟಿ ದೋಷ ಮರುಗಳಿಕೆ, ಅಂಕಅಂಶ ವರದಿ, ಮತ್ತು FCoE ಸಾಮರ್ಥ್ಯಗಳನ್ನು ಪ್ರಚಾರಮಾಡುವುದನ್ನು ಸಹಾಯಕವಾಗುವಂತೆ cnic ಚಾಲಕ ಮತ್ತು ಫರ್ಮವೇರ್ ಅನ್ನು ಅಪ್‌ಡೇಟ್ ಮಾಡಲಾಗಿದೆ.
  • ಚೆಲ್ಸಿಯೊ T3 ಕುಟುಂಬದ ಜಾಲಬಂಧ ಸಾಧನಗಳಿಗಾಗಿನ cxgb3 ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • ಚೆಲ್ಸಿಯೊ ಟರ್ಮಿನೇಟರ್4 10G ಯುನಿಫೈಡ್ ವೈರ್ ಕಂಟ್ರೋಲರಿಗಳಿಗಾಗಿನ cxgb4 ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ, ಇದು Chelsio T480-CR ಮತ್ತು T440-LP-CR ಅಡಾಪ್ಟರುಗಳಿಗೆ ಬೆಂಬಲವನ್ನು ಸೇರಿಸುತ್ತದೆ.
  • cxgb4 ಫರ್ಮವೇರನ್ನು ಅಪ್‌ಸ್ಟ್ರೀಮ್ ಆವೃತ್ತಿ 1.4.23 ಗೆ ಅಪ್‌ಡೇಟ್ ಮಾಡಲಾಗಿದೆ.
  • iw_cxgb3 ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • iw_cxgb4 ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • cxgb4i, cxgb3i, ಮತ್ತು libcxgbi ಚಾಲಕಗಳನ್ನು ಅಪ್‌ಡೇಟ್ ಮಾಡಲಾಗಿದೆ.
  • netxen_nic ಚಾಲಕವನ್ನು ಆವೃತ್ತಿ 4.0.79 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಮಿನಿಡಂಪ್ ಬೆಂಬಲವನ್ನು ಸೇರಿಸುತ್ತದೆ.
  • Broadcom Tigon3 ಎತರ್ನೆಟ್ ಸಾಧನಗಳಿಗಾಗಿನ tg3 ಚಾಲಕವನ್ನು ಆವೃತ್ತಿ 3.123 ಗೆ ಅಪ್‌ಡೇಟ್ ಮಾಡಲಾಗಿದೆ.
  • Intel 10 ಗಿಗಾಬಿಟ್ PCI Express ಜಾಲಬಂಧ ಸಾಧನಗಳಿಗಾಗಿನ ixgbe ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದ್ದು ಇದು ಈ ಕೆಳಗಿನ ಸುಧಾರಣೆಯನ್ನು ಸೇರಿಸುತ್ತದೆ:
    • Intel Ethernet 82599 10 ಗಿಗಾಬಿಟ್ ಎತರ್ನೆಟ್ ಕಂಟ್ರೋಲರ್ ಅನ್ನು ಬೆಂಬಲಿಸುತ್ತದೆ.
    • Intel Ethernet 82599 10 ಗಿಗಾಬಿಟ್ ಎತರ್ನೆಟ್ ಕಂಟ್ರೋಲರ್ ಆಧರಿತವಾದ Quad Port 10 ಗಿಗಾಬಿಟ್ ಎತರ್ನೆಟ್ ಅಡಾಪ್ಟರ್ ಅನ್ನು ಬೆಂಬಲಿಸುತ್ತದೆ.
    • ಪರೀಕ್ಷಸದೇ ಇರುವ ಮತ್ತು ಅಸುರಕ್ಷಿತವಾದ ಸ್ಮಾಲ್ ಫಾರ್ಮ್-ಫ್ಯಾಕ್ಟರ್ ಪ್ಲಗೇಬಲ್ (SFP+) ಅನ್ನು ಅನುಮತಿಸುವಂತೆ (allow_unsupported_sfp) ಮಾಡ್ಯೂಲ್ ನಿಯತಾಂಕವನ್ನು ಸೇರಿಸಲಾಗಿದೆ.
  • ixgbef ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಇತ್ತೀಚಿನ ಯಂತ್ರಾಂಶ ಬೆಂಬಲವನ್ನು, ಸುಧಾರಣೆಗಳನ್ನು, ಮತ್ತು ದೋಷ ಪರಿಹಾರಗಳನ್ನು ಹೊಂದಿರುತ್ತದೆ. ಅಷ್ಟೆ ಅಲ್ಲದೆ, 100 MB ಕೊಂಡಿ ವೇಗವನ್ನು ಗುರುತಿಸಲು ಬೆಂಬಲವನ್ನು ಸೇರಿಸಲಾಗಿದೆ.
  • igbvf ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿ 2.0.1-k-1 ಗೆ ಅಪ್‌ಡೇಟ್ ಮಾಡಲಾಗಿದೆ.
  • Intel Gigabit ಇತರ್ನೆಟ್ ಅಡಾಪ್ಟರುಗಳಿಗಾಗಿನ ಸಾಧನಗಳಿಗಾಗಿನ igb ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದ್ದು ಇದು Intel ಎತರ್ನೆಟ್ ನೆಟ್‌ವರ್ಕ್ ಸಂಪರ್ಕ I210 ಮತ್ತು Intel ಎತರ್ನೆಟ್ ನೆಟ್‌ವರ್ಕ್ ಸಂಪರ್ಕ I211 ಬೆಂಬಲವನ್ನು ಸೇರಿಸುತ್ತದೆ.
  • Intel 82563/6/7, 82571/2/3/4/7/8/9, ಹಾಗು 82583 PCI-E ಕುಟುಂಬದ ನಿಯಂತ್ರಕಗಳಿಗಾಗಿನ e1000e ಚಾಲಕವನ್ನು ಆವೃತ್ತಿ 1.4.4 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು ಇದು Intel ಎತರ್ನೆಟ್ ನೆಟ್‌ವರ್ಕ್ ಸಂಪರ್ಕ I217-LM ಗೆ ಬೆಂಬಲವನ್ನು ಸೇರಿಸುತ್ತದೆ.
  • bna ಚಾಲಕವು ಇನ್ನು ಮುಂದೆ ತಂತ್ರಜ್ಞಾನ ಮುನ್ನೋಟವಾಗಿರುವುದಿಲ್ಲ. Red Hat Enterprise Linux 5.9 ರಲ್ಲಿ, BNA ಚಾಲಕವು ಸಂಪೂರ್ಣವಾಗಿ ಬೆಂಬಲಿತವಾಗಿದೆ. ಹೆಚ್ಚುವರಿಯಾಗಿ, BNA ಚಾಲಕ ಮತ್ತು ಫರ್ಮವೇರನ್ನು 3.0.23.0 ಗೆ ಅಪ್‌ಡೇಟ್ ಮಾಡಲಾಗಿದೆ.
  • qlge ಚಾಲಕವನ್ನು ಆವೃತ್ತಿ 1.00.00.30 ಗೆ ಅಪ್‌ಡೇಟ್ ಮಾಡಲಾಗಿದೆ.
  • HP NC-ಸೀರೀಸ್ ಕ್ಯುಲಾಜಿಕ್ 10 ಗಿಗಾಬಿಟ್ ಸರ್ವರ್ ಅಡಾಪ್ಟರ್ಸ್ ಸಾಧನಕ್ಕಾಗಿನ qlcnic ಆವೃತ್ತಿಯನ್ನು 5.0.29 ಗೆ ಅಪ್‌ಡೇಟ್ ಮಾಡಲಾಗಿದೆ.
  • ServerEngines BladeEngine 2 10Gbps ಜಾಲಬಂಧ ಸಾಧನಗಳಿಗಾಗಿನ be2net ಚಾಲಕವನ್ನು ಆವೃತ್ತಿ 4.2.116r ಗೆ ಅಪ್‌ಡೇಟ್ ಮಾಡಲಾಗಿದೆ.
  • Cisco 10G ಎತರ್ನೆಟ್ ಸಾಧನಗಳಿಗಾಗಿನ enic ಚಾಲಕವನ್ನು ಆವೃತ್ತಿ 2.1.1.35+ ಗೆ ಅಪ್‌ಡೇಟ್ ಮಾಡಲಾಗಿದೆ.

3.3. ವಿವಿಧ ಚಾಲಕಗಳು

  • mlx4 ib ಮತ್ತು net ಚಾಲಕಗಳನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ. ಇದರ ಜೊತೆಗೆ EEH ದೋಷ ಮರುಗಳಿಕೆಯ ಬೆಂಬಲವನ್ನು mlx4 ಚಾಲಕಕ್ಕೆ ಸೇರಿಸಲಾಗಿದೆ.
  • mlx4_en ಚಾಲಕವನ್ನು ಆವೃತ್ತಿ 1.5.3 ಗೆ ಅಪ್‌ಡೇಟ್ ಮಾಡಲಾಗಿದೆ.
  • mlx4_core ಚಾಲಕವನ್ನು ಆವೃತ್ತಿ 1.0-ofed1.5.4 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • ALSA HDA ಆಡಿಯೊ ಚಾಲಕವನ್ನು ಹೊಸ ಚಿಪ್‌ಸೆಟ್‌ಗಳು ಹಾಗು HDA ಆಡಿಯೊ ಕೊಡೆಕ್‌ಗಳಿಗಾಗಿನ ಬೆಂಬಲವನ್ನು ಅಪ್‌ಡೇಟ್ ಮಾಡುವಂತೆ ಅಥವ ಸುಧಾರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • IPMI ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.

ಅಧ್ಯಾಯ 4. ಕಡತವ್ಯವಸ್ಥೆ ಹಾಗು ಶೇಖರಣಾ ವ್ಯವಸ್ಥಾಪನೆ

dmraid ಗಾಗಿ FIPS ಕ್ರಮದ ಬೆಂಬಲ
Red Hat Enterprise Linux 5.9 ರಲ್ಲಿ dmraid ಮೂಲ ಸಾಧನಗಳೊಂದಿಗೆ FIPS ಕ್ರಮವನ್ನು ಬಳಸಲು ಬೆಂಬಲವನ್ನು ಸೇರಿಸಲಾಗಿದೆ. ಒಂದು dmraid ಸಾಧನವು ಈಗ FIPS ಚೆಕ್‌ಸಮ್ ಅನ್ನು ಪರೀಕ್ಷಿಸುವ ಮೊದಲೇ ಸಕ್ರಿಯಗೊಳಿಸಲಾಗಿರುತ್ತದೆ.

ಅಧ್ಯಾಯ 5. ಚಂದಾದಾರಿಕೆ ವ್ಯವಸ್ಥಾಪನೆ

RHN ಕ್ಲಾಸಿಕ್‌ನಿಂದ ಚಂದಾದಾರಿಕೆ ಅಸೆಟ್ ವ್ಯವಸ್ಥಾಪಕಕ್ಕೆ ವರ್ಗಾವಣೆ
Red Hat Enterprise Linux 5.9 ರಲ್ಲಿ, ಬಳಕೆದಾರರು RHN ಕ್ಲಾಸಿಕ್‌ನಿಂದ Red Hat Subscription Asset Manager (SAM) ಗೆ ವರ್ಗಾವಣೆಗೊಳ್ಳಲು ಸಾಧ್ಯವಿರುತ್ತದೆ. ಚಂದಾದಾರಿಕೆ ಮಾಹಿತಿ ಮತ್ತು ತಂತ್ರಾಂಶ ಅಪ್‌ಡೇಟ್‌ಗಳನ್ನು ನಿಭಾಯಿಸಲು SAM ಎನ್ನುವುದು ಪ್ರಾಕ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ವರ್ಗಾವಣೆ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, Subscription Management Guide ಅನ್ನು ನೋಡಿ.

ಬಾಹ್ಯ ಪೂರೈಕೆಗಣಕದಲ್ಲಿ ನೋಂದಾಯಿಸುವಿಕೆ
ಒಂದು ವ್ಯವಸ್ಥೆಯ ನೋಂದಣಿಯ ಸಮಯದಲ್ಲಿ ದೂರಸ್ಥ ಪೂರೈಕೆಗಣಕವನ್ನು ಆಯ್ಕೆ ಮಾಡುವುದಕ್ಕೆ ಈಚಂದಾದಾರಿಕೆ ವ್ಯವಸ್ಥಾಪಕದಲ್ಲಿ ಬೆಂಬಲವಿದೆ. ನೋಂದಾಯಿಸುವ ಪ್ರಕ್ರಿಯೆಯ ಸಮಯದಲ್ಲಿ, ಚಂದಾದಾರಿಕೆ ವ್ಯವಸ್ಥಾಪಕ ಬಳಕೆದಾರ ಸಂಪರ್ಕಸಾಧನವು ಸಂಪರ್ಕಸ್ಥಾನ ಮತ್ತು ಪ್ರಿಫಿಕ್ಸಿನ ಜೊತೆಗೆ ನೋಂದಾಯಿಸಬೇಕಿರುವ ಪೂರೈಕೆಗಣಕದ URL ಅನ್ನು ಆರಿಸಲು ಒಂದು ಆಯ್ಕೆ ಯನ್ನು ಒದಗಿಸುತ್ತದೆ. ಇದರ ಜೊತೆಗೆ, ಆಜ್ಞಾ ಸಾಲಿನಲ್ಲಿ ನೋಂದಾಯಿಸುವಾಗ, ನೋಂದಾಯಿಸಬೇಕಿರುವ ಪೂರೈಕೆಗಣಕವನ್ನು ಸೂಚಿಸಲು --serverurl ಅನ್ನು ಬಳಸಬಹುದು. ಈ ಸವಲತ್ತಿನ ಕುರಿತಾದ ಹೆಚ್ಚಿನ ಮಾಹಿತಿಗಾಗಿ, Subscription Management Guide. ಅನ್ನು ನೋಡಿ

ಪ್ರಥಮಬೂಟ್ ವ್ಯವಸ್ಥೆ ನೋಂದಣಿ
Red Hat Enterprise Linux 5.9 ರಲ್ಲಿ, firstboot ವ್ಯವಸ್ಥೆ ನೋಂದಣಿಯ ಸಮಯದಲ್ಲಿ, Red Hat ಚಂದಾದಾರಿಕೆ ವ್ಯವಸ್ಥಾಪನೆಗೆ ನೋಂದಾಯಿಸುವುದು ಈಗ ಪೂರ್ವನಿಯೋಜಿತ ಆಯ್ಕೆಯಾಗಿರುತ್ತದೆ.

ಚಂದಾದಾರಿಕೆ ವ್ಯವಸ್ಥಾಪಕ gpgcheck ವರ್ತನೆ
ಚಂದಾದಾರ ವ್ಯವಸ್ಥಾಪಕವು ತಾನು ನೋಡಿಕೊಳ್ಳುವ ಯಾವುದೆ ರೆಪೊಸಿಟರಿಗಳು gpgkey ಕೀಲಿಯನ್ನು ಹೊಂದಿರದೆ ಇದ್ದಲ್ಲಿ ಇನ್ನು ಮುಂದೆ ಚಂದಾದಾರಿಕೆ ವ್ಯವಸ್ಥಾಪಕವು gpgcheck ಅನ್ನು ಸಕ್ರಿಯಗೊಳಿಸುತ್ತದೆ. ರೆಪೊಸಿಟರಿಯನ್ನು ಪುನಃ ಸಕ್ರಿಯಗೊಳಿಸಲು, GPG ಕೀಲಿಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ, ಮತ್ತು ನಿಮ್ಮ ಇಚ್ಛೆಯ ಕಂಟೆಂಟ್ ವಿವರಣೆಯಲ್ಲಿ ಸರಿಯಾದ URL ಅನ್ನು ನಮೂದಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.

ಪೂರೈಕೆಗಣಕದಲ್ಲಿನ ಅಳಿಸುವಿಕೆಗಳು
ವ್ಯವಸ್ಥೆಯ ಪ್ರೊಫೈಲುಗಳನ್ನು ಗ್ರಾಹಕರ ಪೋರ್ಟಲ್ಲಿನಿಂದ ತೆಗೆದುಹಾಕಿದಾಗ ಅವುಗಳ ನೋಂದಣಿಯನ್ನು ಈಗ ತೆಗೆದುಹಾಕಲಾಗುತ್ತದೆ, ಇದರಿಂದಾಗಿ, ಇನ್ನು ಮುಂದೆ ಅವುಗಳು ಪ್ರಮಾಣಪತ್ರ-ಆಧರಿತವಾದ RHN ನೊಂದಿಗೆ ಪರಿಶೀಲನೆಗೊಳಪಡುವುದಿಲ್ಲ.

ಇಚ್ಛೆಯ ಸೇವಾ ಮಟ್ಟಗಳು
ಚಂದಾದಾರಿಕೆ ವ್ಯವಸ್ಥಾಪಕವು ಈಗ ಒಂದು ಗಣಕವನ್ನು ಇಚ್ಛೆಯ ಒಂದು ಸೇವಾ ಮಟ್ಟದೊಂದಿಗೆ ಜೋಡಿಸಲು ಬಳಕೆದಾರರಿಗೆ ಅವಕಾಶವನ್ನು ನೀಡುತ್ತದೆ. ಇದರಿಂದಾಗಿ, ಸ್ವಯಂ-ಚಂದಾದಾರಿಕೆ ಮತ್ತು ಹೀಲಿಂಗ್ ಲಾಜಿಕ್‌ ಮೇಲೆ ಪರಿಣಾಮ ಬೀರುತ್ತದೆ. ಸೇವಾ ಮಟ್ಟಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, Subscription Management Guide ಅನ್ನು ನೋಡಿ.

ಅಪ್‌ಡೇಟ್‌ಗಳನ್ನು ಒಂದು ನಿಶ್ಚಿತ ಕಿರು ಬಿಡುಗಡೆಗೆ ಮಿತಿಗೊಳಿಸುವಿಕೆ
ಚಂದಾದಾರಿಕೆ ವ್ಯವಸ್ಥಾಪಕವು ಈಗ ನಿಶ್ಚಿತ ಬಿಡುಗಡೆಯನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಅನುಮತಿತಿಯನ್ನು ಒದಗಿಸುತ್ತದೆ (ಉದಾಹರಣೆಗೆ, Red Hat Enterprise Linux 5.8), ಇದು ಒಂದು ಈ ಬಿಡುಗಡೆಗೆ ಒಂದು ಗಣಕವನ್ನು ಬಂಧಿಸುತ್ತದೆ. ಈ ಅಪ್‌ಡೇಟ್‌ಗೂ ಮೊದಲು, ಕಿರು ಬಿಡುಗಡೆಯ ಒಂದು ಭಾಗವಾಗಿ ಹೊಸ ಪ್ಯಾಕೇಜುಗಳ ಅಪ್‌ಡೇಟ್‌ಗಳು ಲಭ್ಯವಿದ್ದಾಗ, ಪ್ಯಾಕೇಜು ಅಪ್‌ಡೇಟ್‌ಗಳನ್ನು ಮಿತಿಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. (ಉದಾಹರಣೆಗೆ, Red Hat Enterprise Linux 5.9).

GUI ಬಳಸುವಿಕೆಯಲ್ಲಿ ಬದಲಾವಣೆ
ಚಂದಾದಾರಿಕೆ ವ್ಯವಸ್ಥಾಪಕದ ಚಿತ್ರಾತ್ಮಕ ಬಳಕೆದಾರ ಸಂಪರ್ಕಸಾಧನವನ್ನು ಗ್ರಾಹಕರ ಅಭಿಪ್ರಾಯಕ್ಕೆ ಅನುಗುಣವಾಗಿ ಹಲವು ಬದಲಾಣೆಗಳ ಮೂಲಕ ಸುಧಾರಣೆಯನ್ನು ಮಾಡಲಾಗಿದೆ.

ಅಧ್ಯಾಯ 6. ಸುರಕ್ಷತೆ ಮತ್ತು ದೃಢೀಕರಣ

pam_cracklibಗಾಗಿ ಹೆಚ್ಚುವರಿ ಗುಪ್ತಪದ ಪರಿಶೀಲನೆಗಳು
Red Hat Enterprise Linux 5.9 ರಲ್ಲಿ pam_cracklib ಮಾಡ್ಯೂಲ್‌ಗಾಗಿನ maxclassrepeat ಮತ್ತು gecoscheck ಆಯ್ಕೆಗಳಿಗಾಗಿ ಬ್ಯಾಕ್‌ಪೋರ್ಟ್ ಮಾಡಲಾದ ಬೆಂಬಲವನ್ನು ಸೇರಿಸಲಾಗಿದೆ. ಬಳಕೆದಾರರಿಂದ ನಮೂದಿಸಲಾದ ಒಂದು ಹೊಸ ಗುಪ್ತಪದವನ್ನು ಪರಿಶೀಲಿಸಲು ಮತ್ತು ಅದು ನಿಗದಿತ ನಿಯಮಗಳಿಗೆ ಅನುಗುಣವಾಗಿರದೆ ಇದ್ದಲ್ಲಿ ಅದನ್ನು ತಿರಸ್ಕರಿಸುವ ಉದ್ಧೇಶದಿಂದ ಈ ಆಯ್ಕೆಗಳನ್ನು ಸೇರಿಸಲಾಗಿದೆ. maxclassrepeat ಆಯ್ಕೆಯು ಒಂದೇ ಅಕ್ಷರವರ್ಗದ (ಸಣ್ಣಕ್ಷರಗಳು, ದೊಡ್ಡಕ್ಷರಗಳು, ಅಂಕಿಗಳು, ಮತ್ತು ಇತರೆ ಅಕ್ಷರಗಳು) ಕ್ರಮಾನುಗತ ಅಕ್ಷರಗಳ ಗರಿಷ್ಟ ಸಂಖ್ಯೆಯನ್ನು ಮಿತಿಗೊಳಿಸುತ್ತದೆ. gecoscheck ಆಯ್ಕೆಯು ಹೊಸದಾಗಿ ನಮೂದಿಸಲಾದ ಗುಪ್ತಪದವು, ಗುಪ್ತಪದವನ್ನು ನಮೂದಿಸುತ್ತಿರುವ ಬಳಕೆದಾರರ /etc/passwdನಲ್ಲಿನ GECOS ಕ್ಷೇತ್ರದಲ್ಲಿರುವ ಪದಗಳನ್ನು (ಖಾಲಿ ಜಾಗದಿಂದ ಬೇರ್ಪಟ್ಟಿರುವ ವಾಕ್ಯಾಂಶಗಳು) ಹೊಂದಿದೆಯೆ ಎಂದು ಪರಿಶೀಲಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ pam_cracklib(8) ಮಾಹಿತಿ ಪುಟವನ್ನು ನೋಡಿ.

M2Crypto ಗಾಗಿ IPv6 ಬೆಂಬಲ
Python ಸ್ಕ್ರಿಪ್ಟುಗಳಿಂದ OpenSSL ಕ್ರಿಯೆಗಳನ್ನು ಚಲಾಯಿಸುವಂತೆ,ಪ್ರೊಗ್ರಾಮ್‌ಗಳನ್ನು ಅನುಮತಿಸುವ ಒಂದು ಲೈಬ್ರರಿಯನ್ನು ಒದಗಿಸುವ m2crypto ಪ್ಯಾಕೇಜನ್ನು IPv4 ಮತ್ತು IPv6 ಎರಡರೊಂದಿಗೂ ಸಹ ಕೆಲಸ ಮಾಡುವಂತೆ HTTPS ಅಳವಡಿಕೆಯನ್ನು ಅಪ್‌ಡೇಟ್ ಮಾಡಲಾಗಿದೆ. ಇದರ ಜೊತೆಗೆ, M2Crypto.SSL.Connection ವಸ್ತುವಿಗೆ ಈಗ IPv6 ಸಾಕೆಟ್‌ಗಳನ್ನು ರಚಿಸುವಂತೆ ಸೂಚಿಸಲಾಗುತ್ತದೆ.

sudoer ಗಳ ನಮೂದುಗಳನ್ನು ಪರಿಶೀಲಿಸುವಾಗ ಅಧೀಕೃತವಾಗಿ ಹೊಂದಿಕೆಯಾಗುತ್ತದೆ ಎಂದು ಪರಿಗಣಿಸುವಿಕೆ
sudo ಸೌಕರ್ಯವು sudoer ಗಳಿಗಾಗಿ /etc/nsswitch.conf ಕಡತವನ್ನು ಸಂಪರ್ಕಿಸಲು ಮತ್ತು ಅವುಗಳಿಗಾಗಿ ಕಡತಗಳಲ್ಲಿ ಅಥವ LDAP ನಲ್ಲಿ ನೋಡಲು ಸಾಧ್ಯವಿರುತ್ತದೆ. ಈ ಹಿಂದೆ, sudoer ಗಳ ಮೊದಲಿನ ದತ್ತಸಂಚಯದಲ್ಲಿ ಹೊಂದಿಕೆಯಾಗುವ ಒಂದು ನಮೂದು ಕಂಡುಬಂದ ಮೇಲೆಯೂ ಸಹ ಬೇರೆ ದತ್ತಸಂಚಯಗಳಲ್ಲಿ (ಕಡತಗಳೂ ಸೇರಿದಂತೆ) ಹುಡುಕುವ ಕಾರ್ಯವು ಮುಂದುವರೆಯುತ್ತಿತ್ತು. Red Hat Enterprise Linux 5.9 ರಲ್ಲಿ, ಒಂದು ನಿಗದಿತ sudoer ಹೊಂದಿಕೆಯಾದ ನಂತರ ಹುಡುಕಾಟವನ್ನು ನಿಲ್ಲಿಸುವಂತೆ /etc/nsswitch.conf ಒಂದು ಆಯ್ಕೆಯನ್ನು ಸೇರಿಸಲಾಗಿದೆ. ಇದರಿಂದಾಗಿ, ಬೇರೆ ಯಾವುದೆ ದತ್ತಸಂಚಯಗಳಲ್ಲಿ ಹುಡುಕಾಟವನ್ನು ನಡೆಸುವಿಕೆಯನ್ನು ತಡೆಯುತ್ತದೆ; ಆ ಮೂಲಕ, ದೊಡ್ಡ ಪರಿಸರಗಳಲ್ಲಿ sudoerಗಳ ನಮೂದನ್ನು ಹುಡುಕಾಟ ಕಾರ್ಯದ ಕ್ಷಮತೆಯನ್ನು ಸುಧಾರಿಸುತ್ತದೆ. ಈ ವರ್ತನೆಯನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿರುವುದಿಲ್ಲ, ಮತ್ತು ಆಯ್ದ ದತ್ತಸಂಚಯದ ಎದುರು [SUCCESS=return] ಎಂಬ ವಾಕ್ಯಾಂಶವನ್ನು ಸೇರಿಸುವ ಮೂಲಕ ಸಕ್ರಿಯಗೊಳಿಸಬೇಕಾಗುತ್ತದೆ. ದತ್ತಸಂಚಯದಲ್ಲಿ ಒಂದು ಹೊಂದಾಣಿಕೆಯು ಕಂಡುಬಂದಲ್ಲಿ, ಅದು ಈ ವಾಕ್ಯಾಂಶಕ್ಕೆ ಆದ್ಯತೆ ನೀಡುತ್ತದೆ, ನಂತರ ಯಾವುದೆ ದತ್ತಸಂಚಯಗಳಲ್ಲಿ ಹುಡುಕಾಟವನ್ನು ನಡೆಸಲಾಗುವುದಿಲ್ಲ.

ಅಧ್ಯಾಯ 7. ಕಂಪೈಲರ್ ಹಾಗು ಉಪಕರಣಗಳು

SystemTap
SystemTap ಎನ್ನುವುದು ಬಳಕೆದಾರರಿಗೆ ಕಾರ್ಯ ವ್ಯವಸ್ಥೆಯ (ವಿಶೇಷವಾಗಿ, ಕರ್ನಲ್) ಚಟುವಟಿಕೆಗಳನ್ನು ಸೂಕ್ಷ್ಮವಾದ ರೀತಿಯಲ್ಲಿ ಅರಿತುಕೊಳ್ಳಲು ಹಾಗು ಮೇಲ್ವಿಚಾರಣೆ ನಡೆಸಲು ಅನುಮತಿಸುವ ಜಾಡನ್ನು ಇರಿಸುವ ಹಾಗು ತನಿಖೆ ನಡೆಸುವ ಒಂದು ಉಪಕರಣವಾಗಿರುತ್ತದೆ. ಇದು netstat, ps, top, ಹಾಗು iostat ಉಪಕರಣಗಳನ್ನು ಹೋಲುವ ಔಟ್‌ಪುಟ್‌ ಅನ್ನು ಒದಗಿಸುತ್ತದೆ. ಆದರೆ, SystemTap ಸಂಗ್ರಹಿಸಲಾದ ಮಾಹಿತಿಗಾಗಿ ಹೆಚ್ಚಿನ ಫಿಲ್ಟರಿಂಗ್ ಹಾಗು ಹೆಚ್ಚಿನ ವಿಶ್ಲೇಷಣೆ ಆಯ್ಕೆಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

Red Hat Enterprise Linux 5.9 ರಲ್ಲಿನ SystemTap ಅನ್ನು ಆವೃತ್ತಿ 6.2 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಈ ಕೆಳಗಿನ ಸವಲತ್ತುಗಳನ್ನು ಮತ್ತು ಸುಧಾರಣೆಗಳನ್ನು ಒದಗಿಸುತ್ತದೆ:
  • SystemTap ಚಾಲನಾಸಮಯ (staprun) ಈಗ ಸ್ಕ್ರಿಪ್ಟಿನಿಂದ ಕಡಿಮೆ-ತ್ರೂಪುಟ್‌ ಔಟ್‌ಪುಟ್‌ಗಳಿಗಾಗಿನ ಪೋಲ್‌ಗಾಗಿ ಕಡಿಮೆ ಬಾರಿ ಎಚ್ಚರಗೊಳ್ಳುವುದನ್ನು ಅನುಮತಿಸಲು -T ಕಾಲಾವಧಿ ತೀರಿಕೆಗಳನ್ನು ಅಂಗೀಕರಿಸುತ್ತದೆ.
  • SystemTap ಇಂದ ರದ್ದುಗೊಳಿಸಿದಾಗ, kbuild $PATH ಪರಿಸರವನ್ನು ಈಗ ಸ್ವಚ್ಛಗೊಳಿಸಲಾಗುತ್ತದೆ.
  • printf ಫಾರ್ಮ್ಯಾಟ್‌ಗಳು ಈಗ ಮುದ್ರಿತಗೊಳ್ಳದ ಅಕ್ಷರಗಳನ್ನು ಬಿಟ್ಟುಬಿಡಲು %#c ನಿಯಂತ್ರಣ ನಿಯತಾಂಕವನ್ನು ಬಳಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
  • ಪ್ರೆಟಿ-ಮುದ್ರಿತ ಬಿಟ್ ಸ್ಥಳಗಳು ಈಗ ಪೂರ್ಣಾಂಕಗಳನ್ನು ಬಳಸುತ್ತವೆ; ಅಕ್ಷರಗಳು ಈಗ ಮುದ್ರಣಕ್ಕಾಗಿ ಫಾರ್ಮಾಟ್‌ ಆಗುವುದನ್ನು ತಪ್ಪಿಸಲ್ಪಡುತ್ತವೆ.
  • SystemTap ಕಂಪೈಲ್-ಪೂರೈಕೆಗಣಕ ಮತ್ತು ಕ್ಲೈಂಟ್ ಈಗ IPv6 ಜಾಲಬಂಧಗಳನ್ನು ಬೆಂಬಲಿಸುತ್ತವೆ.
  • SystemTap ಮಾಡ್ಯೂಲ್‌ಗಳು ಈಗ ಚಿಕ್ಕದಾಗಿದೆ ಮತ್ತು ವೇಗವಾಗಿದೆ ಕಂಪೈಲ್ ಆಗುತ್ತದೆ. ಮಾಡ್ಯೂಲ್‌ಗಳ debuginfo ಈಗ ಪೂರ್ವನಿಯೋಜಿತವಾಗಿ ತಡೆಹಿಡಿಯಲಾಗುತ್ತದೆ.
  • @var ಸಿಂಟ್ಯಾಕ್ಸ್ ಈಗ uprobe ಮತ್ತು kprobe ಹ್ಯಾಂಡ್ಲರುಗಳಲ್ಲಿ (ಪ್ರಕ್ರಿಯೆ, ಕರ್‌ನಲ್, ಮಾಡ್ಯೂಲ್) DWARF ವೇರಿಯೇಬಲ್‌ಗಳಿಗಾಗಿ ಪರ್ಯಾಯ ಭಾಷೆ ಸಿಂಟ್ಯಾಕ್ಸ್ ಆಗಿರುತ್ತದೆ.
  • SystemTap ಸ್ಕ್ರಿಪ್ಟ್ ಅನುವಾದಕ ಚಾಲಕ (stap) ಈಗ ಈ ಕೆಳಗಿನ ಸಂಪನ್ಮೂಲ ಮಿತಿಯ ಆಯ್ಕೆಗಳನ್ನು ಒದಗಿಸುತ್ತದೆ:
    --rlimit-as=NUM
    --rlimit-cpu=NUM
    --rlimit-nproc=NUM
    --rlimit-stack=NUM
    --rlimit-fsize=NUM
    
  • SystemTap ಕಂಪೈಲ್-ಪೂರೈಕೆಗಣಕ ಈಗ ಅನೇಕ ಸಮಕಾಲೀನ ಸಂಪರ್ಕಗಳನ್ನು ಬೆಂಬಲಿಸುತ್ತದೆ.
  • ಈ ಕೆಳಗಿನ ಟ್ಯಾಪ್‌ಸೆಟ್ ಕ್ರಿಯೆಯನ್ನು 1.8 ಬಿಡುಗಡೆಯಲ್ಲಿ ಅಪ್ರಚಲಿತಗೊಳಿಸಲಾಗಿದೆ ಮತ್ತು 1.9 ಬಿಡುಗಡೆಯಲ್ಲಿ ತೆಗೆದುಹಾಕಲಾಗುತ್ತದೆ:
    daddr_to_string()
    
  • SystemTap ಈಗ ಟ್ಯಾಪ್‌ಸೆಟ್‌ಗಳಿಂದ ಸೇರಿಸಲಾದ C ಹೆಡರುಗಳೊಂದಿಗೆ ಘರ್ಷಣೆಯಾಗುವುದನ್ನು ತಪ್ಪಿಸಲು ಸ್ಥಳೀಯ ವೇರಿಯೇಬಲ್‌ಗಳನ್ನು ವಿರೂಪಗೊಳಿಸುತ್ತದೆ.
  • ಎಂಬೆಡೆಡ್-C ಕ್ರಿಯೆಗಳಲ್ಲಿ, ಹೊಸದಾಗಿ-ವಿವರಿಸಲಾದ ಮ್ಯಾಕ್ರೊ STAP_ARG_* ಅನ್ನು ಈಗ THIS->* ಸಂಕೇತಗಳನ ಬದಲಿಗೆ ಬಳಸಲಾಗುತ್ತದೆ.

ಅಧ್ಯಾಯ 8. ಕ್ಲಸ್ಟರಿಂಗ್

IBM iPDU ಫೆನ್ಸ್ ಸಾಧನಕ್ಕಾಗಿನ ಬೆಂಬಲವನ್ನು ಸೇರಿಸುತ್ತದೆ
Red Hat Enterprise Linux 5.9 ರಲ್ಲಿ IBM iPDU ಫೆನ್ಸ್ ಸಾಧನಕ್ಕೆ ಬೆಂಬಲವನ್ನು ಸೇರಿಸಲಾಗಿದೆ. ಈ ಫೆನ್ಸ್ ಸಾಧನದ ನಿಯತಾಂಕಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಭೇಟಿ ಕೊಡಿ: Cluster Administration guide.

DLM ಹ್ಯಾಶ್ ಟೇಬಲ್ ಗಾತ್ರದ ಟ್ಯೂನಿಂಗ್
ಡಿಸ್ಟ್ರಿಬ್ಯೂಟೆಡ್ ಲಾಕ್ ಮ್ಯಾನೆಜರ್ (DLM) ಈಗ DLM ಹ್ಯಾಶ್ ಟೇಬಲ್ ಗಾತ್ರಗಳನ್ನು /etc/sysconfig/cman ಕಡತದಿಂದ ಟ್ಯೂನಿಂಗ್ ಮಾಡುವುದನ್ನು ಅನುಮತಿಸುತ್ತದೆ. ಈ ಕೆಳಗಿನ ನಿಯತಾಂಕಗಳನ್ನು /etc/sysconfig/cman ಕಡತದಲ್ಲಿ ಹೊಂದಿಸಬಹುದಾಗಿರುತ್ತದೆ:
DLM_LKBTBL_SIZE=<size_of_table>
DLM_RSBTBL_SIZE=<size_of_table>
DLM_DIRTBL_SIZE=<size_of_table>

ಇದು ಈ ಕೆಳಗಿನ ಕಡತಗಳಲ್ಲಿ ಮೌಲ್ಯಗಳನ್ನು ಅನುಗುಣವಾಗಿ ಮಾರ್ಪಡಿಸುತ್ತದೆ:
/sys/kernel/config/dlm/cluster/lkbtbl_size
/sys/kernel/config/dlm/cluster/rsbtbl_size
/sys/kernel/config/dlm/cluster/dirtbl_size

ಅಧ್ಯಾಯ 9. ವರ್ಚುವಲೈಸೇಶನ್

Microsoft Hyper-V ಚಾಲಕಗಳಿಗಾಗಿ ಅತಿಥಿಯ ಅನುಸ್ಥಾಪನೆಯ ಬೆಂಬಲವನ್ನು ಸೇರಿಸಲಾಗಿದೆ
Red Hat Enterprise Linux 5.9 ನಲ್ಲಿ, Microsoft Hyper-V ಯಲ್ಲಿ Red Hat Enterprise Linux ಅತಿಥಿ ಅನುಸ್ಥಾಪನೆಯನ್ನು, ಮತ್ತು Hyper-V ಪ್ಯಾರಾ-ವರ್ಚುವಲೈಸ್ಡ್ ಸಾಧನ ಬೆಂಬಲವನ್ನು ಸಂಘಟಿಸಲಾಗಿದೆ, ಇದು Microsoft Hyper-V ಹೈಪರ್ವೈಸರುಗಳ ಮೇಲೆ Red Hat Enterprise Linux 5.9 ಅನ್ನು ಒಂದು ಅತಿಥಿಯಾಗಿ ಸೇರಿಸಲು ಅನುವು ಮಾಡಿಕೊಡುತ್ತದೆ. Red Hat Enterprise Linux 5.9 ರೊಂದಿಗೆ ನೀಡಲಾಗುವ ಕರ್ನಲ್‌ನೊಂದಿಗೆ ಈ ಕೆಳಗಿನ Hyper-V ಚಾಲಕಗಳು ಮತ್ತು ಕ್ಲಾಕ್ ಮೂಲವನ್ನು ಸೇರಿಸಲಾಗಿದೆ:
  • ಒಂದು ಜಾಲಬಂಧ ಸಾಧನ (hv_netvsc)
  • ಒಂದು ಶೇಖರಣಾ ಸಾಧನ (hv_storvsc)
  • ಒಂದು HID-ಹೊಂದಿಕೆಯಾಗುವ ಮೌಸ್ ಚಾಲಕ (hid_hyperv)
  • ಒಂದು VMbus ಚಾಲಕ (hv_vmbus)
  • ಒಂದು util ಚಾಲಕ (hv_util)
  • ಒಂದು ಕ್ಲಾಕ್ ಮೂಲ (i386: hyperv_clocksource, AMD64/Intel 64: HYPER-V timer)

Red Hat Enterprise Linux 5.9 ಒಂದು ಅತಿಥಿ Hyper-V Key-Value Pair (KVP) ಡೀಮನ್ ಅನ್ನು ಹೊಂದಿರುತ್ತದೆ (hypervkvpd). ಇದು VMbus ಮುಖಾಂತರ ಅತಿಥಿಗಣಕದ IP, FQDN, OS ಹೆಸರು, ಮತ್ತು OS ಬಿಡುಗಡೆಯ ಸಂಖ್ಯೆ ಮುಂತಾದ ಮಾಹಿತಿಯನ್ನು ಕಳುಹಿಸುತ್ತದೆ.

ಅಧ್ಯಾಯ 10. ಸಾಮಾನ್ಯ ಅಪ್‌ಡೇಟ್‌ಗಳು

samba3x ಪ್ಯಾಕೇಜುಗಳನ್ನು ಅಪ್‌ಡೇಟ್ ಮಾಡಲಾಗಿದೆ
Red Hat Enterprise Linux 5.9 ರಲ್ಲಿ ಹಲವಾರು ದೋಷ ಸರಿಪಡಿಕೆಗಳು ಮತ್ತು ಸುಧಾರಣೆಗಳನ್ನು ಪರಿಚಯಿಸುವ ರಿಬೇಸ್ ಮಾಡಲಾದ samba3x ಪ್ಯಾಕೇಜುಗಳನ್ನು ಹೊಂದಿರುತ್ತದೆ. ಇದರಲ್ಲಿ ಮುಖ್ಯವಾದ ಸುಧಾರಣೆಯೆಂದರೆ SMB2 ಪ್ರೊಟೊಕಾಲ್‌ಗಾಗಿನ ಬೆಂಬಲವನ್ನು ಸೇರಿಸಲಾಗಿದ್ದು, ಇದು ಈ ಕೆಳಗಿನ ನಿಯತಾಂಕವನ್ನು ಹೊಂದಿರುತ್ತದೆ. SMB2 ಪ್ರೊಟಕಾಲ್ ಅನ್ನು /etc/samba/smb.conf ಕಡತದಲ್ಲಿನ [global] ನಿಯತಾಂಕದಲ್ಲಿ ಸರಿಪಡಿಸಬಹುದಾಗಿರುತ್ತದೆ:
max protocol = SMB2

ಎಚ್ಚರಿಕೆ

ಅಪ್‌ಡೇಟ್ ಮಾಡಲಾದ samba3x ಪ್ಯಾಕೇಜುಗಳು ID ಮ್ಯಾಪಿಂಗ್ ಅನ್ನು ಸಂರಚಿಸುವ ರೀತಿಯನ್ನೂ ಸಹ ಬದಲಾಯಿಸುತ್ತದೆ. ಬಳಕೆದಾರರು ತಮ್ಮ ಈಗಿರುವ Samba ಸಂರಚನಾ ಕಡತಗಳನ್ನು ಮಾರ್ಪಡಿಸುವಂತೆ ಸಲಹೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, Release Notes for Samba 3.6.0. ಅನ್ನು ನೋಡಿ

OpenJDK 7
Red Hat Enterprise Linux 5.9 ರಲ್ಲಿ OpenJDK 6 ಕ್ಕೆ ಪರ್ಯಾಯವಾಗಿ OpenJDK 7 ಗೆ ಸಂಪೂರ್ಣ ಬೆಂಬಲವನ್ನು ಸೇರಿಸಲಾಗಿದೆ. java-1.7.0-openjdk ಪ್ಯಾಕೇಜುಗಳು OpenJDK 7 Java ರನ್‌ಟೈಮ್ ಎನ್ವಿರಾನ್ಮೆಂಟ್‌ ಮತ್ತು OpenJDK 7 Java ಸಾಫ್ಟ್‍ವೇರ್ ಡೆವಲಪ್ಮೆಂಟ್ ಕಿಟ್ ಅನ್ನು ಒದಗಿಸುತ್ತವೆ. OpenJDK 7 ರಲ್ಲಿ JVM ನಲ್ಲಿ ಚಲಾಯಿತಗೊಳ್ಳುವ ಕ್ರಿಯಾತ್ಮಕವಾಗಿ -ನಮೂದಿಸಲಾದ ಭಾಷೆಗಳನ್ನು ಬೆಂಬಲಿಸುವ ವಿಸ್ತರಣೆಗಳನ್ನು, ವರ್ಗ ಲೋಡ್ ಮಾಡುವ ಸುಧಾರಣೆಗಳು, Unicode 6.0 ಕ್ಕೆ ಬೆಂಬಲ, ಮತ್ತು ಅಪ್ಡೇಟ್ ಮಾಡಲಾದ I/O ಮತ್ತು ನೆಟ್‌ವರ್ಕಿಂಗ APIಗಳ ಸುಧಾರಣೆಗಳನ್ನು ಸೇರಿಸಲಾಗಿದೆ. OpenJDK 7 ಎನ್ನುವುದು Red Hat Enterprise Linux 6 ರಲ್ಲಿಯೂ ಸಹ ಲಭ್ಯವಿದೆ.

ಹೊಸ Java 7 ಪ್ಯಾಕೇಜುಗಳು
java-1.7.0-ibm ಮತ್ತು java-1.7.0-oracle ಯಾಕೇಜುಗಳು ಈಗ Red Hat Enterprise Linux 6.3 ರಲ್ಲಿ ಲಭ್ಯವಿವೆ.

ಹೊಸ libitm ಪ್ಯಾಕೇಜುಗಳು
libitm ಎನ್ನುವುದು GNU ವ್ಯವಹಾರದ ಮೆಮೊರಿ ಲೈಬ್ರರಿಯನ್ನು ಹೊಂದಿರುತ್ತದೆ, ಇದು ಹಲವಾರು ಎಳೆಗಳಿಂದ ಹಂಚಲ್ಪಟ್ಟಿರುವ ಮೆಮೊರಿಗೆ ಮೇಳೈಸುವ ನಿಲುಕನ್ನು ಸಕ್ರಿಯಗೊಳಿಸಲು ಒಂದು ಪ್ರಕ್ರಿಯೆಯ ಮೆಮೊರಿಯನ್ನು ನಿಲುಕಿಸಿಕೊಳ್ಳಲು ವ್ಯವಹಾರದ ಬೆಂಬಲವನ್ನು ಒದಗಿಸುತ್ತದೆ.

Rsyslog ಅನ್ನು ಪ್ರಮುಖ ಆವೃತ್ತಿ 5 ಕ್ಕೆ ಅಪ್‌ಡೇಟ್ ಮಾಡಲಾಗಿದೆ
Red Hat Enterprise Linux 5.9 ರಲ್ಲಿ ಹೊಸ rsyslog5 ಪ್ಯಾಕೇಜನ್ನು ಸೇರಿಸಲಾಗಿದ್ದು, ಇದು rsyslog ಅನ್ನು ಪ್ರಮುಖ ಆವೃತ್ತಿ 5 ಕ್ಕೆ ನವೀಕರಿಸಲಾಗಿದೆ.

ಮಹತ್ವ

rsyslog5 ಎನ್ನುವುದು ಈಗಿರುವ rsyslog ಪ್ಯಾಕೇಜಿನ ಒಂದು ಬದಲಿ ಪ್ಯಾಕೇಜ್ ಆಗಿದ್ದು, ಇದು Red Hat Enterprise Linux 5 ರಲ್ಲಿ rsyslog ನ ಆವೃತ್ತಿ 3 ಅನ್ನು ಒದಗಿಸುತ್ತದೆ. rsyslog5 ಪ್ಯಾಕೇಜನ್ನು ಅನುಸ್ಥಾಪಿಸಲು, rsyslog ಪ್ಯಾಕೇಜನ್ನು ಮೊದಲು ತೆಗೆದುಹಾಕಬೇಕಾಗುತ್ತದೆ.

rsyslog ಪ್ಯಾಕೇಜನ್ನು ಆವೃತ್ತಿ 5 ಕ್ಕೆ ನವೀಕರಿಸಿದಾಗ, ಇದು ಹಲವಾರು ಸುಧಾರಣೆಗಳನ್ನು ಮತ್ತು ಅನೇಕ ದೋಷ ಪರಿಹಾರಗಳನ್ನು ಒದಗಿಸುತ್ತದೆ. ಪ್ರಮುಖ ಬದಲಾವಣೆಗಳನ್ನು ಈ ಕೆಳಗೆ ನೀಡಲಾಗಿದೆ:
  • $HUPisRestart ನಿರ್ದೇಶನವನ್ನು ತೆಗೆದುಹಾಕಲಾಗಿದ್ದು, ಅದನ್ನು ಇನ್ನು ಮುಂದೆ ಬೆಂಬಲಿಸಲಾಗುವುದಿಲ್ಲ. ಆದ್ದರಿಂದ ಮರುಆರಂಭಿಸುವ ಬಗೆಯಾದಂತಹ HUP ಸಂಸ್ಕರಣೆಯು ಇನ್ನು ಮುಂದೆ ಲಭ್ಯವಿರುವುದಿಲ್ಲ. ಈಗ, SIGHUP ಸಂಕೇತವನ್ನು ಸ್ವೀಕರಿಸಿದಾಗ, ಔಟ್‌ಪುಟ್‌ಗಳನ್ನು (ಹೆಚ್ಚಿನ ಸಂದರ್ಭಗಳಲ್ಲಿ ಲಾಗ್ ಕಡತಗಳು) ಬೆಂಬಲ ಲಾಗ್ ಆವೃತ್ತಿಗಳಲ್ಲಿ ಮಾತ್ರ ಮರಳಿ ತೆಗೆಯಲಾಗುತ್ತದೆ.
  • ಸ್ಪೂಲ್ ಕಡತಗಳ ವಿನ್ಯಾಸವನ್ನು (ಉದಾಹರಣೆಗೆ, ಡಿಸ್ಕ್‍-ನೆರವಿನ ಸರತಿಗಳು) ಬದಲಾಯಿಸಲಾಗಿದೆ. ಹೊಸ ವಿನ್ಯಾಸಕ್ಕೆ ಬದಲಾಯಿಸಿಕೊಳ್ಳಲು, ಸ್ಪೂಲ್‌ ಕಡತಗಳನ್ನು ಖಾಲಿ ಮಾಡಿ, ಉದಾ, rsyslogd ಅನ್ನು ಸ್ಥಗಿತಗೊಳಿಸುವ ಮೂಲಕ. ನಂತರ, Rsyslog ನವೀಕರಣದೊಂದಿಗೆ ಮುಂದುವರೆಯಿರಿ, ಮತ್ತು ಪುನಃ ಇನ್ನೊಮ್ಮೆ rsyslogd ಅನ್ನು ಆರಂಭಿಸಿ. ನವೀಕರಣದ ನಂತರ ಹೊಸ ವಿನ್ಯಾಸವನ್ನು ಸ್ವಯಂಚಾಲಿತವಾಗಿ ಬಳಸಲಾಗುತ್ತದೆ.
  • rsyslogd ಡೀಮನ್‌ ಅನ್ನು ದೋಷನಿದಾನ ಸ್ಥಿತಿಯಲ್ಲಿ ಚಲಾಯಿಸುವಾಗ (-d ಆಯ್ಕೆಯನ್ನು ಬಳಸಿಕೊಂಡು), ಅದು ಮುನ್ನೆಲೆಯಲ್ಲಿ ಚಲಾಯಿತಗೊಳ್ಳುತ್ತಿತ್ತು. ಅದನ್ನು ಸರಿಪಡಿಸಲಾಗಿದೆ ಮತ್ತು ಡೀಮನ್ ಈಗ ಫೋರ್ಕ್ ಮಾಡಲಾಗಿದ್ದು, ಅದು ನಿರೀಕ್ಷಿಸಿದಂತೆ ಹಿನ್ನೆಲೆಯಲ್ಲಿ ಚಲಾಯಿತಗೊಳ್ಳುತ್ತದೆ. rsyslogd ಹಿನ್ನಲೆಯಲ್ಲಿ ಸ್ವಯಂಚಾಲಿತವಾಗಿ ಚಾಲನೆಗೊಳ್ಳುವುದನ್ನು ತಪ್ಪಿಸಲು -n ಆಯ್ಕೆಯನ್ನು ಬಳಸಬಹುದಾಗಿರುತ್ತದೆ ಎನ್ನುವುದನ್ನು ಗಮನಿಸಿ.

Rsyslog ನ ಈ ಆವೃತ್ತಿಯಲ್ಲಿ ಪರಿಚಯಿಸಲಾದ ಬದಲಾವಣೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ http://www.rsyslog.com/doc/v5compatibility.html. ಅನ್ನು ನೋಡಿ

ಪುನರಾವರ್ತನಾ ಇತಿಹಾಸ

ಪರಿಷ್ಕರಣೆಯ ಇತಿಹಾಸ
ಪರಿಷ್ಕರಣೆ 1-0.2.3Tue Dec 11 2012ShankarPrasad Venkateshbhat
message
ಪರಿಷ್ಕರಣೆ 1-0.2.2Tue Dec 11 2012ShankarPrasad Venkateshbhat
message
ಪರಿಷ್ಕರಣೆ 1-0.2.1Tue Dec 11 2012Chester Cheng
Translation files synchronised with XML sources 1-0.2
ಪರಿಷ್ಕರಣೆ 1-0.2Tue Dec 11 2012Martin Prpič
Red Hat Enterprise Linux 5.9 ರ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ
ಪರಿಷ್ಕರಣೆ 1-0.1Mon Sep 24 2012Martin Prpič
Translation files synchronised with XML sources 1-0
ಪರಿಷ್ಕರಣೆ 1-0Thu Sep 20 2012Martin Prpič
Red Hat Enterprise Linux 5.9 ರ ಬೀಟಾ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ