Product SiteDocumentation Site

Red Hat Enterprise Linux 6

Release Notes

Red Hat Enterprise Linux 6.4 ಗಾಗಿನ ಬಿಡುಗಡೆ ಟಿಪ್ಪಣಿಗಳು

ಆವೃತ್ತಿ 4


Legal Notice

Copyright © 2012 Red Hat, Inc.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
All other trademarks are the property of their respective owners.


1801 Varsity Drive
 RaleighNC 27606-2072 USA
 Phone: +1 919 754 3700
 Phone: 888 733 4281
 Fax: +1 919 754 3701

ಸಾರಾಂಶ
Red Hat Enterprise Linux 6.4 ರಲ್ಲಿ ಅನ್ವಯಿಸಲಾಗಿರುವ ಸುಧಾರಣೆಗಳು ಹಾಗು ಸೇರ್ಪಡೆಗಳನ್ನು ಅತ್ಯುತ್ತಮ ಮಟ್ಟದ ವಿವರಣೆಯನ್ನು ಬಿಡುಗಡೆ ಟಿಪ್ಪಣಿಗಳು ಒದಗಿಸುತ್ತದೆ. 6.4 ಗಾಗಿನ Red Hat Enterprise Linux ಗೆ ಮಾಡಲಾದ ಅಪ್‌ಡೇಟ್‌ನ ಕುರಿತದಾದ ವಿವರವಾದ ದಸ್ತಾವೇಜನ್ನು ನೋಡಲು ತಾಂತ್ರಿಕ ಟಿಪ್ಪಣಿಗಳನ್ನು ನೋಡಿ

ಮುನ್ನುಡಿ
1. ಅನುಸ್ಥಾಪನೆ
2. ಕರ್ನಲ್
3. ಸಾಧನದ ಚಾಲಕಗಳು
4. ಜಾಲಬಂಧ
5. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ
6. ಸುರಕ್ಷತೆ
7. ಎಂಟೈಟಲ್ಮೆಂಟ್
8. ವರ್ಚುವಲೈಸೇಶನ್
8.1. KVM
8.2. ಹೈಪರ್-V
8.3. VMware ESX
9. ಕ್ಲಸ್ಟರಿಂಗ್
10. ಶೇಖರಣೆ
11. ಕಂಪೈಲರ್ ಹಾಗು ಉಪಕರಣಗಳು
12. ಸಾಮಾನ್ಯ ಅಪ್‌ಡೇಟ್‌ಗಳು
A. ಪರಿಷ್ಕರಣ ಇತಿಹಾಸ

ಮುನ್ನುಡಿ

Red Hat Enterprise Linux ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 6.4 ಬಿಡುಗಡೆ ಟಿಪ್ಪಣಿಗಳಲ್ಲಿನ Red Hat Enterprise Linux 6 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಕಿರು ಬಿಡುಗಡೆಯಲ್ಲಿ ಮಾಡಲಾದ ವಿವರಣೆಗಳಿಗಾಗಿ ತಾಂತ್ರಿಕ ಟಿಪ್ಪಣಿಗಳನ್ನು ನೋಡಿ.

ಪ್ರಮುಖ ಅಂಶ

ಇಲ್ಲಿರುವ ಆನ್‌ಲೈನ್ Red Hat Enterprise Linux 6.4 ಬಿಡುಗಡೆ ಟಿಪ್ಪಣಿಗಳನ್ನು ವಿವರಣಾತ್ಮಕವಾದ, ಅತ್ಯಂತ ನವೀನವಾದಂತಹ ಒಂದು ಆವೃತ್ತಿ ಎಂದು ಪರಿಗಣಿಸಲಾಗುತ್ತದೆ. ಗ್ರಾಹಕರು ಯಾವುದೆ ರೀತಿ ಸಂದೇಹಗಳನ್ನು ಹೊಂದಿದ್ದಲ್ಲಿ ತಮ್ಮಲ್ಲಿರುವ Red Hat Enterprise Linux ನ ಆವೃತ್ತಿಗೆ ಸೂಕ್ತವಾದ ಬಿಡುಗಡೆ ಮತ್ತು ತಾಂತ್ರಿಕ ಟಿಪ್ಪಣಿಗಳನ್ನು ನೋಡುವುದು ಉತ್ತಮ.
Red Hat Enterprise Linux ಜೀವನಚಕ್ರದ ಅಗತ್ಯವಿದೆಯೆ, ಹಾಗಿದ್ದಲ್ಲಿ https://access.redhat.com/support/policy/updates/errata/ ಅನ್ನು ನೋಡಿ.

ಅಧ್ಯಾಯ 1. ಅನುಸ್ಥಾಪನೆ

ಕಿಕ್‌ಸ್ಟಾರ್ಟ್ ಕಡತದಲ್ಲಿ FCoE ಬೆಂಬಲ

Red Hat Enterprise Linux 6.4 ಅನ್ನು ಅನುಸ್ಥಾಪಿಸಲು ಕಿಕ್‌ಸ್ಟಾರ್ಟ್ ಕಡತವನ್ನು ಬಳಸುವಾಗ, ಹೊಸ fcoe ಕಿಕ್‌ಸ್ಟಾರ್ಟ್ ಆಯ್ಕೆಯ ಮೂಲಕ ಎನ್‌ಹ್ಯಾನ್ಸಡ್ ಡಿಸ್ಕ್‍‍ ಡ್ರೈವ್‌ನ (EDD) ಜೊತೆಗೆ ಯಾವ ಫೈಬರ್ ಚಾನಲ್ ಓವರ್ ಇತರ್ನೆಟ್ (FCoE) ಸಾಧನಗಳನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಬೇಕು ಎನ್ನುವುದನ್ನು ಸೂಚಿಸಬಹುದು. ಹೆಚ್ಚಿನ ಮಾಹಿತಿಗಾಗಿ Red Hat Enterprise Linux 6 ಅನುಸ್ಥಾಪನಾ ಮಾರ್ಗದರ್ಶಿಯಲ್ಲಿನ ಕಿಕ್‌ಸ್ಟಾರ್ಟ್ ಆಯ್ಕೆಗಳು ಎನ್ನುವ ವಿಭಾಗವನ್ನು ನೋಡಿ.

VLAN ಮುಖಾಂತರ ಅನುಸ್ಥಾಪನೆ

Red Hat Enterprise Linux 6.4 ರಲ್ಲಿ, vlanid= ಬೂಟ್ ಆಯ್ಕೆ ಮತ್ತು --vlanid= ಕಿಕ್‌ಸ್ಟಾರ್ಟ್ ಆಯ್ಕೆಯು ಒಂದು ವರ್ಚುವಲ್ LAN ID (802.1q tag) ಅನ್ನು ಹೊಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಒಂದು ಆಯ್ಕೆಗಳನ್ನು ಹೊಂದಿಸುವ ಮೂಲಕ, ವ್ಯವಸ್ಥೆಯ ಅನುಸ್ಥಾಪನೆಯನ್ನು VLAN ಮೂಲಕ ನಡೆಸಲು ಸಾಧ್ಯವಿರುತ್ತದೆ.

ಬಂಧವನ್ನು ಸಂರಚಿಸುವಿಕೆ

bond ಬೂಟ್ ಆಯ್ಕೆ ಮತ್ತು --bondslaves ಹಾಗೂ --bondopts ಕಿಕ್‌ಸ್ಟಾರ್ಟ್ ಆಯ್ಕೆಗಳನ್ನು ಈಗ ಬಂಧವನ್ನು (ಬಾಂಡಿಂಗ್) ಸಂರಚಿಸಲು ಅನುಸ್ಥಾಪನಾ ಪ್ರಕ್ರಿಯೆಯ ಒಂದು ಭಾಗವಾಗಿ ಬಳಸಬಹುದಾಗಿದೆ. ಬಂಧದ ಸಂರಚನೆಯನ್ನು ಹೇಗೆ ಮಾಡಬಹುದೆ ಎನ್ನುವ ಕುರಿತಾದ ಮಾಹಿತಿಗಾಗಿ Red Hat Enterprise Linux 6 ಅನುಸ್ಥಾಪನಾ ಮಾರ್ಗದರ್ಶಿಯಲ್ಲಿನ ಈ ಕೆಳಗಿನ ಭಾಗಗಳನ್ನು ನೋಡಿ: ಕಿಕ್‌ಸ್ಟಾರ್ಟ್ ಆಯ್ಕೆಗಳು ವಿಭಾಗ ಮತ್ತು ಬೂಟ್ ಆಯ್ಕೆಗಳು ಅಧ್ಯಾಯ.

ಅಧ್ಯಾಯ 2. ಕರ್ನಲ್

ಫೈಬರ್ ಚಾನಲ್ ಪ್ರೊಟೊಕಾಲ್: ಎಂಡ್-ಟು-ಎಂಡ್ ದತ್ತಾಂಶ ಸ್ಥಿರತೆಯ ಪರಿಶೀಲನೆ

Red Hat Enterprise Linux 6.4 ರಲ್ಲಿ ಎಂಡ್-ಟು-ಎಂಡ್ (E2E) ದತ್ತಾಂಶ ಸ್ಥಿರತೆ ಪರಿಶೀಲನೆಗಾಗಿನ ಸುಧಾರಿತ T10 DIF SCSI ಶಿಷ್ಟತೆಯ zFCP-ನಿಶ್ಚಿತವಾದ ಭಾಗವನ್ನು ಅಳವಡಿಸುವ ಮೂಲಕ ಆತಿಥೇಯ ಗಣಕದ ಅಡಾಪ್ಟರ್ ಮತ್ತು ಶೇಖರಣಾ ಪೂರೈಕೆಗಣಕದ ನಡುವಿನ ದತ್ತಾಂಶ ಸಂಘಟನೆಯನ್ನು ಸುಧಾರಿಸಲಾಗಿದೆ.

IBM System z ಗಾಗಿನ ಫ್ಲ್ಯಾಶ್ ಎಕ್ಸ್‍ಪ್ರೆಸ್ ಬೆಂಬಲ

IBM System z ಗಾಗಿನ ಸ್ಟೋರೇಜ್-ಕ್ಲಾಸ್ ಮೆಮೊರಿ (SCM) ಎನ್ನುವುದು ಶೇಖರಣೆ ಮತ್ತು ಮೆಮೊರಿಯ ಗುಣಗಳನ್ನು ಒಂದುಗೂಡಿಸುತ್ತದೆ. System z ಗಾಗಿನ SCM ಈಗ ಫ್ಲಾಶ್ ಎಕ್ಸ್‍ಪ್ರೆಸ್ ಮೆಮೊರಿಯನ್ನು ಬೆಂಬಲಿಸುತ್ತದೆ. SCM ಏರಿಕೆಗಳನ್ನು ಎಕ್ಸ್ಟೆಂಡೆಂಡ್ ಅಸಿಂಕ್ರೋನಸ್ ಡೇಟಾ ಮೂವರ್ (EADM) ಸಬ್‌ಚಾನಲ್‌ ಮುಖಾಂತರ ನಿಲುಕಿಸಿಕೊಳ್ಳಬಹುದಾಗಿದೆ. ಪ್ರತಿ ಏರಿಕೆಯನ್ನೂ ಸಹ ಒಂದು ಖಂಡ ಸಾಧನದಿಂದ ಸೂಚಿಸಲಾಗುತ್ತದೆ. ಈ ಸವಲತ್ತು ಪೇಜಿಂಗ್ ದರವನ್ನು ಸುಧಾರಿಸುತ್ತದೆ ಮತ್ತು ತಾತ್ಕಾಲಿಕ ಶೇಖರಣೆಗಾಗಿ ಕಾರ್ಯನಿರ್ವಹಣೆಯನ್ನು ನಿಲುಕಿಸಿಕೊಳ್ಳಲಲು ಸಾಧ್ಯವಿರುತ್ತದೆ, ಉದಾಹರಣೆಗೆ ಡೇಟಾ ವೇರ್-ಹೌಸಿಂಗ್.

ಓಪನ್ vSwitch ಕರ್ನಲ್‌ ಮಾಡ್ಯೂಲ್

Red Hat Enterprise Linux 6.4 ರಲ್ಲಿ Open vSwitch ಕರ್ನಲ್ ಮಾಡ್ಯೂಲ್ ಅನ್ನು Red Hat ನಿಂದ ಒದಗಿಸಲಾಗುವ ಲೇಯರ್ಡ್ ಉತ್ಪನ್ನಗಳನ್ನು ಸಕ್ರಿಯಗೊಳಿಸುವ ಸಾಧನವಾಗಿ ಸೇರಿಸಲಾಗಿದೆ. Open vSwitch ಅನ್ನು ಕೇವಲ ಬಳಕೆದಾರ ಸ್ಥಳದ ಸವಲತ್ತುಗಳ ಜೊತೆ ಇರುವ ಉತ್ಪನ್ನಗಳೊಂದಿಗಿದ್ದಲ್ಲಿ ಮಾತ್ರ ಬೆಂಬಲಿಸಲಾಗುತ್ತದೆ ಎನ್ನುವುದನ್ನು ನೆನಪಿಡಿ. ಈ ಅಗತ್ಯವಿರುವ ಬಳಕೆದಾರ ಸ್ಥಳದ ಸವಲತ್ತುಗಳಿಲ್ಲದೆ, Open vSwitch ಕೆಲಸ ಮಾಡುವುದಿಲ್ಲ ಮತ್ತು ಬಳಕೆಯ ಸಲುವಾಗಿ ಸಕ್ರಿಯಗೊಳಿಸಲು ಸಾಧ್ಯವಿರುವುದಿಲ್ಲ ಎನ್ನುವುದನ್ನು ನೆನಪಿಡಿ. ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ನಾಲೆಜ್ ಬೇಸ್ ಲೇಖನವನ್ನು ನೋಡಿ: https://access.redhat.com/knowledge/articles/270223.

ಬೂಟ್ ಮಾಡಲಾದ ವ್ಯವಸ್ಥೆ ಮತ್ತು ಡಂಪ್ ಮಾಡಲಾದ ವ್ಯವಸ್ಥೆಯ ನಡುವಿನ ಹೋಲಿಕೆ

ಈ ಸವಲತ್ತು ಚಿತ್ರಿಕೆ ವರ್ಗಾವಣೆಯಲ್ಲಿ ಸೇರಿಸಲಾದ ಬದಲಾವಣೆಗಳನ್ನು ಸಕ್ಷಮವಾಗಿ ವಿಶ್ಲೇಷಿಸಲು ಬೂಟ್‌ ಮಾಡಲಾದ ವ್ಯವಸ್ಥೆ ಮತ್ತು ಡಂಪ್ ಮಾಡಲಾದ ವ್ಯವಸ್ಥೆಯ ನಡುವೆ ತಾಳೆ ಮಾಡುತ್ತದೆ . ಒಂದು ಅತಿಥಿಗಣಕವನ್ನು ಗುರುತಿಸಲು, stsi ಮತ್ತು stfle ದತ್ತಾಂಶವನ್ನು ಬಳಸಲಾಗುತ್ತದೆ. lgr_info_log() ಎನ್ನುವ ಹೊಸ ಕಾರ್ಯವಿಧಾನವು ಪ್ರಸಕ್ತ ದತ್ತಾಂಶವನ್ನು (lgr_info_cur) ಕೊನೆಯದಾಗಿ ದಾಖಲೆ ಮಾಡಲಾದ ದತ್ತಾಂಶದೊಂದಿಗೆ (lgr_info_last) ತಾಳೆ ಮಾಡಿನೋಡುತ್ತದೆ.

Perf ಉಪಕರಣವನ್ನು ಅಪ್‌ಡೇಟ್ ಮಾಡಲಾಗಿದೆ

perf ಉಪಕರಣವನ್ನು ಆವೃತ್ತಿ 3.6-rc7 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಹಲವಾರು ದೋಷ ಪರಿಹಾರಗಳು ಮತ್ತು ಸುಧಾರಣೆಗಳನ್ನು ಒದಗಿಸುತ್ತದೆ. ಗಮನಾರ್ಹವಾದ ಸುಧಾರಣೆಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:
  • Kprobe ಘಟನೆಗಳ ಬೆಂಬಲವನ್ನು ಸೇರಿಸಲಾಗಿದೆ.
  • ಒಂದು ಹೊಸ perf ಘಟನೆ ಆಜ್ಞಾ ಸಾಲಿನ ಸಿಂಟ್ಯಾಕ್ಸನ್ನು ಸೇರಿಸಲಾಗಿದೆ, ಇದು ಘಟನೆಯ ಗುಂಪುಗಳಲ್ಲಿನ ವಿವರಣೆಯಲ್ಲಿ ಕರ್ಲಿ ಆವರಣ ಚಿಹ್ನೆಗಳನ್ನು ({ ಮತ್ತು }) ಬಳಸಲು ಅನುಮತಿಸುತ್ತದೆ. ಉದಾಹರಣೆಗೆ : {cycles,cache-misses}.
  • perf ಟಿಪ್ಪಣಿ ಜಾಲವೀಕ್ಷಕವನ್ನು ASM ಕರೆಗಳು ಮತ್ತು ಜಂಪ್‌ಗಳ ಮುಖಾಂತರ ನ್ಯಾವಿಗೇಶನ್ ಅನ್ನು ಅನುಮತಿಸಲು ಉತ್ತಮಪಡಿಸಲಾಗಿದೆ.
  • perf ಉಪಕರಣವನ್ನು ಹೊಸ --uid ಆಜ್ಞಾ ಸಾಲಿನ ಆಯ್ಕೆಯೊಂದಿಗೆ ಪ್ರತಿ ಬಳಕೆದಾರರ ನೋಟವನ್ನು ಒದಗಿಸುವಂತೆ ಅಪ್‌ಡೇಟ್ ಮಾಡಲಾಗಿದೆ. perf ಬಳಸಿದಲ್ಲಿ ಒಂದು ನಿಶ್ಚಿತ ಬಳಕೆದಾರರಿಗಾಗಿ ಮಾತ್ರವಾದ ಕಾರ್ಯಗಳನ್ನಷ್ಟೆ ತೋರಿಸುತ್ತದೆ.
  • perf ಉಪಕರಣವು ಸ್ವಯಂಚಾಲಿತ ಪರೀಕ್ಷೆಗಳ ಒಂದು ವೈವಿಧ್ಯವಾದ ಸ್ವಯಂಚಾಲಿತ ಪರೀಕ್ಷೆಗಳನ್ನು ಒದಗಿಸುತ್ತದೆ.

ಅನ್‌ಕೋರ್ PMU ಬೆಂಬಲ

Red Hat Enterprise Linux 6.4 ರೊಂದಿಗೆ ಕಳುಹಿಸಲಾಗುವ ಕರ್ನಲ್ Intel Xeon Processor X55xx ಮತ್ತು Intel Xeon Processor X56xx ಕುಟುಂಬದ ಸಂಸ್ಕಾರಕಗಳಿಗಾಗಿನ perf ಘಟನೆ ಉಪವ್ಯವಸ್ಥೆಗೆ "ಅನ್‌ಕೋರ್" ಪರ್ಫಾಮೆನ್ಸ್ ಮಾನೀಟರಿಂಗ್ ಯುನಿಟ್ (PMU) ಬೆಂಬಲವನ್ನು ಸೇರಿಸುತ್ತದೆ. "ಅನ್‌ಕೋರ್" ಎನ್ನುವುದು ಹಲವಾರು ಕೋರುಗಳಿಂದ ಹಂಚಿಕೊಳ್ಳಲಾದ ಭೌತಿಕ ಸಂಸ್ಕಾರಕ ಪ್ಯಾಕೇಜಿನಲ್ಲಿನ ಉಪವ್ಯವಸ್ಥೆಗಳನ್ನು ಸೂಚಿಸುತ್ತದೆ, ಉದಾಹರಣೆಗೆ L3 ಕ್ಯಾಶೆ. ಅನ್‌ಕೋರ್ PMU ಬೆಂಬಲದೊಂದಿಗೆ, ಪ್ಯಾಕೇಜು ಮಟ್ಟದಲ್ಲಿ ಕಾರ್ಯನಿರ್ವಹಣಾ ದತ್ತಾಂಶವನ್ನು ಸುಲಭವಾಗಿ ಸಂಗ್ರಹಿಸಬಹುದಾಗಿರುತ್ತದೆ.
perf ಮೂಲಕ ದೋಷನಿದಾನವನ್ನು ಅನುಮತಿಸುವಂತೆ PMU ಘಟನೆಗಳ ಪಾರ್ಸಿಂಗ್ ಅನ್ನೂ ಸಹ ಸಕ್ರಿಯಗೊಳಿಸಲಾಗಿದೆ.

memcg ಮೆಮೊರಿ ಹೊರೆ ಕಡಿತಗೊಳಿಕೆ

ಮೆಮೊರಿ ನಿಯಂತ್ರಣ ಗುಂಪುಗಳು ತಮ್ಮದೆ ಆದ ಲೀಸ್ಟ್‍ ರೀಸೆಂಟ್ಲಿ ಯೂಸ್ಡ್‍ (LRU) ಪಟ್ಟಿಯನ್ನು ಹೊಂದಿರುತ್ತವೆ, ಉದಾಹರಣೆಗೆ, ರಿಕ್ಲೈಮ್ ಮೆಮೊರಿ. ಈ ಲಿಸ್ಟ್‍ ಜಾಗತಿಕ ಪ್ರತಿ-ವಲಯ LRU ಪಟ್ಟಿಯ ಮೇಲ್ಭಾಗದಲ್ಲಿ ಇರಬೇಕು. Red Hat Enterprise Linux 6.4 ರಲ್ಲಿ, ಜಾಗತಿಕ ಪ್ರತಿ-ವಲಯ LRU ಪಟ್ಟಿಯನ್ನು ನಿಷ್ಕ್ರಿಯಗೊಳಿಸುವ ಮತ್ತು ಅದರ ಬಳಕೆದಾರರು ಬದಲಿಗೆ ಪ್ರತಿ-ಮೆಮೊರಿ cgroup ಪಟ್ಟಿಗಳ ಮೇಲೆ ಕೆಲಸ ಮಾಡುವಂತೆ ಪರಿವರ್ತಿಸುವ ಮೂಲಕ memcg ಗಾಗಿನ ಮೆಮೊರಿಯ ಹೊರೆಯನ್ನು ಕಡಿಮೆ ಮಾಡಲಾಗಿದೆ.

ಮೆಮೊರಿ ಹಿಂಪಡೆಯುವಿಕೆ (ರಿಕ್ಲೇಮ್) ಮತ್ತು ಸಂಕುಚನಗೊಳಿಸುವಿಕೆ (ಕಾಂಪ್ಯಾಕ್ಟ್‍‍)

Red Hat Enterprise Linux 6.4 ರಲ್ಲಿನ ಕರ್ನಲ್‌ ದೊಡ್ಡ ಮೊತ್ತದ-ಕೋರಿಕೆಯ ನಿಯೋಜನೆ ಮನವಿಗಳಿಗಾಗಿ ಅಥವ ಮೆಮೊರಿ ಒತ್ತಡದಲ್ಲಿ ಹಿಂಪಡೆಯುವಿಕೆ (ರಿಕ್ಲೇಮ್) ಮತ್ತು ಸಂಕುಚನಗೊಳಿಸುವಿಕೆ (ಕಾಂಪ್ಯಕ್ಟ್‍‍) ಅನ್ನು ಬಳಸುತ್ತದೆ.

ಟ್ರಾನ್ಸಾಕ್ಶನಲ್ ಎಕ್ಸಿಕ್ಯೂಶನ್ ಸೌಲಭ್ಯ ಮತ್ತು ರನ್‌ಟೈಮ್ ಇನ್‌ಸ್ಟ್ರುಮೆಂಟೇಶನ್ ಸೌಲಭ್ಯಕ್ಕಾಗಿ ಬೆಂಬಲ

ಲಿನಕ್ಸ್ ಕರ್ನಲ್‌ನಲ್ಲಿನ ಟ್ರಾನ್ಸಾಕ್ಶನಲ್ ಎಕ್ಸಿಕ್ಯೂಶನ್ ಸೌಲಭ್ಯದ ಬೆಂಬಲವು (IBM zEnterprise EC12 ಯೊಂದಿಗೆ ಲಭ್ಯವಿರುವ) ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ತಂತ್ರಾಂಶ ಲಾಕಿಂಗ್ ಓವರ್ಹೆಡ್ ಅನ್ನು ನಿವಾರಿಸುತ್ತದೆ ಮತ್ತು ಹೆಚ್ಚಿನ ವ್ಯವಹಾರ ತ್ರೂಪುಟ್ ಅನ್ನು ಪಡೆಯಲು ಹೆಚ್ಚಿನ ಸ್ಕೇಲೆಬಿಲಿಟಿಯನ್ನು ಮತ್ತು ಸಮಾನಾಂತರಗೊಳಿಕೆಯನ್ನು ಒದಗಿಸುತ್ತದೆ. ರನ್‌ಟೈಮ್ ಇನ್‌ಸ್ಟ್ರುಮೆಂಟೇಶನ್ ಸೌಲಭ್ಯಕ್ಕಾಗಿನ ಬೆಂಬಲವು (IBM zEnterprise EC12 ನೊಂದಿಗೆ ಲಭ್ಯವಿರುವ) ಉತ್ತಮ ವಿಶ್ಲೇಷಣೆಗಾಗಿ ಪ್ರೊಫೈಲ್ ಪ್ರೊಗ್ರಾಮ್‌ಗೆ ಸುಧಾರಿತ ರಚನಾ ವ್ಯವಸ್ಥೆಯನ್ನು ಮತ್ತು ಹೊಸ IBM JVM ಇಂದ ಉತ್ಪಾದಿಸಲಾದ ಸಂಕೇತದ (ಕೋಡ್) ಸೂಕ್ತಗೊಳಿಕೆಯನ್ನು ಒದಗಿಸುತ್ತದೆ.

ವಿಫಲ-ತೆರೆಯು ಸ್ಥಿತಿ

Red Hat Enterprise Linux 6.4 ರಲ್ಲಿ netfilter ನ NFQUEUE ಗುರಿಯನ್ನು ಬಳಸುವಾಗ ಹೊಸ ವಿಫಲ-ತೆರೆಯುವಿಕೆ ಸ್ಥಿತಿಗಾಗಿ ಬೆಂಬಲವನ್ನು ಸೇರಿಸಲಾಗಿದೆ. ಈ ಸ್ಥಿತಿಯಲ್ಲಿ ಬಳಕೆದಾರರು ಹೆಚ್ಚು ದಟ್ಟಣೆಯ ಜಾಲಬಂಧದಲ್ಲಿ ಪ್ಯಾಕೆಟ್ ಪರಿಶೀಲನೆಯನ್ನು ತಾತ್ಕಾಲಿಕ ನಿಷ್ಕ್ರಿಯಗೊಳಿಸಲು ಮತ್ತು ಸಂಪರ್ಕವು ಹಾಗೆಯೆ ಇರುವಂತೆ ನೋಡಿಕೊಳ್ಳಲು ಬಳಕೆದಾರರಿಗಾಗಿ ಅನುವು ಮಾಡಿಕೊಡುತ್ತದೆ.

IBM System z ಗಾಗಿನ kdump ಮತ್ತು kexec ಕರ್ನಲ್ ಡಂಪಿಂಗ್ ಮೆಕಾನಿಸಮ್ ಈಗ ಸಂಪೂರ್ಣವಾಗಿ ಬೆಂಬಲಿತವಾಗಿದೆ

Red Hat Enterprise Linux 6.4, ರಲ್ಲಿ IBM System z ಪ್ರತ್ಯೇಕ ಮತ್ತು ಹೈಪರ್ವೈಸರ್ ಡಂಪಿಂಗ್ ರಚನಾವ್ಯವಸ್ಥೆಯ ಜೊತೆಗೆ IBM System z ವ್ಯವಸ್ಥೆಗಳಿಗಾಗಿ kdump/kexec ಕರ್ನಲ್ ಡಂಪಿಂಗ್ ರಚನಾವ್ಯವಸ್ಥೆಯನ್ನು ಸಂಪೂರ್ಣ ಬೆಂಬಲಿತ ಸವಲತ್ತಾಗಿ ಸಕ್ರಿಯಗೊಳಿಸಲಾಗಿದೆ. ಸ್ವಯಂ-ಕಾದಿರಿಸುವಿಕೆಯ ಮಿತಿಯನ್ನು 4 Gb ಗೆ ಹೊಂದಿಸಲಾಗಿದೆ; ಆದ್ದರಿಂದ, ಯಾವುದೆ 4 GB ಗಿಂತ ಹೆಚ್ಚಿನ ಮೆಮೊರಿಯನ್ನು ಹೊಂದಿರುವ IBM System z ವ್ಯವಸ್ಥೆಗಳಲ್ಲಿ kdump/kexec ರಚನಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗುತ್ತದೆ.
kdump ಅಂದಾಜು 128 MB ಯಷ್ಟು ಮೆಮೊರಿಯನ್ನು ಕಾದಿರಿಸಿಕೊಳ್ಳುವುದರಿಂದ ಸಾಕಷ್ಟು ಮೆಮೊರಿಯು ಲಭ್ಯವಿರಬೇಕಾಗುತ್ತದೆ. ಇದು ಸಾಮಾನ್ಯವಾಗಿ Red Hat Enterprise Linux 6.4 ಕ್ಕೆ ನವೀಕರಿಸುವ ಸಂದರ್ಭದಲ್ಲಿ ಪ್ರಮುಖ ಅಗತ್ಯವಾಗಿರುತ್ತದೆ. ವ್ಯವಸ್ಥೆಯು ಕುಸಿತಗೊಂಡಾಗ ಡಂಪ್ ಅನ್ನು ಶೇಖರಿಸಿ ಇಡಲು ಸಾಕಷ್ಟು ಡಿಸ್ಕ್‍ ಜಾಗವು ಲಭ್ಯವಿರುವುದು ಅತ್ಯಗತ್ಯ.
ನೀವು /etc/kdump.conf, system-config-kdump, ಅಥವ firstboot ಮುಖಾಂತರ kdump ಅನ್ನು ಸಂರಚಿಸಲು ಅಥವ ನಿಷ್ಕ್ರಿಯಗೊಳಿಸಲು ಸಾಧ್ಯವಿರುತ್ತದೆ.

KVM ಗಾಗಿ TSC ಡೆಡ್‌ಲೈನ್ ಬೆಂಬಲ

TSC ಡೆಡ್‌ಲೈನ್ ಟೈಮರ್ ಎನ್ನುವುದು ಲೋಕಲ್ APIC (LAPIC) ಟೈಮರಿನ ಒಂದು ಹೊಸ ಸ್ಥಿತಿಯಾಗಿದೆ, ಇದು ಪ್ರಸಕ್ತ APIC ಕ್ಲಾಕ್ ಎಣಿಕೆ ಕಾಲಾವಧಿಯ ಜಾಗದಲ್ಲಿ TSC ಡೆಡ್‌ಲೈನ್‌ ಆಧಾರದಲ್ಲಿ ಒಂದು-ಬಾರಿಯ ಟೈಮರ್ ತಡೆಗಳನನ್ನು ಉತ್ಪಾದಿಸುತ್ತದೆ. ಇದು OS ಅನುಸೂಚಕಕ್ಕೆ ಲಾಭ ಉಂಟುಮಾಡಲು ಹೆಚ್ಚು ನಿಖರವಾದ ಟೈಮರ್ ತಡೆಗಳನ್ನು (1 ಟಿಕ್‌ಗಿಂತ ಕಡಿಮೆಯಾದ) ಒದಗಿಸುತ್ತದೆ. KVM ಈಗ ಈ ಸವಲತ್ತನ್ನು ಅತಿಥಿಗಣಕಗಳಿಗೆ ಒಡ್ಡುತ್ತದೆ.

ಸ್ಥಿರ ಸಾಧನ ಹೆಸರಿಡುವಿಕೆ

ಈ ಸವಲತ್ತು ಮ್ಯಾಪಿಂಗ್ ಸಾಧನದ ಹೆಸರುಗಳನ್ನು (ಉದಾಹರಣೆಗೆ, sda, sdb, ಮತ್ತು ಇತರೆ) ಮತ್ತು ಕರ್ನಲ್‌ ಸಂದೇಶಗಳಿಗೆ ಸ್ಥಿರ ಸಾಧನದ ಹೆಸರುಗಳನ್ನು (/dev/disk/by-*/ ನಲ್ಲಿudev ಇಂದ ಒದಗಿಸಲಾದ) ಶೇಖರಿಸಿ ಇರಿಸುತ್ತದೆ. ಇದು ಕರ್ನಲ್ ಸಂದೇಶಗಳಿಂದ ಒಂದು ಸಾಧನವನ್ನು ಗುರುತಿಸಲು ಬಳಕೆದಾರರಿಗೆ ನೆರವು ನೀಡುತ್ತದೆ. dmesg ಆಜ್ಞೆಯಿಂದ ತೋರಿಸಲಾಗುವ /dev/kmsg ದಿನಚರಿಯು ಈಗ ಕರ್ನಲ್‌ ಸಾಧನಗಳಿಗಾಗಿ udev ರಚಿಸಿದ ಸಾಂಕೇತಿಕ ಕೊಂಡಿಗಳಿಗಾಗಿನ ಸಂದೇಶಗಳನ್ನು ತೋರಿಸುತ್ತದೆ. ಈ ಸಂದೇಶಗಳನ್ನು ಈ ಕೆಳಗಿನ ವಿನ್ಯಾಸದಲ್ಲಿ ತೋರಿಸಲಾಗುತ್ತದೆ:
udev-alias: <device_name> (<symbolic_link> <symbolic link> …)
ಯಾವುದೆ ದಿನಚರಿ ವಿಶ್ಲೇಷಕವು ಈ ಸಂದೇಶಗಳನ್ನು ತೋರಿಸಬಲ್ಲದು, ಹಾಗೂ ಇದನ್ನು syslog ಮುಖಾಂತರ /var/log/messages ಗೆ ಉಳಿಸಲಾಗುತ್ತದೆ.

ಹೊಸ linuxptp ಪ್ಯಾಕೇಜು

linuxptp ಪ್ಯಾಕೇಜನ್ನುRed Hat Enterprise Linux 6.4 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದ್ದು, ಇದು ಲಿನಕ್ಸಿಗಾಗಿನ IEEE ಶಿಷ್ಟತೆಯ 1588 ಗೆ ಅನುಗುಣವಾಗಿನ ಪ್ರಿಸಿಶನ್ ಟೈಮ್ ಪ್ರೊಟೊಕಾಲ್‌ನ (PTP) ಅಳವಡಿಕೆಯಾಗಿದೆ. ಇಬ್ಬಗೆಯ ವಿನ್ಯಾಸದ ಉದ್ಧೇಶವು ಶಿಷ್ಟತೆಯ ಒಂದು ಸದೃಢವಾದ ಅಳವಡಿಕೆಯನ್ನು ಹೊಂದುವುದು ಮತ್ತು ಲಿನಕ್ಸ್ ಕರ್ನಲ್‌ನಿಂದ ಒದಗಿಸಲಾಗುವ ಹೆಚ್ಚು ಸಮಂಜಸವಾದ ಹಾಗು ಆಧುನಿಕ ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್‌ಗಳನ್ನು (API) ಬಳಸವುದಾಗಿರುತ್ತದೆ. ಸಾಂಪ್ರದಾಯಿಕ APIಗಳನ್ನು ಮತ್ತು ಇತರೆ ಪ್ಲಾಟ್‌ಫಾರ್ಮುಗಳನ್ನು ಬೆಂಬಲಿಸುವುದು ಇದರ ಉದ್ಧೇಶವಲ್ಲ.

ಪಾರದರ್ಶಕ ಹ್ಯೂಜ್‌ಪೇಜಸ್‌ದಸ್ತಾವೇಜು

ಪಾರದರ್ಶಕ ಹ್ಯೂಜ್‌ಪೇಜಸ್‌ಗಾಗಿನ ದಸ್ತಾವೇಜನ್ನು ಈ ಕೆಳಗಿನ ಕಡತಕ್ಕೆ ಸೇರಿಸಲಾಗಿದೆ:
/usr/share/doc/kernel-doc-<version>/Documentation/vm/transhuge.txt

ಡಂಪ್ ಗುರಿಗಳಿಗಾಗಿನ ಬೆಂಬಲದ ಸ್ಥಿತಿ

Red Hat Enterprise Linux 6.4 ರಲ್ಲಿ, /usr/share/doc/kexec-tools-2.0.0/kexec-kdump-howto.txt ಕಡತವು ಡಂಪ್ ಗುರಿಯ ಬೆಂಬಲದ ಸ್ಥಿತಿ ಟ್ಯಾಗ್ ಅಡಿಯಲ್ಲಿ ಬೆಂಬಲಿತ, ಬೆಂಬಲವಿರದ, ಮತ್ತು ಅಜ್ಞಾತ ಡಂಪ್ ಗುರಿಗಳ ಒಂದು ವಿಸ್ತಾರವಾದ ಪಟ್ಟಿಯನ್ನು ಒದಗಿಸುತ್ತದೆ.

ಅಧ್ಯಾಯ 3. ಸಾಧನದ ಚಾಲಕಗಳು

ಶೇಖರಣಾ ಚಾಲಕಗಳು

  • ಯಂತ್ರಾಂಶ ಅಥವ ಮೈಕ್ರೊಕೋಡ್‌ನಿಂದ ಪತ್ತೆ ಮಾಡಲು ಸಾಧ್ಯವಾಗದೆ ಇರುವಂತಹ ಮಾರ್ಗ ಸಂರಚನಾ ದೋಷಗಳನ್ನು ಪತ್ತೆ ಹಚ್ಚುವಂತೆ ಡೈರೆಕ್ಸ್‍ ಎಕ್ಸೆಸ್ ಸ್ಟೋರೇಜ್ ಡಿವೈಸಸ್ (DASD) ಸಾಧನ ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. ಯಶಸ್ವಿಯಾಗಿ ಪತ್ತೆ ಮಾಡಿದ ನಂತರ, ಸಾಧನ ಚಾಲಕವು ಅಂತಹ ಮಾರ್ಗಗಳನ್ನು ಬಳಸುವುದಿಲ್ಲ. ಈ ಸವಲತ್ತಿನೊಂದಿಗೆ, ಉದಾಹರಣೆಗೆ, DASD ಸಾಧನ ಚಾಲಕವು ಒಂದು ನಿಶ್ಚಿತ ಸಬ್‌ಚಾನಲ್‌ಗೆ ನಿಯೋಜಸಲಾದ ಆದರೆ ಭಿನ್ನವಾದ ಶೇಖರಣಾ ಪೂರೈಕೆಗಣಕಗಳಿಗೆ ಹೋಗುವ ಮಾರ್ಗಗಳನ್ನು ಗುರುತಿಸುತ್ತದೆ.
  • zfcp ಸಾಧನ ಚಾಲಕವನ್ನು System z ಫೈಬರ್ ಚಾನಲ್ ಪ್ರೊಟೊಕಾಲ್ (FCP) ಅಡಾಪ್ಟರ್ ಕಾರ್ಡಿನ ಸುಧಾರಿತ ಕ್ರಮವನ್ನು ಬೆಂಬಲಿಸಲು ದತ್ತಾಂಶ ರಚನೆ ಸೇರಿಸುವಿಕೆ ಮತ್ತು ದೋಷ ಮೇಲ್ವಿಚಾರಣೆಗಾಗಿ ಅಪ್‌ಡೇಟ್ ಮಾಡಲಾಗಿದೆ. ಈ ಸ್ಥಿತಿಯಲ್ಲಿ, ದೊಡ್ಡದಾದ ಮತ್ತು ನಿಧಾನಗತಿಯ I/O ಮನವಿಗಳಿಂದ ಅಡಾಪ್ಟರ್ ಕಾರ್ಡಿನ ಮೆಮೊರಿಯು ನಿರ್ಬಂಧಿತಗೊಂಡಿದ್ದಲ್ಲಿ ಅಡಾಪ್ಟರ್ ದತ್ತಾಂಶವನ್ನು ನೇರವಾಗಿ ಮೆಮೊರಿಯಿಂದ SANಗೆ (ದತ್ತಾಂಶ ರೌಟಿಂಗ್) ರವಾನೆ ಮಾಡುತ್ತದೆ.
  • mtip32xx ಚಾಲಕವನ್ನು ಇತ್ತೀಚಿನ PCIe SSD ಗಳಿಗೆ ಬೆಂಬಲವನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • ಎಮುಲೆಕ್ಸ್ ಫೈಬರ್ ಚಾನಲ್ ಹೋಸ್ಟ್‍ ಬಸ್‌ ಅಡಾಪ್ಟರುಗಳಗಾಗಿನ Ipfc ಚಾಲಕವನ್ನು ಆವೃತ್ತಿ 8.3.5.82.1p ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • QLogic ಫೈಬರ್ ಚಾನಲ್ HBAs ಗಾಗಿನ qla2xxx ಚಾಲಕವನ್ನು ಆವೃತ್ತಿ 8.04.00.04.06.4-k ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು QLogic's 83XX ಕನ್ವರ್ಜಡ್ ನೆಟ್‌ವರ್ಕ್ ಅಡಾಪ್ಟರ್ (CNA) ಗಾಗಿನ ಬೆಂಬಲವನ್ನು, QLogic ಅಡಾಪ್ಟರುಗಳಿಗಾಗಿನ 16 GBps FC ಬೆಂಬಲವನ್ನು ಸೇರಿಸುತ್ತದೆ, ಮತ್ತು HP ProLiant ಪೂರೈಕೆಗಣಕಗಳಿಗಾಗಿನ ಫಾರ್ಮ್ ಫ್ಯಾಕ್ಟರ್ CNA ಬೆಂಬಲವನ್ನು ಸೇರಿಸುತ್ತದೆ.
  • qla4xxxx ಚಾಲಕವನ್ನು ಆವೃತ್ತಿ v5.03.00.00.06.04-k0 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು change_queue_depth API ಬೆಂಬಲವನ್ನು ಸೇರಿಸುತ್ತದೆ, ಹಲವಾರು ದೋಷಗಳನ್ನು ಸರಿಪಡಿಸುತ್ತದೆ, ಮತ್ತು ಹಲವಾರು ಸುಧಾರಣೆಗಳನ್ನು ಪರಿಚಯಿಸುತ್ತದೆ.
  • ಫೈಬರ್ ಚಾನಲ್‌ಗಾಗಿನ ql2400-firmware ಫರ್ಮ್-ವೇರ್ ಅನ್ನು ಆವೃತ್ತಿ 5.08.00 ಗೆ ಅಪ್‌ಡೇಟ್ ಮಾಡಲಾಗಿದೆ.
  • ಫೈಬರ್ ಚಾನಲ್‌ಗಾಗಿನ ql2500-firmware ಫರ್ಮ್-ವೇರ್ ಅನ್ನು ಆವೃತ್ತಿ 5.08.00 ಗೆ ಅಪ್‌ಡೇಟ್ ಮಾಡಲಾಗಿದೆ.
  • IBM Power Linux RAID SCSI HBAಗಳಿಗಾಗಿನ ipr ಚಾಲಕವನ್ನು ಆವೃತ್ತಿ 2.5.4 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು Power7 6Gb SAS ಅಡಾಪ್ಟರುಗಳಿಗೆ ಬೆಂಬಲವನ್ನು ಸೇರಿಸುತ್ತದೆ ಮತ್ತು ಈ ಅಡಾಪ್ಟರುಗಳಲ್ಲಿ SAS VRAID ಸಾಮರ್ಥ್ಯವನ್ನು ಸೇರಿಸುತ್ತದೆ.
  • hpsa ಚಾಲಕವನ್ನು ಆವೃತ್ತಿ 2.0.2-4-RH1 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು HP Smart Array Generation 8 ಕುಟುಂಬದ ನಿಯಂತ್ರಕಗಳಿಗಾಗಿ PCI-IDs ಅನ್ನು ಸೇರಿಸುತ್ತದೆ.
  • ಬ್ರಾಡ್‌ಕಾಮ್‌ NetXtreme II iSCSI ಗಾಗಿನ bnx2i ಚಾಲಕವನ್ನು ಸಾಮಾನ್ಯ ಯಂತ್ರಾಂಶ ಬೆಂಬಲದ ಸಕ್ರಿಯಗೊಳಿಕೆಯೊಂದಿಗೆ ಆವೃತ್ತಿ 2.7.2.2 ಗೆ ಅಪ್‌ಡೇಟ್ ಮಾಡಲಾಗಿದೆ.
    ಬ್ರಾಡ್‌ಕಾಮ್ ಸಾಧನಗಳಲ್ಲಿನ iSCSI ಮತ್ತು FCoE ಬೂಟ್‌ ಬೆಂಬಲವು ಈಗ Red Hat Enterprise Linux 6.4 ರಲ್ಲಿ ಸಂಪೂರ್ಣವಾಗಿ ಬೆಂಬಲಿತವಾಗಿರುತ್ತವೆ. ಈ ಎರಡು ಸವಲತ್ತುಗಳನ್ನು bnx2i ಮತ್ತು bnx2fc ಸಾಧನ ಚಾಲಕಗಳಿಂದ ಒದಗಿಸಲ್ಪಟ್ಟಿವೆ.
  • Broadcom Netxtreme II 57712 ಚಿಪ್‌ಗಾಗಿನ bnx2fc ಅನ್ನು ಆವೃತ್ತಿ 1.0.1.2 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
    ಬ್ರಾಡ್‌ಕಾಮ್ ಸಾಧನಗಳಲ್ಲಿನ iSCSI ಮತ್ತು FCoE ಬೂಟ್‌ ಬೆಂಬಲವು ಈಗ Red Hat Enterprise Linux 6.4 ರಲ್ಲಿ ಸಂಪೂರ್ಣವಾಗಿ ಬೆಂಬಲಿತವಾಗಿರುತ್ತವೆ. ಈ ಎರಡು ಸವಲತ್ತುಗಳನ್ನು bnx2i ಮತ್ತು bnx2fc ಸಾಧನ ಚಾಲಕಗಳಿಂದ ಒದಗಿಸಲ್ಪಟ್ಟಿವೆ.
  • mpt2sas ಚಾಲಕವನ್ನು ಆವೃತ್ತಿ13.101.00.00 ಗೆ ಅಪ್‌ಡೇಟ್ ಮಾಡಲಾಗಿದೆ, ಇದು Linux BSG ಚಾಲಕಕ್ಕಾಗಿ ಬಹು-ವಿಭಾಗದ ಸ್ಥಿತಿಗೆ ಬೆಂಬಲವನ್ನು ಸೇರಿಸುತ್ತದೆ. .
  • Brocade bfa ಫೈಬರ್ ಚಾನಲ್ ಮತ್ತು FCoE ಚಾಲಕವನ್ನು ಆವೃತ್ತಿ 3.0.23.0 ಗೆ ಅಪ್‌ಡೇಟ್ ಮಾಡಲಾಗಿದ್ದು ಇದು Brocade 1860 16Gbps ಫೈಬರ್ ಚಾನಲ್ ಅಡಾಪ್ಟರ್ ಬೆಂಬಲ, Dell PowerEdge 12th Generation ಪೂರೈಕೆಗಣಕಗಳಿಗಾಗಿನ ಹೊಸ ಯಂತ್ರಾಂಶ ಬೆಂಬಲ, ಮತ್ತು issue_lip ಬೆಂಬಲವನ್ನು ಹೊಂದಿರುತ್ತದೆ. bfa ಫರ್ಮ್-ವೇರ್ ಅನ್ನು ಆವೃತ್ತಿ 3.0.3.1 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • ServerEngines BladeEngine 2 Open iSCSI ಸಾಧನಗಳಿಗಾಗಿನ be2iscsi ಚಾಲಕವನ್ನು iSCSI netlink VLAN ಬೆಂಬಲವನ್ನು ಸೇರಿಸುವಂತೆ ಆವೃತ್ತಿ 4.4.58.0r ಗೆ ಅಪ್‌ಡೇಟ್ ಮಾಡಲಾಗಿದೆ.
  • TrueScale HCAಗಳಿಗಾಗಿನ qib ಚಾಲಕವನ್ನು ಈ ಕೆಳಗಿನ ಸುಧಾರಣೆಗಳೊಂದಿಗೆ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ:
    • ಸುಧಾರಿತ NUMA ಅರಿವು
    • ಕಂಜೆಶನ್ ಕಂಟ್ರೋಲ್ ಏಜೆಂಟ್‌ಗಾಗಿ (CCA) ಪರ್ಫಾಮೆನ್ಸ್‍ ಸ್ಕೇಲ್ ಮೆಸೇಜಿಂಗ್ (PSM) ಫ್ಯಾಬ್ರಿಕ್ಸ್
    • PSM ಫ್ಯಾಬ್ರಿಕ್ಸಿಗಾಗಿ ಡ್ಯುವಲ್ ರೇಲ್
    • ಕಾರ್ಯಕ್ಷಮತೆಯಲ್ಲಿ ಸುಧಾರಣೆಗಳು ಮತ್ತು ದೋಷ ಪರಿಹಾರಗಳು
  • ಈ ಕೆಳಗಿನ ಚಾಲಕಗಳನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಸವಲತ್ತುಗಳು ಮತ್ತು ದೋಷ ಪರಿಹಾರಗಳನ್ನು ಒಳಗೊಳ್ಳುವಂತೆ ಅಪ್‌ಡೇಟ್ ಮಾಡಲಾಗಿದೆ: ahci, md/bitmap, raid0, raid1, raid10, ಮತ್ತು raid456.

ಜಾಲಬಂಧ ಚಾಲಕಗಳು

  • NetXen Multi port (1/10) ಗಿಗಾಬಿಟ್ ನೆಟ್‌ವರ್ಕಿಗಾಗಿನ netxen_nic ಚಾಲಕವನ್ನು ಆವೃತ್ತಿ 4.0.80 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು miniDIMM ಬೆಂಬಲವನ್ನು ಸೇರಿಸುತ್ತದೆ. netxen_nic ಫರ್ಮ್-ವೇರ್ ಅನ್ನು ಆವೃತ್ತಿ 4.0.588 ಗೆ ಅಪ್‌ಡೇಟ್ ಮಾಡಲಾಗಿದೆ.
  • bnx2x ಚಾಲಕವನ್ನು ಬ್ರಾಡ್‌ಕಾಮ್ 57800/57810/57811/57840 ಚಿಪ್‌ಗಳು ಹಾಗೂ ಸಾಮಾನ್ಯ ದೋಷ ಪರಿಹಾರಗಳು ಮತ್ತು ಬ್ರಾಡ್‌ಕಾಮ್ 57710/57711/57712 ಚಿಪ್‌ಗಳಿಗಾಗಿ ಅಪ್‌ಡೇಟ್ ಮಾಡಲಾದ ಫರ್ಮ್-ವೇರ್ ಅನ್ನು ಒಳಗೊಂಡಿರುವಂತೆ ಆವೃತ್ತಿ 1.72.51-0 ಗೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ ಕೆಳಗಿನ ಸುಧಾರಣೆಗಳನ್ನೂ ಸಹ ಹೊಂದಿರುತ್ತದೆ:
    • iSCSI ಆಫ್‌ಲೋಡ್ ಮತ್ತು ಬ್ರಾಡ್‌ಕಾಮ್ 57712/578xx ಚಿಪ್‌ಗಳಲ್ಲಿ ಡೇಟಾ ಸೆಂಟರ್ ಬ್ರಿಜಿಂಗ್/ಫೈಬರ್ ಚಾನಲ್ ಓವರ್ ಎತರ್ನೆಟ್ (DCB/FCOE) ಅನ್ನು ಬೆಂಬಲಿಸುತ್ತದೆ. ಬ್ರಾಡ್‌ಕಾಮ್ 57840 ಚಿಪ್‌ ಅನ್ನು 4x10G ಸಂರಚನೆಯಲ್ಲಿ ಮಾತ್ರ ಬೆಂಬಲಿಸಲಾಗುತ್ತದೆ ಮತ್ತು iSCSI ಆಫ್‌ಲೋಡ್ ಹಾಗು FCoE ಅನ್ನು ಬೆಂಬಲಿಸುವುದಿಲ್ಲ. ಮುಂದಿನ ಬಿಡುಗಡೆಗಳಲ್ಲಿ ಹೆಚ್ಚಿನ ಸಂರಚನೆಗಳನ್ನು ಮತ್ತು iSCSI ಆಫ್‌ಲೋಡ್ ಹಾಗೂ FCoE ಅನ್ನು ಬೆಂಬಲಿಸಲಾಗುತ್ತದೆ.
    • ಎನರ್ಜಿ ಎಫಿಶಿಯಂಟ್ ಎತರ್ನೆಟ್‌ ಸೇರಿದಂತೆ ಹೆಚ್ಚುವರಿ ಭೌತಿಕ ಪದರದ ಬೆಂಬಲ (EEE).
    • iSCSI ಆಫ್‌ಲೋಡ್ ಸುಧಾರಣೆಗಳು
    • OEM-ನಿಶ್ಚಿತ ಸವಲತ್ತುಗಳು
  • ServerEngines BladeEngine2 10Gbps ಜಾಲಬಂಧ ಸಾಧನಗಳಿಗಾಗಿನ be2net ಚಾಲಕವನ್ನು RDMA ಓವರ್ ಕನ್ವರ್ಜಡ್ ಎತರ್ನೆಟ್ (RoCE) ಗೆ ಬೆಂಬಲವನ್ನು ಸೇರಿಸುವಂತೆ ಆವೃತ್ತಿ 4.4.31.0r ಗೆ ಅಪ್‌ಡೇಟ್ ಮಾಡಲಾಗಿದೆ.
    ಹೆಚ್ಚುವರಿಯಾಗಿ, Emulex be2net ಚಾಲಕದ SR-IOV ಕಾರ್ಯಶೀಲತೆಯನ್ನು ಈಗ Red Hat Enterprise Linux 6.4 ರಲ್ಲಿ ಸಂಪೂರ್ಣವಾಗಿ ಬೆಂಬಲಿಸಲಾಗಿದೆ. SR-IOV ಯು BE3-ಆಧರಿತ ತಂತ್ರಾಂಶದ ಅಗತ್ಯವಿರುವ Emulex-ಬ್ರಾಂಡೆಂಟ್ ಮತ್ತು OEM ವೇರಿಯಂಟ್‌ಗಳಲ್ಲಿ ಚಲಾಯಿಸಬಹುದಾಗಿರುತ್ತದೆ. ಇವೆಲ್ಲದಕ್ಕೂ ಸಹ be2net ಚಾಲಕ ತಂತ್ರಾಂಶದ ಅಗತ್ಯವಿರುತ್ತದೆ.
  • ixgbef ಚಾಲಕವನ್ನು ಆವೃತ್ತಿ 2.6.0-k ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಇತ್ತೀಚಿನ ಯಂತ್ರಾಂಶ ಬೆಂಬಲವನ್ನು ಒದಗಿಸುತ್ತದೆ.
  • ಚೆಲ್ಸಿಯೊ ಟರ್ಮಿನೇಟರ್4 10G ಯೂನಿಫೈಡ್ ವೈರ್ ನೆಟ್‌ವರ್ಕ್ ನಿಯಂತ್ರಕಗಳಿಗಾಗಿನ cxgb4 ಚಾಲಕವನ್ನು ಚೆಲ್ಸಿಯೋಸ್ T480-CR ಮತ್ತು T440-LP-CR ಅಡಾಪ್ಟರುಗಳಿಗೆ ಬೆಂಬಲವನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • ಚೆಲ್ಸಿಯೊ T3 ಕುಟುಂಬದ ನೆಟ್‌ವರ್ಕ್ ಸಾಧನಗಳಿಗಾಗಿನ cxgb3 ಚಾಲಕವನ್ನು ಆವೃತ್ತಿ 1.1.5-ko ಅಪ್‌ಡೇಟ್ ಮಾಡಲಾಗಿದೆ.
  • Intel 10 Gigabit PCI Express ಜಾಲಬಂಧ ಸಾಧನಗಳಿಗಾಗಿನ ixgbe ಚಾಲಕವನ್ನು ಆವೃತ್ತಿ 3.9.15-k ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಡೇಟಾ ಸೆಂಟರ್ ಬ್ರಿಜಿಂಗ್‌ನೊಂದಿಗಿನ (DCB) ಅಥವ ರಿಸೀವ್-ಸೈಡ್ ಸ್ಕೇಲಿಂಗ್‌ನೊಂದಿಗಿನ (RSS) SR-IOV ಗಾಗಿನ ಬೆಂಬಲವನ್ನು, ತಂತ್ರಜ್ಞಾನ ಮುನ್ನೋಟವಾಗಿ PTP ಬೆಂಬಲವನ್ನು, ಇತ್ತೀಚಿನ ಯಂತ್ರಾಂಶ ಬೆಂಬಲವನ್ನು, ಸುಧಾರಣೆಗಳು ಮತ್ತು ದೋಷ ಪರಿಹಾರಗಳನ್ನು ಹೊಂದಿರುತ್ತದೆ.
  • iw_cxgb3 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • iw_cxgb4 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • Intel PRO/1000 ಜಾಲಬಂಧ ಸಾಧನಗಳಿಗಾಗಿ e1000e ಚಾಲಕವನ್ನು ಇತ್ತೀಚಿನ ಯಂತ್ರಾಂಶ ಬೆಂಬಲ, ಸವಲತ್ತುಗಳು ಮತ್ತು ಹಲವಾರು ದೋಷ ಪರಿಹಾರಗಳನ್ನು ಒದಗಿಸುವಂತೆ ಅಪ್‌ಡೇಟ್ ಮಾಡಲಾಗಿದೆ
  • Cisco 10G ಎತರ್ನೆಟ್ ಸಾಧನಕ್ಕಾಗಿನ enic ಆವೃತ್ತಿಯನ್ನು 2.1.1.39 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • igbvf ಚಾಲಕವನ್ನು (Intel Gigabit Virtual Function Network ಚಾಲಕ) ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • Intel Gigabit ಎತರ್ನೆಟ್ ಅಡಾಪ್ಟರುಗಳಿಗಾಗಿನ igb ಚಾಲಕವನ್ನು ಇತ್ತೀಚಿನ ಯಂತ್ರಾಂಶ ಬೆಂಬಲವನ್ನು ಸೇರಿಸುವಂತೆ ಆವೃತ್ತಿ 4.0.1 ಕ್ಕೆ ಅಪ್‌ಡೇಟ್ ಮಾಡಲಾಗಿದೆ. ಅಷ್ಟೆ ಅಲ್ಲದೆ, igb ಚಾಲಕಕ್ಕೆ PTP ಬೆಂಬಲವನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ.
  • Broadcom Tigon3 ಎತರ್ನೆಟ್ ಸಾಧನಗಳಿಗಾಗಿನ tg3 ಚಾಲಕವನ್ನು ಹೊಸ ಯಂತ್ರಾಂಶ ಬೆಂಬಲವನ್ನು ಸೇರಿಸುವಂತೆ ಆವೃತ್ತಿ 3.124 ಕ್ಕೆ ಅಪ್‌ಡೇಟ್ ಮಾಡಲಾಗಿದೆ. ಅಷ್ಟೆ ಅಲ್ಲದೆ, tg3 ಚಾಲಕಕ್ಕೆ PTP ಬೆಂಬಲವನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ.
  • HP NC-ಸೀರೀಸ್ ಕ್ಯುಲಾಜಿಕ್ 10 ಗಿಗಾಬಿಟ್ ಸರ್ವರ್ ಅಡಾಪ್ಟರ್ಸ್ ಸಾಧನಕ್ಕಾಗಿನ qlcnic ಆವೃತ್ತಿಯನ್ನು 5.0.29 ಗೆ ಅಪ್‌ಡೇಟ್ ಮಾಡಲಾಗಿದೆ.
  • Brocade 10Gb PCIe ಎತರ್ನೆಟ್ ಕಂಟ್ರೋಲರ್ಸ್ ಚಾಲಕಕ್ಕಾಗಿನ Brocade bna ಚಾಲಕವನ್ನು Dell PowerEdge 12th Generation ಪೂರೈಕೆಗಣಕಗಳಿಗೆ ಹೊಸ ಯಂತ್ರಾಂಶದ ಬೆಂಬಲವನ್ನು ಸೇರಿಸುವಂತೆ, ಮತ್ತು non-Brocade Twinax Copper ಕೇಬಲ್‌ಗಳನ್ನು ಬಳಸುವುದನ್ನು ಸಕ್ರಿಯಗೊಳಿಸುವಿಕೆಯನ್ನು ಸೇರಿಸಲು ಆವೃತ್ತಿ 3.0.23.0 ಗೆ ಅಪ್‌ಡೇಟ್ ಮಾಡಲಾಗಿದೆ. bna ಫರ್ಮ್-ವೇರ್ ಅನ್ನು ಆವೃತ್ತಿ 3.0.3.1 ಗೆ ಅಪ್‌ಡೇಟ್ ಮಾಡಲಾಗಿದೆ.
  • Broadcom Netxtreme II cnic ಚಾಲಕವನ್ನು ಹೊಸ ಸವಲತ್ತುಗಳು, ದೋಷ ಪರಿಹಾರಗಳು, ಮತ್ತು ಹೊಸ OEM ಪ್ಲಾಟ್‌ಫಾರ್ಮುಗಳಿಗಾಗಿನ ಬೆಂಬಲವನ್ನು ಸೇರಿಸುವಂತೆ ಆವೃತ್ತಿ 2.5.13 ಕ್ಕೆ ಅಪ್‌ಡೇಟ್ ಮಾಡಲಾಗಿದೆ.

ವಿವಿಧ ಚಾಲಕಗಳು

  • Intel ನ Xeon E5-XXX V2 ಸರಣಿಯ ಸಂಸ್ಕಾರಕಗಳಿಗೆ ಬೆಂಬಲವನ್ನು ಸೇರಿಸುವಂತೆ Intel ಸಂಸ್ಕಾರಕಗಳಿಗಾಗಿನ intel_idle cpuidle ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • wacom ಚಾಲಕವನ್ನು CTL-460 Wacom Bamboo Pen, Wacom Intuos5 ಟ್ಯಾಬ್ಲೆಟ್, ಮತ್ತು Wacom Cintiq 22HD Pen ಪ್ರದರ್ಶಕಕ್ಕೆ ಬೆಂಬಲವನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • ALSA HDA ಆಡಿಯೊ ಚಾಲಕವನ್ನು ಹೊಸ ಯಂತ್ರಾಂಶವನ್ನು ಬೆಂಬಲಿಸುವಂತೆ ಮತ್ತು ಹಲವಾರು ದೋಷಗಳನ್ನು ಸರಿಹೋಗುವಂತೆ ಅಪ್‌ಡೇಟ್ ಮಾಡಲಾಗಿದೆ.
  • mlx4_en ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • mlx4_ib ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • mlx4_core ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • z90crypt ಸಾಧನ ಚಾಲಕವನ್ನು ಹೊಸ Crypto Express 4 (CEX4) ಅಡಾಪ್ಟರ್ ಕಾರ್ಡನ್ನು ಬೆಂಬಲಿಸುವಂತೆ ಅಪ್‌ಡೇಟ್ ಮಾಡಲಾಗಿದೆ.

ಅಧ್ಯಾಯ 4. ಜಾಲಬಂಧ

HAProxy

HAProxy ಎನ್ನುವುದು ಒಂದು ಪ್ರತ್ಯೇಕವಾದಂತಹ, ಲೇಯರ್ 7 ರ, TCP ಮತ್ತು HTTP-ಆಧರಿತವಾದ ಅನ್ವಯಗಳಲ್ಲಿಉನ್ನತ-ಕಾರ್ಯಕ್ಷಮತೆಯ ಜಾಲಬಂಧ ಹೊರೆ ಸಮತೋಲನಗೊಳಿಸುವ ಸಾಧನವಾಗಿದ್ದು, ಇದು HTTP ಮನವಿಗಳಲ್ಲಿನ ವಿಷಯಗಳ ಆಧಾರದಲ್ಲಿ ಹಲವು ಬಗೆಯ ಅನುಸೂಚನೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. Red Hat Enterprise Linux 6.4 ರಲ್ಲಿ haproxy ಪ್ಯಾಕೇಜನ್ನು ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗುತ್ತದೆ.

ಅಧ್ಯಾಯ 5. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ

SSSD ಸಂಪೂರ್ಣ ಬೆಂಬಲಿತ ಸವಲತ್ತುಗಳು

Red Hat Enterprise Linux 6.3 ರಲ್ಲಿ ಪರಿಚಯಿಸಲಾದ ಹಲವಾರು ಸೌಲಭ್ಯಗಳು ಈಗ Red Hat Enterprise Linux 6.4 ರಲ್ಲಿ ಸಂಪೂರ್ಣವಾಗಿ ಬೆಂಬಲಿತವಾಗಿವೆ. ವಿಶೇಷವಾಗಿ:
  • SSH ಕೀಲಿಗಳ ಕೇಂದ್ರೀಕೃತ ನಿರ್ವಹಣೆಯನ್ನು ಬೆಂಬಲಿಸುತ್ತದೆ
  • SELinux ಬಳಕೆದಾರ ಮ್ಯಾಪಿಂಗ್.
  • ಮತ್ತು ಸ್ವಯಂಚಾಲಿತ ಮ್ಯಾಪ್ ಕ್ಯಾಶಿಂಗ್‌.

ಹೊಸ SSSD ಕ್ಯಾಶೆ ಶೇಖರಣೆ ಬಗೆ

Kerberos ಆವೃತ್ತಿ 1.10 ಅನ್ನು ಒಂದು ಹೊಸ ಕ್ಯಾಶೆ ಶೇಖರಣಾ ಬಗೆಗೆ ಸೇರಿಸಲಾಗಿದೆ, DIR:, ಇದು ಕರ್ಬರೋಸ್-ಅರಿವಿರುವ ಸಂಪನ್ಮೂಲಗಳೊಂದಿಗೆ ವ್ಯವಹರಿಸುವಾಗ ಒಂದೇ ಬಾರಿ ಅನೇಕ ಕೀ ಡಿಸ್ಟ್ರಿಬ್ಯೂಶನ್ ಸೆಂಟರುಗಳಿಗಾಗಿ (KDCs) ಟಿಕೆಟಿಂಗ್ ಗ್ರಾಂಟಿಂಗ್ ಟಿಕಿಟ್ಸ್‍ (TGTs) ಅನ್ನು ನೋಡಿಕೊಳ್ಳಲು ಮತ್ತು ಅವುಗಳ ನಡುವೆ ಸ್ವಯಂ-ಆಯ್ಕೆ ಮಾಡಲು ಕರ್ಬರೋಸ್‌ಗೆ ಅನುಮತಿಸುತ್ತದೆ. Red Hat Enterprise Linux 6.4 ರಲ್ಲಿ SSSD ಮೂಲಕ ಪ್ರವೇಶಿಸಿದ ಬಳಕೆದಾರರಿಗಾಗಿ DIR: ಕ್ಯಾಶೆಯನ್ನು ಆಯ್ಕೆ ಮಾಡುವುದನ್ನು ಅನುಮತಿಸುವಂತೆ, SSSD ಅನ್ನು ಸುಧಾರಿಸಲಾಗಿದೆ. ಈ ಸವಲತ್ತನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗಿದೆ.

AD-ಆಧರಿತ ಟ್ರಸ್ಟೆಡ್ ಡೊಮೈನ್‌ಗಳನ್ನು ಹೊರಗಿನ ಗುಂಪುಗಳಿಗೆ ಸೇರಿಸುವಿಕೆ

Red Hat Enterprise Linux 6.4 ರಲ್ಲಿ, ipa group-add-member ಆಜ್ಞೆಯು ಆಕ್ಟೀವ್-ಡಿರೆಕ್ಟರಿ ಆಧರಿತವಾದ ನಂಬಿಕಸ್ತ ಡೊಮೈನುಗಳಿಂದ ಸದಸ್ಯರುಗಳನ್ನು ಐಡೆಂಟಿಟಿ ಮ್ಯಾನೇಜ್ಮೆಂಟ್‌ನಲ್ಲಿ external ಎಂದು ಗುರುತು ಹಾಕಲಾದ ಗುಂಪಿಗೆ ಸೇರಿಸಲು ನಿಮಗೆ ಅನುವು ಮಾಡುತ್ತದೆ. ಈ ಸದಸ್ಯರುಗಳನ್ನು ಡೊಮೈನು ಅಥವ UPN-ಆಧರಿತವಾದ ಸಿಂಟ್ಯಾಕ್ಸ್ ಅನ್ನು ಬಳಸಿಕೊಂಡು ಅವರ ಹೆಸರಿನ ಮೇರೆಗೆ ಸೂಚಿಸಲು ಸಾಧ್ಯವಿರುತ್ತದೆ. ಉದಾಹರಣೆಗೆ AD\UserName ಅಥವ AD\GroupName, ಅಥವ User@AD.Domain. ಈ ರೀತಿಯಲ್ಲಿ ಸೂಚಿಸಲಾದಲ್ಲಿ, ಅವರ ಸೆಕ್ಯುರಿಟಿ ಐಡೆಂಟಿಫಯರ್ (SID) ಮೌಲ್ಯವನ್ನು ಪಡೆಯಲು ಆಕ್ಟೀವ್ ಡಿರಕ್ಟರಿ-ಆಧರಿತವಾದ ನಂಬಿಕಸ್ತ ಡೊಮೈನಿನ ಗ್ಲೋಬಲ್ ಕೆಟಲಾಗ್‌ನ ಮೂಲಕ ಸದಸ್ಯರುಗಳನ್ನು ಪರಿಹರಿಸಲಾಗುತ್ತದೆ.
ಪರ್ಯಾಯವಾಗಿ, ಒಂದು SID ಮೌಲ್ಯವನ್ನು ನೇರವಾಗಿ ಸೂಚಿಸಬಹುದು. ಈ ಸಂದರ್ಭದಲ್ಲಿ, ipa group-add-member ಆಜ್ಞೆಯು command will only verify that the domain part of the SID ಮೌಲ್ಯದ ಡೊಮೈನ್ ಭಾಗವು ನಂಬಿಕಸ್ತ ಆಕ್ಟೀವ್ ಡಿರೆಕ್ಟರಿ ಡೊಮೈನ್‌ಗಳಲ್ಲಿ ಒಂದಾಗಿದೆಯೆ ಎಂದು ಮಾತ್ರ ಖಚಿತಪಡಿಸುತ್ತದೆ. ಡೊಮೈನಿನ ಒಳಗೆ SID ನ ಮಾನ್ಯತೆಯನ್ನು ಪರಿಶೀಲಿಸಲು ಯಾವುದೆ ಪ್ರಯತ್ನವನ್ನು ಮಾಡಲಾಗುವುದಿಲ್ಲ.
ಹೊರಗಿನ ಸದಸ್ಯರುಗಳನ್ನು ಸೂಚಿಸಲು ಅವರ SID ಮೌಲ್ಯಗಳನ್ನು ನೇರವಾಗಿ ಒದಗಿಸುವ ಬದಲಿಗೆ ಬಳಕೆದಾರ ಅಥವ ಗುಂಪಿನ ಹೆಸರಿನ ಸಿಂಟ್ಯಾಕ್ಸನ್ನು ಬಳಸುವಂತೆ ಸಲಹೆ ಮಾಡಲಾಗುತ್ತದೆ.

ಸ್ವಯಂ-ನವೀಕರಣ ಗುರುತು ವ್ಯವಸ್ಥಾಪನಾ ಉಪವ್ಯವಸ್ಥೆ ಪ್ರಮಾಣಪತ್ರಗಳು

ಒಂದು ಹೊಸ ಸರ್ಟಿಫಿಕೇಟ್ ಅತಾರಿಟಿಯ ಪೂರ್ವನಿಯೋಜಿತ ಅವಧಿಯು 10 ವರ್ಷಗಳಾಗಿರುತ್ತದೆ. CA ಯು ಅದರ ಉಪವ್ಯವಸ್ಥೆಗಳಿಗಾಗಿ ಹಲವಾರು ಪ್ರಮಾಣಪತ್ರಗಳನ್ನು ಒದಗಿಸುತ್ತದೆ (OCSP, ಆಡಿಟ್ ದಿನಚರಿ, ಮತ್ತು ಇತರೆ). ಉಪವ್ಯವಸ್ಥೆ ಪ್ರಮಾಣಪತ್ರಗಳು ಸಾಮಾನ್ಯವಾಗಿ 2 ವರ್ಷಗಳಿಗೆ ಮಾನ್ಯವಾಗಿರುತ್ತವೆ. ಪ್ರಮಾಣಪತ್ರದ ಕಾಲಾವಧಿ ತೀರಿದಲ್ಲಿ, CA ವು ಪ್ರಾರಂಭಗೊಳ್ಳುವುದಿಲ್ಲ ಅಥವ ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ, Red Hat Enterprise Linux 6.4 ರಲ್ಲಿ ಐಡೆಂಟಿಟಿ ವ್ಯವಸ್ಥಾಪನಾ ಪೂರೈಕೆಗಣಕಗಳು ತಮ್ಮ ಉಪವ್ಯವಸ್ಥೆಗಳನ್ನು ಸ್ವಯಂಚಾಲಿತವಾಗಿ ನವೀಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಉಪವ್ಯವಸ್ಥೆಯ ಪ್ರಮಾಣಪತ್ರಗಳನ್ನು certmonger ಮೂಲಕ ಜಾಡನ್ನು ಇರಿಸಲಾಗುತ್ತದೆ, ಪ್ರಮಾಣಪತ್ರಗಳ ವಾಯಿದೆ ತೀರುವ ಮೊದಲು ಇದು ಸ್ವಯಂಚಾಲಿತವಾಗಿ ನವೀಕರಿಸಲು ಪ್ರಯತ್ನಿಸುತ್ತದೆ.

ಐಡೆಂಟಿಟಿ ವ್ಯವಸ್ಥಾಪನೆಯಲ್ಲಿ ನೋಂದಾಯಿತಗೊಂಡ ಕ್ಲೈಂಟ್‌ಗಳಿಗಾಗಿನ OpenLDAP ಕ್ಲೈಂಟ್ ಉಪಕರಣಗಳ ಸ್ವಯಂಚಾಲಿತ ಸಂರಚನೆ

Red Hat Enterprise Linux 6.4 ರಲ್ಲಿ, ಐಡೆಂಟಿಟಿ ವ್ಯವಸ್ಥಾಪನಾ ಕ್ಲೈಂಟ್ ಅನುಸ್ಥಾಪನೆಯ ಸಮಯದಲ್ಲಿ OpenLDAP ಅನ್ನು ಸ್ವಯಂಚಾಲಿತವಾಗಿ ಪೂರ್ವನಿಯೋಜಿತ LDAP URI, ಒಂದು ಮೂಲ DN, ಮತ್ತು ಒಂದು TLS ಪ್ರಮಾಣಪತ್ರದೊಂದಿಗೆ ಸಂರಚಿಸಲಾಗಿರುತ್ತದೆ. ಇದು ಐಡೆಂಟಿಟಿ ವ್ಯವಸ್ಥಾಪನಾ ಡಿರಕ್ಟರಿ ಸರ್ವರಿಗೆ LDAP ಹುಡುಕಾಟವನ್ನು ನಿರ್ವಹಿಸುವಾಗ ಬಳಕೆದಾರರ ಅನುಭವವನ್ನು ಸುಧಾರಿಸುತ್ತದೆ.

PKCS#12 python-nss ಗಾಗಿ ಬೆಂಬಲಿಸುತ್ತದೆ

python-nss ಪ್ಯಾಕೇಜು, ನೆಟ್‌ವರ್ಕ್ ಸೆಕ್ಯುರಿಟಿ ಸರ್ವಿಸಸ್‌ಗಾಗಿ (NSS) ಮತ್ತು ನೆಟ್‌ಸ್ಕೇಪ್ ಪೋರ್ಟೆಬಲ್ ರನ್‌ಟೈಮ್‌ಗಾಗಿ (NSPR) ಪೈತಾನ್ ಬೈಂಡಿಂಗ್ ಅನ್ನು ಒದಗಿಸಲಿದ್ದು, ಇದನ್ನು PKCS #12 ಬೆಂಬಲವನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.

DNS ಗಾಗಿ ಪೂರ್ಣ ಸ್ಥಿರ ಹುಡುಕಾಟ

Red Hat Enterprise Linux 6.4 ರಲ್ಲಿನ LDAP ವಲಯಗಳಿಗಾಗಿ ಮತ್ತು ಸಂಪನ್ಮೂಲ ದಾಖಲೆಗಳಿಗಾಗಿ ಸ್ಥಿರ ಹುಡುಕಾಟದ ಬೆಂಬಲವನ್ನು ಒಳಗೊಂಡಿರುತ್ತದೆ. ಸ್ಥಿರ ಹುಡುಕಾಟವು ಒಂದು LDAP ದತ್ತಸಂಚಯಗಳಿಗೆ ಮಾಡಲಾದ ಎಲ್ಲಾಬದಲಾವಣೆಗಳ ಕುರಿತು ಕೂಡಲೆ bind-dyndb-ldap ಪ್ಲಗ್‌-ಇನ್‌ಗೆ ಮಾಹಿತಿಯನ್ನು ನೀಡುತ್ತದೆ. ಪುನರಾವರ್ತಿತ ಪೋಲಿಂಗ್‌ಗಾಗಿ ಅಗತ್ಯವಿರುವ ಜಾಲಬಂಧ ಬ್ಯಾಂಡ್‌ವಿಡ್ತ್ ಬಳಕೆಯನ್ನೂ ಸಹ ಕಡಿಮೆ ಮಾಡುತ್ತದೆ.

ಹೊಸ CLEANALLRUV ಕಾರ್ಯಾಚರಣೆ

ಡೇಟಾಬೇಸ್ ರಿಪ್ಲಿಕಾ ಅಪ್‌ಡೇಟ್ ವೆಕ್ಟರ್ (RUV) ನಲ್ಲಿನ ಅಪ್ರಚಲಿತ ಘಟಕಗಳನ್ನು CLEANRUV ಕಾರ್ಯಾಚರಣೆಯ ಮೂಲಕ ತೆಗೆದುಹಾಕಬಹುದು, ಇದು ಒಂದು ಸಪ್ಲೈಯರ್ ಅಥವ ಮಾಸ್ಟರ್ ಇಂದ ಅದನ್ನು ತೆಗೆದು ಹಾಕುತ್ತದೆ. Red Hat Enterprise Linux 6.4 ರಲ್ಲಿ ಒಂದು ಹೊಸ CLEANALLRUV ಕಾರ್ಯಾಚರಣೆಯನ್ನು ಸೇರಿಸಲಾಗಿದ್ದು ಇದು ಎಲ್ಲಾ ರೆಪ್ಲಿಕಾಗಳಿಂದ ಅಪ್ರಚಲಿತ RUV ದತ್ತಾಂಶವನ್ನು ತೆಗೆದು ಹಾಕುತ್ತದೆ ಮತ್ತು ಕೇವಲ ಒಂದು ಸಪ್ಲೈಯರ್/ಮಾಸ್ಟರ್ ಮೇಲೆ ಮಾತ್ರ ಚಲಾಯಿಸುವ ಅಗತ್ಯವಿರುತ್ತದೆ.

samba4 ಲೈಬ್ರರಿಗಳನ್ನು ಅಪ್‌ಡೇಟ್ ಮಾಡಲಾಗಿದೆ

samba4 ಲೈಬ್ರರಿಗಳನ್ನು (samba4-libs ಪ್ಯಾಕೇಜಿನಿಂದ ಒದಗಿಸಲಾದವು) ಆಕ್ಟೀವ್ ಡಿರಕ್ಟರಿ (AD) ಡೊಮೈನುಗಳೊಂದಿಗೆ ಸಹಕಾರ್ಯಶೀಲತೆಯನ್ನು ಉತ್ತಮವಾಗಿಸುವಂತೆ ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ನವೀಕರಿಸಲಾಗಿದೆ. SSSD ಈಗ ಒಂದು AD ಕೀಡಿಸ್ಟ್ರಿಬ್ಯೂಶನ್ ಸೆಂಟರ್ (KDC) ಇಂದ ಒದಗಿಸಲಾದ ಪ್ರಿವಿಲೇಜ್ ಅಟ್ರಿಬ್ಯೂಟ್ ಸರ್ಟಿಫಿಕೇಟ್ (PAC) ಅನ್ನು ಪಾರ್ಸ್ ಮಾಡಲು libndr-krb5pac ಲೈಬ್ರರಿಯನ್ನು ಬಳಸುತ್ತದೆ. ಹೆಚ್ಚುವರಿಯಾಗಿ, Additionally, various improvements have been made ಲೋಕಲ್ ಸೆಕ್ಯುರಿಟಿ ಅತಾರಿಟಿ (LSA) ಮತ್ತು ವಿಂಡೋಸ್ ವ್ಯವಸ್ಥೆಯಿಂದ ನಂಬಿಕಾರ್ಹತೆಯ ಖಚಿತಪಡಿಸುವಿಕೆಯನ್ನು ಅನುಮತಿಸಲು ನೆಟ್ ಲಾಗಾನ್ ಸರ್ವಿಸಸ್‌ಗೆ ಹಲವಾರು ಸುಧಾರಣೆಗಳನ್ನು ಮಾಡಲಾಗಿದೆ. samba4 ನ ಮೇಲೆ ಅವಲಂಬಿತವಾಗಿರುವ Cross Realm Kerberos Trust ಕ್ರಿಯಾಶೀಲತೆಯ ಪರಿಚಯದ ಕುರಿತಾದ ಮಾಹಿತಿಗಾಗಿ, ವಿಭಾಗ 5, “ಐಡೆಂಟಟಿ ಮ್ಯಾನೆಜ್ಮೆಂಟ್‌ನಲ್ಲಿನ Cross Realm Kerberos Trust ಕ್ರಿಯಾಶೀಲತೆ” ಅನ್ನು ನೋಡಿ.

ಎಚ್ಚರಿಕೆ

Red Hat Enterprise Linux 6.3 ರಿಂದ Red Hat Enterprise Linux 6.4 ಕ್ಕೆ ನವೀಕರಿಸಿದಲ್ಲಿ ಮತ್ತು ನೀವು Samba ಅನ್ನು ಬಳಸುತ್ತಿದ್ದಲ್ಲಿ, ನವೀಕರಣದ ಸಂದರ್ಭದಲ್ಲಿ ಘರ್ಷಣೆ ಉಂಟಾಗುವುದನ್ನು ತಪ್ಪಿಸಲು samba4 ಪ್ಯಾಕೇಜು ಅನ್ನು ತೆಗೆದುಹಾಕಲು ಮರೆಯಬೇಡಿ.
Cross Realm Kerberos Trust ಕ್ರಿಯಾಶೀಲತೆಯನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಿರುವುದರಿಂದ, ಆಯ್ಕೆ ಮಾಡಲಾದ samba4 ಘಟಕಗಳನ್ನು ತಂತ್ರಜ್ಞಾನ ಮುನ್ನೋಟವೆಂದು ಎಂದು ಪರಿಗಣಿಸಲಾಗುತ್ತದೆ. ಯಾವ Samba ಪ್ಯಾಕೇಜುಗಳನ್ನು ಒಂದು ತಂತ್ರಜ್ಞಾನ ಮುನ್ನೋಟವೆಂದು ಪರಿಗಣಿಸಲಾಗಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ ಕೋಷ್ಟಕ 5.1, “Samba4 ಪ್ಯಾಕೇಜ್ ಬೆಂಬಲ” ಅನ್ನು ನೋಡಿ.
ಪ್ಯಾಕೇಜಿನ ಹೆಸರು 6.4 ರಲ್ಲಿನ ಹೊಸ ಪ್ಯಾಕೇಜು? ಬೆಂಬಲ ಸ್ಥಿತಿ
samba4-libs ಇಲ್ಲ OpenChange ಗೆ ಅಗತ್ಯವಿರುವ ಕ್ರಿಯಾಶೀಲತೆಯನ್ನುದನ್ನು ಹೊರತುಪಡಿಸಿ ತಂತ್ರಜ್ಞಾನ ಮುನ್ನೋಟ
samba4-pidl ಇಲ್ಲ OpenChange ಗೆ ಅಗತ್ಯವಿರುವ ಕ್ರಿಯಾಶೀಲತೆಯನ್ನುದನ್ನು ಹೊರತುಪಡಿಸಿ ತಂತ್ರಜ್ಞಾನ ಮುನ್ನೋಟ
samba4 ಇಲ್ಲ ತಂತ್ರಜ್ಞಾನ ಮುನ್ನೋಟ
samba4-client ಹೌದು ತಂತ್ರಜ್ಞಾನ ಮುನ್ನೋಟ
samba4-common ಹೌದು ತಂತ್ರಜ್ಞಾನ ಮುನ್ನೋಟ
samba4-python ಹೌದು ತಂತ್ರಜ್ಞಾನ ಮುನ್ನೋಟ
samba4-winbind ಹೌದು ತಂತ್ರಜ್ಞಾನ ಮುನ್ನೋಟ
samba4-dc ಹೌದು ತಂತ್ರಜ್ಞಾನ ಮುನ್ನೋಟ
samba4-dc-libs ಹೌದು ತಂತ್ರಜ್ಞಾನ ಮುನ್ನೋಟ
samba4-swat ಹೌದು ತಂತ್ರಜ್ಞಾನ ಮುನ್ನೋಟ
samba4-test ಹೌದು ತಂತ್ರಜ್ಞಾನ ಮುನ್ನೋಟ
samba4-winbind-clients ಹೌದು ತಂತ್ರಜ್ಞಾನ ಮುನ್ನೋಟ
samba4-winbind-krb5-locator ಹೌದು ತಂತ್ರಜ್ಞಾನ ಮುನ್ನೋಟ
ಕೋಷ್ಟಕ 5.1. Samba4 ಪ್ಯಾಕೇಜ್ ಬೆಂಬಲ

ಐಡೆಂಟಟಿ ಮ್ಯಾನೆಜ್ಮೆಂಟ್‌ನಲ್ಲಿನ Cross Realm Kerberos Trust ಕ್ರಿಯಾಶೀಲತೆ

ಐಡೆಂಟಟಿ ಮ್ಯಾನೆಜ್ಮೆಂಟ್‌ನಿಂದ ಒದಗಿಸಲಾದ Cross Realm Kerberos Trust ಕ್ರಿಯಾಶೀಲತೆಯು ಒಂದು ತಂತ್ರಜ್ಞಾನ ಮುನ್ನೋಟವಾಗಿರುತ್ತದೆ. ಈ ಸವಲತ್ತು ಐಡೆಂಟಿಟಿ ಮ್ಯಾನೇಜ್ಮೆಂಟ್ ಮತ್ತು ಆಕ್ಟೀವ್ ಡಿರಕ್ಟರಿ ಡೊಮೈನಿನ ನಡುವೆ ಒಂದು ನಂಬಿಕಾರ್ಹತೆಯ ಸಂಬಂಧಕ್ಕೆ ಅನುವು ಮಾಡಿಕೊಡುತ್ತದೆ. ಅಂದರೆ AD ಡೊಮೈನಿನ ಬಳಕೆದಾರರು ತಮ್ಮ AD ಗುರುತುಗಳನ್ನು ಬಳಸಿಕೊಂಡು ಐಡೆಂಟಿಟಿ ಮ್ಯಾನೇಜ್ಮೆಂಟ್ ಡೊಮೈನ್‌ನಿಂದ ಸಂಪನ್ಮೂಲಗಳು ಮತ್ತು ಸೇವೆಗಳನ್ನು ನಿಲುಕಿಸಿಕೊಳ್ಳಲು ಸಾಧ್ಯವಿರುತ್ತದೆ. ಐಡೆಂಟಿಟಿ ಮ್ಯಾನೇಜ್ಮೆಂಟ್ ಮತ್ತು AD ಡೊಮೈನುಗಳ ನಡುವೆ ಯಾವುದೆ ನಿಯಂತ್ರಗಳನ್ನು ಹೊಂದಾಣಿಕೆ ಮಾಡುವ ಅಗತ್ಯವಿರುವುದಿಲ್ಲ; AD ಬಳಕೆದಾರರು ಯಾವಾಗಲೂ AD ಡೊಮೈನ್ ನಿಯಂತ್ರಕಗಳಿಗಾಗಿ ದೃಢೀಕರಿಸಲ್ಪಡುತ್ತಾರೆ ಮತ್ತು ಯಾವುದೆ ಹೊಂದಾಣಿಕೆಯ ಅಗತ್ಯವಿರದೆ ಬಳಕೆದಾರರಿಗಾಗಿ ಹುಡುಕಾಟ ನಡೆಸಲಾಗುತ್ತದೆ.
ಈ ಸವಲತ್ತನ್ನು ಐಚ್ಛಿಕ ipa-server-trust-ad ಪ್ಯಾಕೇಜಿನಿಂದ ಒದಗಿಸಲಾಗಿರುತ್ತದೆ. ಈ ಪ್ಯಾಕೇಜು ಕೇವಲ samba4 ದಲ್ಲಿ ಮಾತ್ರ ಲಭ್ಯವಿರುವಂತಹ ಸವಲತ್ತಿನ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ samba4-* ಪ್ಯಾಕೇಜುಗಳು ಅದನ್ನು ಹೋಲುವ samba-* ಪ್ಯಾಕೇಜುಗಳೊಂದಿಗೆ ಘರ್ಷಿಸುತ್ತದೆ, ipa-server-trust-ad ಅನ್ನು ಅನುಸ್ಥಾಪಿಸುವ ಮೊದಲು ಎಲ್ಲಾsamba-* ಪ್ಯಾಕೇಜುಗಳನ್ನು ತೆಗೆದುಹಾಕಬೇಕಾಗುತ್ತದೆ.
ipa-server-trust-ad ಪ್ಯಾಕೇಜನ್ನು ಅನುಸ್ಥಾಪಿಸಿದಾಗ, ipa-adtrust-install ಆಜ್ಞೆಯನ್ನು ಎಲ್ಲಾ ಐಡೆಂಟಿಟಿ ಮ್ಯಾನೇಜ್ಮೆಂಟ್ ಪೂರೈಕೆಗಣಕಗಳಲ್ಲಿ ಮತ್ತು ಐಡೆಂಟಿಟಿ ಮ್ಯಾನೇಜ್ಮೆಂಟ್‌ ನಂಬಿಕೆಗಳನ್ನು ನಿಭಾಯಿಸಲು ಪ್ರತಿರೂಪಗಳ ಮೇಲೆ ಚಲಾಯಿಸಬೇಕು. ಹೀಗೆ ಮಾಡಿದ ನಂತರ ipa trust-add ಅಥವ WebUI ಅನ್ನು ಬಳಸಿಕೊಂಡು ಒಂದು ನಂಬಿಕೆಯನ್ನು ಸಾಧಿಸಲು ಸಾಧ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, https://access.redhat.com/knowledge/docs/Red_Hat_Enterprise_Linux/ ನಲ್ಲಿರುವ ಐಡೆಂಟಿಟಿ ಮ್ಯಾನೇಜ್ಮೆಂಟ್ ಗೈಡ್‌Integrating with Active Directory Through Cross-Realm Kerberos Trusts ಅಧ್ಯಾಯವನ್ನು ನೋಡಿ.

389 ಡಿರಕ್ಟರಿ ಸರ್ವರಿಗಾಗಿ Posix Schema ಬೆಂಬಲ

ವಿಂಡೋಸ್ ಆಕ್ಟೀವ್ ಡಿರಕ್ಟರಿಯು (AD) ಬಳಕೆದಾರ ಮತ್ತು ಗುಂಪಿನ ನಮೂದಿಗಾಗಿ POSIX ಸ್ಕೀಮಾ (RFC 2307 ಮತ್ತು 2307bis) ಅನ್ನು ಬೆಂಬಲಿಸುತ್ತದೆ. ಹಲವಾರು ಸಂದರ್ಭಗಳಲ್ಲಿ, POSIX ಗುಣವೈಶಿಷ್ಟ್ಯಗಳಲ್ಲಿಯೂ ಸಹ ಸೇರಿದಂತೆ ADಯನ್ನು ಬಳಕೆದಾರ ಮತ್ತು ಗುಂಪಿನ ದತ್ತಾಂಶದ ಅಧೀಕೃತ ಮೂಲವಾಗಿ ಬಳಸಲಾಗುತ್ತದೆ. Red Hat Enterprise Linux 6.4 ರೊಂದಿಗೆ, ಡಿರಕ್ಟರಿ ಸರ್ವರ್ ವಿಂಡೋಸ್ ಸಿಂಕ್ ಇನ್ನು ಮುಂದೆ ಈ ಗುಣವೈಶಿಷ್ಟ್ಯಗಳನ್ನು ಕಡೆಗಣಿಸುವುದಿಲ್ಲ. ಬಳಕೆದಾರರು ಈಗ POSIX ಗುಣವಿಶೇಷಗಳನ್ನು AD ಮತ್ತು 389 ಡಿರಕ್ಟರಿ ಸರ್ವರಿನ ನಡುವೆ ವಿಂಡೋಸ್ ಸಿಂಕ್‌ನೊಂದಿಗೆ ಹೊಂದಾಣಿಕೆ ಮಾಡಲು ಸಾಧ್ಯವಿರುತ್ತದೆ.

ಸೂಚನೆ

ಡಿರಕ್ಟರಿ ಸರ್ವರಿನೊಂದಿಗೆ ಹೊಸ ಬಳಕೆದಾರ ಮತ್ತು ಗುಂಪಿನ ನಮೂದುಗಳನ್ನು ಸೇರಿಸುವಾಗ, POSIX ಗುಣವೈಶಿಷ್ಟ್ಯಗಳನ್ನು AD ಯೊಂದಿಗೆ ಹೊಂದಿಕೆ ಮಾಡಿರಲಾಗಿರುವುದಿಲ್ಲ. AD ಗೆ ಹೊಸ ಬಳಕೆದಾರ ಮತ್ತು ಗುಂಪನ್ನು ಸೇರಿಸುವುದರಿಂದ ಅದು ಡಿರಕ್ಟರಿ ಸರ್ವರಿನೊಂದಿಗೆ ಹೊಂದಿಕೆಯಾಗುತ್ತದೆ, ಮತ್ತು ಗುಣವೈಶಿಷ್ಟ್ಯಗಳನ್ನು ಮಾರ್ಪಾಡುವುದರಿಂದ ಎರಡೂ ಕಡೆಯಿಂದಲೂ ಸಹ ಹೊಂದಾಣಿಕೆ ಉಂಟಾಗುತ್ತದೆ.

ಅಧ್ಯಾಯ 6. ಸುರಕ್ಷತೆ

sudoer ಗಳ ನಮೂದುಗಳನ್ನು ಪರಿಶೀಲಿಸುವಾಗ ಅಧೀಕೃತವಾಗಿ ಹೊಂದಿಕೆಯಾಗುತ್ತದೆ ಎಂದು ಪರಿಗಣಿಸುವಿಕೆ

sudo ಸೌಕರ್ಯವು sudoer ಗಳಿಗಾಗಿ /etc/nsswitch.conf ಕಡತವನ್ನು ಸಂಪರ್ಕಿಸಲು ಮತ್ತು ಅವುಗಳಿಗಾಗಿ ಕಡತಗಳಲ್ಲಿ ಅಥವ LDAP ಬಳಸಿಕೊಂಡು ನೋಡಲು ಸಾಧ್ಯವಿರುತ್ತದೆ. ಈ ಹಿಂದೆ, sudoer ಗಳ ಮೊದಲಿನ ದತ್ತಸಂಚಯದಲ್ಲಿ ಹೊಂದಿಕೆಯಾಗುವ ಒಂದು ನಮೂದು ಕಂಡುಬಂದ ಮೇಲೆಯೂ ಸಹ ಬೇರೆ ದತ್ತಸಂಚಯಗಳಲ್ಲಿ (ಕಡತಗಳೂ ಸೇರಿದಂತೆ) ಹುಡುಕುವ ಕಾರ್ಯವು ಮುಂದುವರೆಯುತ್ತಿತ್ತು. Red Hat Enterprise Linux 6.4 ರಲ್ಲಿ, ಒಂದು ನಿಗದಿತ sudoer ಹೊಂದಿಕೆಯಾದ ನಂತರ ಹುಡುಕಾಟವನ್ನು ನಿಲ್ಲಿಸುವಂತೆ /etc/nsswitch.conf ಒಂದು ಆಯ್ಕೆಯನ್ನು ಸೇರಿಸಲಾಗಿದೆ. ಇದರಿಂದಾಗಿ, ಬೇರೆ ಯಾವುದೆ ದತ್ತಸಂಚಯಗಳಲ್ಲಿ ಹುಡುಕಾಟವನ್ನು ನಡೆಸುವಿಕೆಯನ್ನು ತಡೆಯುತ್ತದೆ; ಆ ಮೂಲಕ, ದೊಡ್ಡ ಪರಿಸರಗಳಲ್ಲಿ sudoerಗಳ ನಮೂದನ್ನು ಹುಡುಕಾಟ ಕಾರ್ಯದ ಕ್ಷಮತೆಯನ್ನು ಸುಧಾರಿಸುತ್ತದೆ. ಈ ವರ್ತನೆಯನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿರುವುದಿಲ್ಲ, ಮತ್ತು ಆಯ್ದ ದತ್ತಸಂಚಯದ ಎದುರು [SUCCESS=return] ಎಂಬ ವಾಕ್ಯಾಂಶವನ್ನು ಸೇರಿಸುವ ಮೂಲಕ ಸಕ್ರಿಯಗೊಳಿಸಬೇಕಾಗುತ್ತದೆ. ದತ್ತಸಂಚಯದಲ್ಲಿ ಒಂದು ಹೊಂದಾಣಿಕೆಯು ಕಂಡುಬಂದಲ್ಲಿ, ಅದು ಈ ವಾಕ್ಯಾಂಶಕ್ಕೆ ಆದ್ಯತೆ ನೀಡುತ್ತದೆ, ನಂತರ ಯಾವುದೆ ದತ್ತಸಂಚಯಗಳಲ್ಲಿ ಹುಡುಕಾಟವನ್ನು ನಡೆಸಲಾಗುವುದಿಲ್ಲ.

pam_cracklibಗಾಗಿ ಹೆಚ್ಚುವರಿ ಗುಪ್ತಪದ ಪರಿಶೀಲನೆಗಳು

ಅನೇಕ ಗುಪ್ತಪದ ಸಾಮರ್ಥ್ಯ ಪರಿಶೀಲನೆಗಳನ್ನು ನಡೆಸುವಿಕೆಯನ್ನು ಸೇರಿಸುವಂತೆ pam_cracklib ಮಾಡ್ಯೂಲ್ ಅನ್ನು ಅಪ್ಡೇಟ್ ಮಾಡಲಾಗಿದೆ:
  • ಕೆಲವು ನಿಶ್ಚಿತ ದೃಢೀಕರಣ ನಿಯಮಗಳು "abcd" ಅಥವ "98765" ಯಂತಹ ಉದ್ದನೆಯ ಅನುಕ್ರಮದ ಸರಣಿಯ ಗುಪ್ತಪದಗಳನ್ನು ಅನುಮತಿಸುವುದಿಲ್ಲ. ಈ ಅಪ್ಡೇಟ್ maxsequence ಆಯ್ಕೆಯನ್ನು ಬಳಸಿಕೊಂಡು ಈ ಅನುಕ್ರಮದ ಉದ್ದವನ್ನು ಮಿತಿಗೊಳಿಸುವ ಸಾಧ್ಯತೆಯನ್ನು ಪರಿಚಯಿಸುತ್ತದೆ.
  • ಹೊಸ ಗುಪ್ತಪದವು /etc/passwd ನಲ್ಲಿನ ನಮೂದುಗಳಲ್ಲಿನ GECOS ಕ್ಷೇತ್ರದಿಂದ ಪದಗಳನ್ನು ಹೊಂದಿದೆಯೆ ಎಂದು pam_cracklib ಮಾಡ್ಯೂಲ್ ಇನ್ನು ಮುಂದೆ ಪರೀಕ್ಷಿಸುತ್ತದೆ. GECOS ಕ್ಷೇತ್ರವು ಗುಪ್ತಪದವನ್ನು ಕದಿಯಲು ಸುಲಭವಾಗಬಹುದಾದ ಬಳಕೆದಾರನ ಪೂರ್ಣಹೆಸರು ಅಥವ ದೂರವಾಣಿ ಸಂಖ್ಯೆಯಂತಹ ಬಳಕೆದಾರರ ಕುರಿತಾದ ಹೆಚ್ಚುವರಿ ಮಾಹಿತಿಯನ್ನು ಶೇಖರಿಸಿ ಇಡಲು ಬಳಸಲಾಗುತ್ತದೆ.
  • pam_cracklib ಮಾಡ್ಯೂಲ್ ಈಗ maxrepeatclass ಆಯ್ಕೆಯ ಮುಖಾಂತರ ಗುಪ್ತಪದದಲ್ಲಿ ಒಂದೇ ವರ್ಗದಲ್ಲಿನ (ಲೋಯರ್ ಕೇಸ್, ಅಪ್ಪರ್ ಕೇಸ್, ಅಂಕೆ ಮತ್ತು ವಿಶೇಷ ಅಕ್ಷರಗಳು) ಅನುಮತಿಸಲಾಗುವ ಗರಿಷ್ಟ ಸಂಖ್ಯೆಯ ಅನುಕ್ರಮಿತ ಅಕ್ಷರಗಳನ್ನು ಸೂಚಿಸಲು ಅನುವು ಮಾಡುತ್ತದೆ.
  • pam_cracklib ಮಾಡ್ಯೂಲ್ ಈಗ ನಿರ್ವಾಹಕ ಖಾತೆಗಾಗಿನ ಹೊಸ ಗುಪ್ತಪದಗಳಿಗೆ ಸಂಕೀರ್ಣತೆಯ ನಿರ್ಬಂಧಗಳನ್ನು ಹೇರುವ enforce_for_root ಆಯ್ಕೆಯನ್ನು ಬೆಂಬಲಿಸುತ್ತದೆ.

tmpfs Polyinstantiation ಗಾಗಿ ಗಾತ್ರದ ಆಯ್ಕೆ

ಅನೇಕ tmpfs ಏರಿಕೆಗಳ ಹೊಂದಿರುವ ವ್ಯವಸ್ಥೆಗಳಲ್ಲಿ, ವ್ಯವಸ್ಥೆಯ ಮೆಮೊರಿಯನ್ನು ಆಕ್ರಮಿಸದೆ ಇರುವಂತೆ ತಡೆಯಲು ಅವುಗಳ ಗಾತ್ರವನ್ನು ಮಿತಿಗೊಳಿಸುವುದು ಅತ್ಯಗತ್ಯ. /etc/namespace.conf ಸಂರಚನಾ ಕಡತದಲ್ಲಿನ mntopts=size=<size> ಆಯ್ಕೆಯನ್ನು ಬಳಸಿಕೊಂಡು tmpfs polyinstantiation ಅನ್ನು ಬಳಸುವಾಗ, tmpfs ಕಡತ ವ್ಯವಸ್ಥೆಯ ಏರಿಕೆಯ ಗರಿಷ್ಟ ಗಾತ್ರವನ್ನು ಸೂಚಿಸಲು ಬಳಕೆದಾರರಿಗೆ ಅನುವು ಮಾಡುವಂತೆ PAM ಅನ್ನು ಅಪ್‌ಡೇಟ್ ಮಾಡಲಾಗಿದೆ.

ನಿಷ್ಕ್ರಿಯ ಖಾತೆಗಳನ್ನು ಲಾಕ್ ಮಾಡುವಿಕೆ

ಕೆಲವೊಂದು ದೃಢೀಕರಣ ನಿಯಮಗಳಿಗಾಗಿ ಒಂದು ನಿರ್ದಿಷ್ಟ ಸಮಯದವರೆಗೆ ಬಳಸದೇ ಇರುವ ಖಾತೆಯನ್ನು ಬಂಧಿಸುವ (ಲಾಕ್) ಅಗತ್ಯವಿರುತ್ತದೆ. Red Hat Enterprise Linux 6.4 ರಲ್ಲಿ pam_lastlog ಮಾಡ್ಯೂಲ್‌ಗಾಗಿ ಒಂದು ಹೆಚ್ಚುವರಿ ಕ್ರಿಯಾಶೀಲತೆಯನ್ನು ಪರಿಚಯಿಸುತ್ತದೆ, ಇದು ಖಾತೆಗಳನ್ನು ಒಂದು ಸಂರಚಿಸಬಹುದಾದ ಸಂಖ್ಯೆಯ ದಿನಗಳ ನಂತರ ಬಂಧಿಸಲು ಬಳಕೆದಾರರಿಗೆ ಅನುಮತಿಸುತ್ತದೆ.

libica ಗಾಗಿ ಕಾರ್ಯಾಚರಣೆಯ ಹೊಸ ಮಾರ್ಗಗಳು

libica ಲೈಬ್ರರಿಯು, IBM System z ನಲ್ಲಿ IBM eServer Cryptographic Accelerator (ICA) ಯಂತ್ರಾಂಶವನ್ನು ನಿಲುಕಿಸಿಕೊಳ್ಳಲು ಕೆಲವು ಕಾರ್ಯಶೀಲತೆಗಳು ಮತ್ತು ಸೌಲಭ್ಯಗಳನ್ನು ಹೊಂದಿರುತ್ತದೆ, ಹಾಗೂ ಇದನ್ನು ಸೆಂಟ್ರಲ್ ಪ್ರೊಸೆಸರ್ ಅಸಿಸ್ಟ್‍ ಫಾರ್ ಕ್ರಿಪ್ಟೊಗ್ರಾಫಿಕ್ ಫಂಕ್ಶನ್‌ನಲ್ಲಿ ಮೆಸೇಜ್ ಸೆಕ್ಯುರಿಟಿ ಅಸಿಸ್ಟ್‍ ಎಕ್ಸ್‍ಟೆನ್ಶನ್ 4 ಸೂಚನೆಗಳನ್ನು ಅನುಮತಿಸಲು ಹೊಸ ಅಲ್ಗಾರಿತಮ್‌ಗಳನ್ನು ಬಳಸುವುದನ್ನು ಅನುಮತಿಸುವಂತೆ ಮಾರ್ಪಡಿಸಲಾಗಿದೆ. DES ಮತ್ತು 3DES ಬ್ಲಾಕ್ ಸಿಫರುಗಳಿಗಾಗಿ, ಈ ಕೆಳಗಿನ ಕಾರ್ಯಾಚರಣೆಯ ಕ್ರಮಗಳಿಗೆ ಇನ್ನುಮುಂಚೆ ಬೆಂಬಲಿಸಲಾಗುತ್ತದೆ:
  • ಸಿಫರ್ಟೆಕ್ಸ್ಟ್‍ ಸ್ಟೀಲಿಂಗ್‌ನೊಂದಿಗೆ ಸಿಫರ್ ಬ್ಲಾಕ್ ಚೇನಿಂಗ್ (CBC-CS)
  • ಸಿಫರ್-ಆಧರಿತವಾದ ಮೆಸೇಜ್ ಅತೆಂಟಿಕೇಶನ್ ಕೋಡ್ (CMAC)
AES ಬ್ಲಾಕ್ ಸಿಫರ್, ಈ ಕೆಳಗಿನ ಕಾರ್ಯಾಚರಣೆಯ ವಿಧಾನಗಳಿಗೆ ಈಗ ಬೆಂಬಲಿಸಲಾಗುತ್ತಿದೆ:
  • ಸಿಫರ್ಟೆಕ್ಸ್ಟ್‍ ಸ್ಟೀಲಿಂಗ್‌ನೊಂದಿಗೆ ಸಿಫರ್ ಬ್ಲಾಕ್ ಚೇನಿಂಗ್ (CBC-CS)
  • ಸಿಫರ್ ಬ್ಲಾಕ್ ಚೇನಿಂಗ್ ಮೆಸೇಶಜ್ ಅತೆಂಟಿಕೇಶನ್ ಕೋಡ್‌ನೊಂದಿಗಿನ (CCM) ಕೌಂಟರ್
  • Galois/ಕೌಂಟರ್ (GCM)
ಈ ಸಂಕೀರ್ಣ ಕ್ರಿಪ್ಟೋಗ್ರಾಫಿಕ್ ಅಲ್ಗಾರಿತಮ್‌ಗಳ ವೇಗವರ್ಧನೆಯು IBM System z ಗಣಕಯಂತ್ರಗಳ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

System z ಗಾಗಿ zlib ಕಂಪ್ರೆಶನ್ ಲೈಬ್ರರಿಯ ಸೂಕ್ತಗೊಳಿಕೆ, ಮತ್ತು ಬೆಂಬಲ

ಸಾಮಾನ್ಯ ಉದ್ಧೇಶದ ನಷ್ಟರಹಿತ ದತ್ತಾಂಶ ಸಂಕುಚನಾ ಲೈಬ್ರರಿಯಾದಂತಹ zlib ಲೈಬ್ರರಿಯನ್ನು IBM System z ನಲ್ಲಿ ಸಂಕುಚನವನ್ನು ಸುಧಾರಿಸುವ ಉದ್ಧೇಶದಿಂದ ಅಪ್‌ಡೇಟ್ ಮಾಡಲಾಗಿದೆ.

ಫಾಲ್‌ಬ್ಯಾಕ್ ಫೈರ್ವಾಲ್ ಸಂರಚನೆ

iptables ಮತ್ತು ip6tables ಸೇವೆಗಳು ಈಗ ಪೂರ್ವನಿಯೋಜಿತ ಸಂರಚನೆಗಳನ್ನು ಅನ್ವಯಿಸಲಾಗದೆ ಇದ್ದಲ್ಲಿ ಒಂದು ಹಿಮ್ಮರಳಿಕೆ ಫೈರ್ವಾಲ್ ಸಂರಚನೆಯನ್ನು ನಿಯೋಜಿಸಲಾಗುತ್ತದೆ. /etc/sysconfig/iptables ಇಂದ ಫೈರ್ವಾಲ್ ನಿಯಮಗಳನ್ನು ಅನ್ವಯಿಸುವುದು ವಿಫಲಗೊಂಡಲ್ಲಿ, ಹಿಮ್ಮರಳಿಕೆ ಕಡತವು ಅಸ್ತಿತ್ವದಲ್ಲಿದ್ದಲ್ಲಿ ಅದನ್ನು ಅನ್ವಯಿಸಲಾಗುತ್ತದೆ. ಹಿಮ್ಮರಳಿಕೆ ಕಡತವನ್ನು /etc/sysconfig/iptables.fallback ಎಂದು ಹೆಸರಿಸಲಾಗುತ್ತದೆ ಮತ್ತು iptables-save ಕಡತದ ವಿನ್ಯಾಸವನ್ನು ಬಳಸುತ್ತದೆ (/etc/sysconfig/iptables ನಂತೆಯೆ). ಹಿಮ್ಮರಳಿಕೆ ಕಡತವನ್ನು ಅನ್ವಯಿಸುವಿಕೆಯೂ ಸಹ ವಿಫಲಗೊಂಡಲ್ಲಿ, ಅದರ ನಂತರ ಯಾವುದೆ ಹಿಮ್ಮರಳಿಕೆ ಇರುವುದಿಲ್ಲ. ಒಂದು ಹಿಮ್ಮರಳಿಕೆ ಕಡತವನ್ನು ರಚಿಸಲು, ಶಿಷ್ಟವಾದ ಫೈರ್ವಾಲ್ ಸಂರಚನಾ ಉಪಕರಣಗಳನ್ನು ಬಳಸಿ ಮತ್ತು ಕಡತವನ್ನು ಮರುಹೆಸರಿಸಿ ಅಥವ ಹಿಮ್ಮರಳಿಕೆ ಕಡತಕ್ಕೆ ಪ್ರತಿ ಮಾಡಿ. ಇದೆ ಪ್ರಕ್ರಿಯೆಯನ್ನು ip6tables ಸೇವೆಗೂ ಸಹ ಬಳಸಿ, ಆದರೆ ಕೇವಲ iptables ಅನ್ನು ip6tables ಇಂದ ಬದಲಾಯಿಸಿ.

ಅಧ್ಯಾಯ 7. ಎಂಟೈಟಲ್ಮೆಂಟ್

ವಾಕ್ಯಾಂಶ ಅಪ್ಡೇಟ್‌ಗಳು

Red Hat Enterprise Linux 6.4 ರಲ್ಲಿ, ಚಂದಾದಾರಿಕೆ ವ್ಯವಸ್ಥಾಪಕದಲ್ಲಿನ ಹಲವಾರು ವಾಕ್ಯಾಂಶಗಳನ್ನು ಮರುಹೆಸರಿಸಲಾಗಿದೆ:
  • subscribe (ಚಂದಾದಾರನಾಗಿಸು) ಅನ್ನುattach (ಲಗತ್ತಿಸು) ಎಂದು ಮರುಹೆಸರಿಸಲಾಗಿದೆ
  • auto-subscribe (ಸ್ವಯಂ-ಚಂದಾದಾರಿಕೆ) ಅನ್ನು auto-attach (ಸ್ವಯಮ-ಲಗತ್ತಿಸು) ಎಂದು ಮರುಹೆಸರಿಸಲಾಗಿದೆ
  • unsubscribe (ಚಂದಾದಾರಿಕೆ ತೆಗೆದುಹಾಕು) ಅನ್ನು remove (ತೆಗೆದುಹಾಕು) ಎಂದು ಮರುಹೆಸರಿಸಲಾಗಿದೆ
  • consumer (ಗ್ರಾಹಕ) ಅನ್ನು system (ವ್ಯವಸ್ಥೆ) ಅಥವ unit

ಪ್ರಾಕ್ಸಿ ಸಂಪರ್ಕವನ್ನು ಪರೀಕ್ಷಿಸಲಾಗುತ್ತಿದೆ

ಪ್ರಾಕ್ಸಿ ಸಂರಚನೆಯ ಸಂವಾದಚೌಕವು ಈಗ ಬಳಕೆದಾರರು ಒಂದು ಮೌಲ್ಯವನ್ನು ನಮೂದಿಸುವ ಮೂಲಕ ಪ್ರಾಕ್ಸಿಯೊಂದಿಗಿನ ಸಂಪರ್ಕವನ್ನು ಪರೀಕ್ಷಿಸಲು ಅನುಮತಿಸುತ್ತದೆ.

ಅನೇಕ ಎಂಟೈಟಲ್ಮೆಂಟ್‌ಗಳನ್ನು ಚಂದಾದಾರಗೊಳಿಸಿ ಅಥವ ಚಂದಾದಾರಿಕೆಯನ್ನು ರದ್ದುಗೊಳಿಸಿ

ಚಂದಾದಾರಿಕೆ ವ್ಯವಸ್ಥಾಪಕವು ಈಗ ಅನೇಕ ಎಂಟೈಟ್ಲಮೆಂಟ್‌ಗಳನ್ನು ಅವುಗಲ ಅನುಕ್ರಮ ಸಂಖ್ಯೆಗಳನ್ನು ಬಳಸಿಕೊಂಡು ಚಂದಾದಾರವಾಗಿಸಲು (ಲಗತ್ತಿಸಲು) ಅಥವ ಚಂದಾದಾರಿಕೆ ರದ್ದುಗೊಳಿಸಲು (ತೆಗೆದುಹಾಕಲು) ಸಮರ್ಥವಾಗಿರುತ್ತದೆ.

GUI ಯಲ್ಲಿ ಸಕ್ರಿಯಗೊಳಿಕೆ ಕೀಲಿಗಳ ಬೆಂಬಲ

ಚಂದಾದಾರಿಕೆ ವ್ಯವಸ್ಥಾಪಕದ ಚಿತ್ರಾತ್ಮಕ ಬಳಕೆದಾರ ಸಂಪರ್ಕಸಾಧನವು ಈಗ ಒಂದು ಸಕ್ರಿಯಗೊಳಿಕೆ ಕೀಲಿಯನ್ನು ಬಳಸಿಕೊಂಡು ವ್ಯವಸ್ಥೆಯನ್ನು ನೋಂದಾಯಿಸಲು ಶಕ್ತವಾಗಿರುತ್ತದೆ. ಒಂದು ವ್ಯವಸ್ಥೆಯನ್ನು ನೋಂದಾಯಿಸುವ ಮೊದಲೆ ಸಕ್ರಿಯಗೊಳಿಕೆಯ ಕೀಲಿಯನ್ನು ಬಳಸಿಕೊಂಡು ಅದರ ಚಂದಾದಾರಿಕೆಯನ್ನು ಪೂರ್ವಸಂರಚನೆ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ

ಬಾಹ್ಯ ಪೂರೈಕೆಗಣಕಗಳಲ್ಲಿ ನೋಂದಾಯಿಸುವಿಕೆ

ಒಂದು ವ್ಯವಸ್ಥೆಯನ್ನು ನೋಂದಾಯಿಸುವಾಗ ದೂರಸ್ಥ ಪೂರೈಕೆಗಣಕವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಈಗ ಚಂದಾದಾರಿಕೆ ವ್ಯವಸ್ಥಾಪಕದಲ್ಲಿ ಬೆಂಬಲಿಸಲಾಗುತ್ತದೆ. ಚಂದಾದಾರಿಕೆ ವ್ಯವಸ್ಥಾಪಕ ಬಳಕೆದಾರ ಸಂಪರ್ಕಸಾಧನವು ನೋಂದಣಿಯ ಸಮಯದಲ್ಲಿ ನೊಂದಾಯಿಸಬೇಕಿರುವ ಪೂರೈಕೆಗಣಕದ ಒಂದು ಸಂಪರ್ಕಸ್ಥಾನ ಮತ್ತು ಪ್ರಿಫಿಕ್ಸಿನೊಂದಿಗೆ ಒಂದು URL ಅನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸುತ್ತದೆ. ಅಷ್ಟೆ ಅಲ್ಲದೆ, ಆಜ್ಞಾ ಸಾಲಿನಲ್ಲಿ ನೋಂದಾಯಿಸುವಾಗ, ನೋಂದಾಯಿಸಿಬೇಕಿರುವ ಪೂರೈಕೆಗಣಕವನ್ನು ಸೂಚಿಸಲು --serverurl ಆಯ್ಕೆಯನ್ನು ಬಳಸಬಹುದಾಗಿರುತ್ತದೆ. ಈ ಸವಲತ್ತಿನ ಕುರಿತಾದ ಹೆಚ್ಚಿನ ಮಾಹಿತಿಗಾಗಿ, Subscription Management GuideRegistering, Unregistering, and Reregistering a System ಅಧ್ಯಾಯವನ್ನು ನೋಡಿ .

GUI ಯಲ್ಲಿ ಬಳಸುವಿಕೆಯಲ್ಲಿನ ಬದಲಾವಣೆಗಳು

ಗ್ರಾಹಕರ ಅಭಿಪ್ರಾಯದ ಮೇರೆಗೆ ಚಂದಾದಾರ ವ್ಯವಸ್ಥಾಪಕ GUI ಅನ್ನು ಹಲವಾರು ಬದಲಾವಣೆಗಳ ಮೂಲಕ ಉತ್ತಮಗೊಳಿಸಲಾಗಿದೆ.

ಅಧ್ಯಾಯ 8. ವರ್ಚುವಲೈಸೇಶನ್

8.1. KVM

virtio-SCSI

virtio-SCSI (SCSI ಯಲ್ಲಿನ KVM ಆಧರಿತವಾದ ಶೇಖರಣಾ ಆರ್ಕಿಟೆಕ್ಚರ್) ಸಾಮರ್ಥ್ಯಗಳನ್ನು ಸೇರಿಸುವ ಮೂಲಕ KVM ವರ್ಚುವಲೈಸೇಶನ್‌ನ ಶೇಖರಣಾ ಸ್ಟ್ಯಾಕ್‌ ಅನ್ನು ಸುಧಾರಿಸಲಾಗಿದೆ. Virtio-SCSI ಯು ನೇರವಾಗಿ SCSI LUNಗಳೊಂದಿಗೆ ಸಂಪರ್ಕಸಾಧಿಸುತ್ತದೆ ಮತ್ತು virtio-blk ಯ ಹೋಲಿಕೆಯಲ್ಲಿ ಗಮನಾರ್ಹವಾಗಿ ಗಾತ್ರ ಬದಲಾವಣೆಯನ್ನು (ಸ್ಕೇಲೆಬಿಲಿಟಿ) ಸುಧಾರಿಸುತ್ತದೆ. virtio-SCSI ಯ ಪ್ರಯೋಜನವೆಂದರೆ, ಕೇವಲ ಸುಮಾರು 25 ಸಾಧನಗಳನ್ನು ಮಾತ್ರ ನಿಭಾಯಿಸಬಲ್ಲ ಮತ್ತು PCI ಸ್ಲಾಟ್‌ಗಳನ್ನು ಸಂಪೂರ್ಣವಾಗಿ ಬಳಸಬಲ್ಲ virtio-blk ಹೋಲಿಸಿದಲ್ಲಿ ಇದು ನೂರಾರು ಸಾಧನಗಳನ್ನು ನಿಭಾಯಿಸಬಲ್ಲದು.
Virtio-SCSI ಈಗ ಈ ಕೆಳಗಿನ ಸಾಮರ್ಥ್ಯಗಳೊಂದಿಗೆ ನಿರ್ದೇಶಿತ ಸಾಧನದ ಸವಲತ್ತನ್ನು ಹಾಗೆಯೆ ಇರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ:
  • ಒಂದು ವರ್ಚುವಲ್ ಹಾರ್ಡ್ ಡ್ರೈವ್ ಅಥವ CD ಯ ಮುಖಾಂತರ virtio-scsi ನಿಯಂತ್ರಕವನ್ನು ಲಗತ್ತಿಸುವಿಕೆ,
  • QEMU scsi-block ಸಾಧನದ ಮುಖಾಂತರ ಒಂದು ಭೌತಿಕ SCSI ಸಾಧನವನ್ನು ಆತಿಥೇಯಗಣಕದಿಂದ ಅತಿಥಿಗಣಕ್ಕೆ ರವಾನಿಸುವಿಕೆ,
  • ಮತ್ತು ಪ್ರತಿ ಅತಿಥಿಗಣಕಕ್ಕೆ ನೂರಾರು ಸಾಧನಗಳ ಬಳಕೆಯನ್ನು ಅನುಮತಿಸುವುದು; virtio-blk ನಲ್ಲಿನ ~25-ಸಾಧನದ ಮಿತಿಯ ಹೋಲಿಕೆಯಲ್ಲಿ ಒಂದು ಸುಧಾರಣೆ.
virtio-scsi ಅನ್ನು Red Hat Enterprise Linux 6.3 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗಿತ್ತು ಮತ್ತು Red Hat Enterprise Linux 6.4 ರಲ್ಲಿ ಸಂಪೂರ್ಣ ಬೆಂಬಲಿತ ಸ್ಥಿತಿಗೆ ಏರಿಸಲಾಗಿದೆ. virtio-win ಚಾಲಕಗಳೊಂದಿಗೆ ವಿಂಡೋಸ್ ಅತಿಥಿಗಳಿಗೂ (Windows XP ಅನ್ನು ಹೊರತುಪಡಿಸಿ) ಸಹ ಬೆಂಬಲವನ್ನು ಸೇರಿಸಲಾಗಿದೆ.

Intel ನ ನೆಕ್ಸ್ಟ್‍-ಜನರೇಶನ್ ಕೋರ್ ಸಂಸ್ಕಾರಕಕ್ಕಾಗಿನ ಬೆಂಬಲ

Red Hat Enterprise Linux 6.4 ರಲ್ಲಿ qemu-kvm ಗೆ Intel ನ ನೆಕ್ಸ್ಟ್‍-ಜನರೇಶನ್ ಕೋರ್ ಸಂಸ್ಕಾರಕಕ್ಕೆ ಬೆಂಬಲವನ್ನು ಸೇರಿಸಲಾಗಿದ್ದು ಆ ಮೂಲಕ KVM ಅತಿಥಿಗಳು ಈ ಸಂಸ್ಕಾರಕಗಳು ಒದಗಿಸುವ ಹೊಸ ಸವಲತ್ತುಗಳನ್ನು ಬಳಸಿಕೊಳ್ಳಲು ಸಾಧ್ಯವಿರುತ್ತದೆ, ಇದರಲ್ಲಿ ಮುಖ್ಯವಾದವುಗಳೆಂದರೆ: ಅಡ್ವಾನ್ಸಡ್ ವೆಕ್ಟರ್ ಎಕ್ಸ್ಟೆನ್ಶನ್ಸ್ 2 (AVX2), ಬಿಟ್-ಮ್ಯಾನ್ಯುಪುಲೇಶನ್ ಇನ್‌ಸ್ಟ್ರಕ್ಶನ್ 1 (BMI1), ಬಿಟ್-ಮ್ಯಾನ್ಯುಪುಲೇಶನ್ ಇನ್‌ಸ್ಟ್ರಕ್ಶನ್ 2 (BMI2), ಹಾರ್ಡವೇರ್ ಲಾಕ್ ಎಲಿಸನ್ (HLE), ರಿಸ್ಟ್ರಿಕ್ಟಡ್ ಟ್ರಾನ್ಶಾಕ್ಶನಲ್ ಮೆಮೊರಿ (RTM), ಪ್ರೊಸೆಸ್-ಕಾಂಟೆಕ್ಸ್ಟ್‍ ಐಡೆಂಟಿಫಯರ್ (PCID), ಇನ್‌ವ್ಯಾಲಿಡೇಟ್ ಪ್ರೋಸೆಸ್ -ಕಾಂಟೆಕ್ಸ್ಟ್‍ ಐಡೆಂಟಿಫಯರ್ (INVPCID), ಫ್ಯೂಸಡ್ ಮಲ್ಟಿಪ್ಲೈ-ಆಡ್ (FMA), ಬಿಗ್-ಎಂಡಿಯನ್ ಮೂವ್ ಸೂಚನೆ (MOVBE), F ಸೆಗ್ಮೆಂಟ್ ಮತ್ತು G ಸೆಗ್ಮೆಂಟ್ BASE ಸೂಚನೆ (FSGSBASE), ಸೂಪರ್ವೈಸರ್ ಮೋಡ್ ಎಕ್ಸಿಕ್ಯೂಶನ್ ಪ್ರಿವೆನ್ಶನ್ (SMEP), ಎನ್‌ಹ್ಯಾನ್ಸಡ್ REP MOVSB/STOSB (ERMS).

AMD Opteron 4xxx Series CPU ಗಾಗಿನ ಬೆಂಬಲ

AMD Opteron 4xxx ಸೀರೀಸ್ ಸಂಸ್ಕಾರಕವು ಈಗ qemu-kvm ಅನ್ವಯದಿಂದ ಬೆಂಬಲಿತವಾಗಿರುತ್ತದೆ. ಇದು F16C ಸೂಚನೆಗಳ ಸೆಟ್, ಟ್ರೇಲಿಂಗ್ ಬಿಟ್ ಮ್ಯಾನಿಪುಲೇಶನ್, ಬಿಟ್-ಮ್ಯಾನಿಪುಲೇಶನ್ ಇನ್‌ಸ್ಟ್ರಕ್ಶನ್ಸ್‍1 (BMI1) ಡೆಸಿಮೇಟ್ ಫಂಕ್ಶನ್ಸ್‍, ಮತ್ತು ಫ್ಯೂಸಡ್ ಮಲ್ಟಿಪ್ಲೈ-ಆಡ್ (FMA) ಸೂಚನೆಗಳ ಸೆಟ್ ಮುಂತಾದ ಈ ಸಂಸ್ಕಾರಕ ಸರಣಿಯ ಹೊಸ ಸವಲತ್ತುಗಳನ್ನು KVM ಅತಿಥಿಗಳಿಗೆ ಸೇರಿಸಲು ಅನುವು ಮಾಡಿಕೊಡುತ್ತದೆ .

SPICE ಮೂಲಕ USB ಫಾರ್ವಾರ್ಡಿಂಗ್ ಬಳಸಿಕೊಂಡು ಅತಿಥಿ ಲೈವ್ ವರ್ಗಾವಣೆ

Red Hat Enterprise Linux 6.4 ರಲ್ಲಿ, ಸಂರಚಿಸಲಾದ ಎಲ್ಲಾ ಸಾಧನಗಳಿಗಾಗಿಯೂ ಸಹ USB ಸಾಧನದ ಮರುನಿರ್ದೇಶನವನ್ನು ಹಾಗೆಯೆ ಇರಿಸಿಕೊಂಡು SPICE ಮೂಲಕ USB ಫಾರ್ವಾರ್ಡಿಂಗ್ ಅನ್ನು ಬಳಸಿಕೊಂಡು ಅತಿಥಿಗಣಕಗಳ ಲೈವ್ ವರ್ಗಾಯಿಸುವಿಕೆಯನ್ನು KVM ಬೆಂಬಲಿಸುತ್ತದೆ.

USB ಸಾಧನಗಳನ್ನು ಬಳಸಿಕೊಂಡು ಅತಿಥಿಗಣಕಗಳ ಲೈವ್ ವರ್ಗಾವಣೆ

Red Hat Enterprise Linux 6.4 ರಲ್ಲಿ, USB ಸಾಧನಗಳಲ್ಲಿ ಅತಿಥಿ ಗಣಕಗಳ ಲೈವ್ ವರ್ಗಾವಣೆಯನ್ನು ಬೆಂಬಲಿಸಲಾಗುತ್ತದೆ. ಈ ಕೆಳಗಿನ ಸಾಧನಗಳನ್ನು ಬೆಂಬಲಿಸಲಾಗುತ್ತದೆ: ಎನ್‌ಹ್ಯಾನ್ಸಡ್ ಹೋಸ್ಟ್‍ ಕಂಟ್ರೋಲರ್ ಇಂಟರ್ಫೇಸ್ (EHCI) ಮತ್ತು ಯುನಿವರ್ಸಲ್ ಹೋಸ್ಟ್‍ ಕಂಟ್ರೋಲರ್ ಇಂಟರ್ಫೇಸ್ (UHCI) ಸ್ಥಳೀಯ ಪಾಸ್‌ತ್ರೂ ಮತ್ತು ಶೇಖರಣಾ ಸಾಧನಗಳು, ಮೌಸ್‌ಗಳು, ಕೀಲಿಮಣೆಗಳು, ಹಬ್‌ಗಳು ಇತ್ಯಾದಿ ಎಮ್ಯುಲೇಟೆಡ್ ಸಾಧನಗಳು.

QEMU ಅತಿಥಿಗಣಕವನ್ನು ಅಪ್‌ಡೇಟ್ ಮಾಡಲಾಗಿದೆ

QEMU ಅತಿಥಿಗಣಕ ಮಧ್ಯವರ್ತಿಯು (qemu-guest-agent ಪ್ಯಾಕೇಜಿನಿಂದ ಒದಗಿಸಲಾಗಿರುವ) ಈಗ Red Hat Enterprise Linux 6.4 ರಲ್ಲಿ ಸಂಪೂರ್ಣವಾಗಿ ಬೆಂಬಲಿತವಾಗಿದೆ. ಇದನ್ನು ಈ ಕೆಳಗಿನ ಗಮನಾರ್ಹವಾದ ಸುಧಾರನೆಗಳು ಮತ್ತು ದೋಷ ಪರಿಹಾರಗಳನ್ನು ಒದಗಿಸುವ ಸಲುವಾಗಿ ಅಪ್‌ಸ್ಟ್ರೀಮ್ ಆವೃತ್ತಿಯಾದಂತಹ 1.1 ಕ್ಕೆ ಅಪ್‌ಡೇಟ್ ಮಾಡಲಾಗಿದೆ:
  • guest-suspend-disk ಮತ್ತು guest-suspend-ram ಆಜ್ಞೆಗಳನ್ನು ಈಗ ಒಂದು ವಿಂಡೋಸ್ ವ್ಯವಸ್ಥೆಯಲ್ಲಿ RAM ಗೆ ಅಥವ ಡಿಸ್ಕಿಗೆ ಅಮಾನತ್ತುಗೊಳಿಸಲು ಬಳಸಬಹುದಾಗಿದೆ.
  • guest-network-get-interfaces ಆಜ್ಞೆಯನ್ನು ಈಗ ಲಿನಕ್ಸಿನಲ್ಲಿ ಜಾಲಬಂಧ ಸಂಪರ್ಕಸಾಧನ ಮಾಹಿತಿಯನ್ನು ಪಡೆಯಲು ಬಳಸಬಹುದಾಗಿರುತ್ತದೆ.
  • ಈ ಅಪ್‌ಡೇಟ್ ಕಡತ ವ್ಯವಸ್ಥೆ ಸ್ಥಗಿತಗೊಳಿಸುವ ಬೆಂಬಲದ ಸುಧಾರಣೆಗಳು ಮತ್ತು ದೋಷ ಪರಿಹಾರಗಳನ್ನು ಒದಗಿಸುತ್ತದೆ.
  • ಈ ಅಪ್‌ಡೇಟ್ ಹಲವಾರು ದಸ್ತಾವೇಜಿನ ಸರಿಪಡಿಕೆಗಳು ಮತ್ತು ಚಿಕ್ಕಪುಟ್ಟ ಸುಧಾರಣೆಗಳನ್ನು ಒಳಗೊಂಡಿರುತ್ತದೆ.

ಪ್ಯಾರಾವರ್ಚುವಲೈಸ್ಡ್‍ ಎಂಡ್-ಆಫ್-ಇಂಟರಪ್ಟ್‍ ಇಂಡಿಕೇಶನ್ (PV-EOI)

Red Hat Enterprise Linux 6.3 ಮತ್ತು ಹಳೆಯದರಲ್ಲಿ ಚಲಾಯಿತಗೊಳ್ಳುತ್ತಿರುವ ಆತಿಥೇಯ ಮತ್ತು ಅತಿಥಿಗಣಕಗಳಿಗಾಗಿ ಪ್ರತಿ ತಡೆಗಳಲ್ಲಿ ಎರಡು VM ನಿರ್ಗಮನಗಳ ಅಗತ್ಯವಿರುತ್ತದೆ (ಸನ್ನಿವೇಶವು ಒಂದು VM ಇಂದ ಇನ್ನೊಂದಕ್ಕೆ ಬದಲಾಯಿಸಲ್ಪಡುತ್ತದೆ): ಒಂದು ತಡೆಯನ್ನು ಸೇರಿಸಲು, ಮತ್ತೊಂದು ತಡೆಯು ಅಂತ್ಯಗೊಂಡಿದೆ ಎಂಬ ಸಂಕೇತವನ್ನು ನೀಡಲು. ಆತಿಥೇಯ ಮತ್ತು ಅತಿಥಿಗಣಕ ಎರಡನ್ನೂ ಸಹ Red Hat Enterprise Linux 6.4 ಅಥವ ಹೊಸತಕ್ಕೆ ಅಪ್‌ಡೇಟ್ ಮಾಡಿದಾಗ, ಅವು ಪ್ಯಾರಾವರ್ಚುವಲ್ ಮಾಡಲಾದ ತಡೆಯ-ಅಂತ್ಯ ಸೌಲಭ್ಯದೊಂದಿಗೆ ಸಂಧಾನ ಮಾಡಬಲ್ಲದು. ಪರಿಣಾಮವಾಗಿ, Red Hat Enterprise Linux 6.4 ಅಥವ ಹೊಸತನ್ನು ಆತಿಥೇಯ ಮತ್ತು ಅತಿಥಿಗಣಕವಾಗಿ ಬಳಸಿಕೊಂಡು, virtio ಜಾಲಬಂಧ ಸಾಧನದೊಂದಿಗೆ ಒಳಬರುವ ಜಾಲಬಂಧ ಸಂಚಾರದಂತಹ ತಡೆ-ಸಂವೇದಿ ಕಾರ್ಯದ ಹೊರೆಗಳಿಗಾಗಿನ ನಿರ್ಗಮನಗಳ ಸಂಖ್ಯೆಯು ಅರ್ಧಕ್ಕೆ ಇಳಿಸಲ್ಪಡುತ್ತದೆ. ಇದರಿಂದಾಗಿ ಅಂತಹ ಕಾರ್ಯದ ಹೊರೆಗಳಿಗಾಗಿ ಆತಿಥೇಯ CPU ಬಳಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕೇವಲ ಅಂಚಿನ ತಡೆಗಳನ್ನು ಮಾತ್ರ ವರ್ಧಿಸಲಾಗುತ್ತದೆ ಎನ್ನುವುದನ್ನು ನೆನಪಿಡಿ: ಉದಾಹರಣೆಗೆ e1000 ನೆಟ್‌ವರ್ಕಿಂಗ್ ಮಟ್ಟದ ತಡೆಗಳನ್ನು ಬಳಸುತ್ತದೆ ಮತ್ತು ಅದನ್ನು ಸುಧಾರಿಸಲಾಗಿಲ್ಲ.

ಸಂರಚಿಸಬಹುದಾದ ಧ್ವನಿ ಪಾಸ್-ತ್ರೂ

ಒಂದು ಧ್ವನಿ ಸಾಧನವನ್ನು ಈಗ ಅತಿಥಿ ವ್ಯವಸ್ಥೆಯಿಂದ microphone ಅಥವ ಒಂದು speaker ಎಂದು ಗುರುತಿಸಲಾಗುತ್ತದೆ (line-in ಮತ್ತು line-out ಎಂದು ಗುರುತಿಸುವುದರ ಜೊತೆಗೆ). ಧ್ವನಿ ಸಾಧನಗಳು ಈಗ ಧ್ವನಿ ರೆಕಾರ್ಡಿಂಗ್ ಮತ್ತು ಆಡಿಯೊಗಾಗಿ ಕೇವಲ ನಿರ್ದಿಷ್ಟ ಬಗೆಯ ಇನ್‌ಪುಟ್‌ಗಳನ್ನು ಅಂಗೀಕರಿಸುವ ಅತಿಥಿ ಅನ್ವಯಗಳಲ್ಲಿ ಸರಿಯಾಗಿ ಕೆಲಸ ಮಾಡಬಲ್ಲದು.

8.2. ಹೈಪರ್-V

Microsoft Hyper-V ಚಾಲಕಗಳಿಗಾಗಿ ಅತಿಥಿಯ ಅನುಸ್ಥಾಪನೆಯ ಬೆಂಬಲವನ್ನು ಸೇರಿಸಲಾಗಿದೆ

Microsoft Hyper-V ಯಲ್ಲಿನ Red Hat Enterprise Linux 6.4 ದಲ್ಲಿ ಸಂಘಟಿತ Red Hat Enterprise Linux ಅತಿಥಿವ್ಯವಸ್ಥೆ ಅನುಸ್ಥಾಪನೆ, ಮತ್ತು Hyper-V ಪ್ಯಾರಾವರ್ಚುವಲೈಸ್ಡ್‍ ಸಾಧನ ಬೆಂಬಲದಿಂದಾಗಿ ಬಳಕೆದಾರರು Microsoft Hyper-V ಹೈಪರ್ವೈಸರುಗಳ ಮೇಲೆ Red Hat Enterprise Linux 6.4 ಅನ್ನು ಒಂದು ಅತಿಥಿ ವ್ಯವಸ್ಥೆಯಾಗಿ ಚಲಾಯಿಸಲು ಸಾಧ್ಯವಿರುತ್ತದೆ. ಈ ಕೆಳಗಿನ Hyper-V ಚಾಲಕಗಳು ಮತ್ತು ಒಂದು ಕ್ಲಾಕ್ ಸೋರ್ಸನ್ನು Red Hat Enterprise Linux 6.4 ರೊಂದಿಗೆ ಕಳುಹಿಸಲಾದ ಕರ್ನಲ್‌ಗೆ ಸೇರಿಸಲಾಗಿದೆ:
  • ಒಂದು ಜಾಲಬಂಧ ಸಾಧನ (hv_netvsc)
  • ಒಂದು ಶೇಖರಣಾ ಸಾಧನ (hv_storvsc)
  • ಒಂದು HID-ಹೊಂದಿಕೆಯಾಗುವ ಮೌಸ್ ಚಾಲಕ (hid_hyperv)
  • ಒಂದು VMbus ಚಾಲಕ (hv_vmbus)
  • ಒಂದು util ಚಾಲಕ (hv_util)
  • ಒಂದು IDE ಡಿಸ್ಕ್‍ ಚಾಲಕ (ata_piix)
  • ಒಂದು ಕ್ಲಾಕ್ ಮೂಲ (i386, AMD64/Intel 64: hyperv_clocksource)
Red Hat Enterprise Linux 6.4 ಯಲ್ಲಿ Hyper-V ಅನ್ನು ಒಂದು ಕ್ಲಾಕ್ ಸೋರ್ಸ್ ಆಗಿಯೂ ಸಹ ಮತ್ತು VMbus ಮೂಲಕ ಅತಿಥಿ IP, FQDN, OS ಹೆಸರು, ಮತ್ತು OS ಬಿಡುಗಡೆ ಸಂಖ್ಯೆಯಂತಹ ಮೂಲಭೂತ ಮಾಹಿತಿಯನ್ನು ಒದಗಿಸುವ ಅತಿಥಿ Hyper-V Key-Value Pair (KVP) ಡೀಮನ್ (hypervkvpd) ಆಗಿ ಸೇರಿಸಲಾಗಿದೆ.

8.3. VMware ESX

VMware PV ಚಾಲಕಗಳು

Red Hat Enterprise Linux 6.4 ಅನ್ನು VMware ESX ನಲ್ಲಿ ಬಳಸುವಾಗ ಯಾವುದೆ ತೊಂದರೆ ಇಲ್ಲದೆ ಉತ್ತಮವಾದ ಅನುಭವವನ್ನು ನೀಡುವಂತೆ VMware ಪ್ಯಾರಾ-ವರ್ಚುವಲೈಸ್ಡ್‍ ಚಾಲಕಗಳನ್ನು ಅಪ್‌ಡೇಟ್ ಮಾಡಲಾದಗಿದೆ. ಅನುಸ್ಥಾಪನೆಯ ಸಮಯದಲ್ಲಿ ಚಾಲಕಗಳ ಪಟ್ಟಿಯನ್ನು ತೋರಿಸುವಂತೆ Anaconda ಅನುಸ್ಥಾಪಕವನ್ನೂ ಸಹ ಅಪ್‌ಡೇಟ್ ಮಾಡಲಾಗಿದೆ. ಈ ಕೆಳಗಿನ ಚಾಲಕಗಳನ್ನು ಅಪ್‌ಡೇಟ್ ಮಾಡಲಾಗಿದೆ:
  • ಒಂದು ಜಾಲಬಂಧ ಚಾಲಕ (vmxnet3)
  • ಒಂದು ಶೇಖರಣಾ ಸಾಧನ (vmw_pvscsi)
  • ಒಂದು ಮೆಮೊರಿ ಬಲೂನಿಂಗ್ ಚಾಲಕ (vmware_balloon)
  • ಒಂದು ಮೌಸ್ ಚಾಲಕ (vmmouse_drv)
  • ಒಂದು ವೀಡಿಯೊ ಚಾಲಕ (vmware_drv)

ಅಧ್ಯಾಯ 9. ಕ್ಲಸ್ಟರಿಂಗ್

IBM iPDU ಫೆನ್ಸ್ ಸಾಧನಕ್ಕಾಗಿನ ಬೆಂಬಲವನ್ನು ಸೇರಿಸುತ್ತದೆ

Red Hat Enterprise Linux 6.4 ರಲ್ಲಿ IBM iPDU ಫೆನ್ಸ್‍ ಸಾಧನಕ್ಕೆ ಬೆಂಬಲವನ್ನು ಸೇರಿಸಲಾಗಿದೆ. ಈ ಫೆನ್ಸ್‍ ಸಾಧನದ ನಿಯತಾಂಕಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, Red Hat Enterprise Linux 6 ರಲ್ಲಿನ Cluster Administration ಮಾರ್ಗದರ್ಶಿಯಲ್ಲಿರುವ Fence Device Parameters ಅನುಬಂಧವನ್ನು ನೋಡಿ.

Eaton ನೆಟ್‌ವರ್ಕ್ ಪವರ್ ಕಂಟ್ರೋಲರ್ ಫೆನ್ಸ್‍ ಸಾಧನಕ್ಕಾಗಿ ಬೆಂಬಲ

Red Hat Enterprise Linux 64 ರಲ್ಲಿ SNMP ಜಾಲಬಂಧ ಪವರ್ ಸ್ವಿಚ್‌ಗಾಗಿನ ಫೆನ್ಸ್‍ ಮಧ್ಯವರ್ತಿಯಾದಂತಹ fence_eaton_snmp ಗಾಗಿ ಬೆಂಬಲವನ್ನು ಸೇರಿಸಲಾಗಿದೆ. ಈ ಫೆನ್ಸ್‍ ಮಧ್ಯವರ್ತಿಯಲ್ಲಿನ ನಿಯತಾಂಕಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, Red Hat Enterprise Linux 6 ರಲ್ಲಿನ Cluster Administration ಮಾರ್ಗದರ್ಶಿಯಲ್ಲಿರುವ Fence Device Parameters ಅನುಸೂಚಿಯನ್ನು ನೋಡಿ.

ಹೊಸ keepalived ಪ್ಯಾಕೇಜು

Red Hat Enterprise Linux 6.4 ರಲ್ಲಿ keepalived ಪ್ಯಾಕೇಜನ್ನು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. keepalived ಪ್ಯಾಕೇಜು ಹೊರ-ಸಮತೋಲನ ಮತ್ತು ಅತಿ-ಲಭ್ಯತೆಗಾಗಿ (ಹೈ-ಅವಿಲಿಬಿಲಿಟಿ) ಸರಳವಾದ ಮತ್ತು ಸದೃಢವಾದ ಸೌಲಭ್ಯಗಳನ್ನು ಒದಗಿಸುತ್ತದೆ. ಹೊರೆ-ಸಮತೋಲನ ರಚನಾವ್ಯವಸ್ಥೆಯು ಲೇಯರ್ 4 ಜಾಲಬಂಧ ಹೊರೆ-ಸಮತೋಲನವನ್ನು ಒದಗಿಸುವ ಹೆಚ್ಚು ಪ್ರಚಲಿತವಾದ ಮತ್ತು ಹೆಚ್ಚು ಬಳಸಲಾಗುತ್ತಿರುವ ಲಿನಕ್ಸ್ ವರ್ಚುವಲ್ ಸರ್ವರ್ ಕರ್ನಲ್ ಮಾಡ್ಯೂಲ್ ಮೇಲೆ ಅವಲಂಬಿತವಾಗಿರುತ್ತದೆ. ಸರ್ವರ್ ಪೂಲ್‌ಗಳ ಸ್ಥಿತಿಯ ಮೇರೆಗೆ keepalived ಡೀಮನ್ ಅವುಗಳ ಆರೋಗ್ಯ ಪರಿಶೀಲನೆಗಳನ್ನು ಸಿದ್ಧಗೊಳಿಸುತ್ತದೆ. keepalived ಡೀಮನ್ ವರ್ಚುವಲ್ ರೌಟರ್ ರಿಡಂಡೆನ್ಸಿ ಪ್ರೊಟೊಕಾಲ್ (VRRP) ಅನ್ನೂ ಸಹ ಅಳವಡಿಸುತ್ತದೆ, ಆ ಮೂಲಕ ಅತಿ-ಲಭ್ಯತೆಯನ್ನು ಹೊಂದಲು ರೌಟರ್ ಅಥವ ನಿರ್ದೇಶಕ ಫೇಲ್‌ಓವರಿಗೆ ಅನುಮತಿಸುತ್ತದೆ.

ವಾಚ್‌ಡಾಗ್ ಮರಳಿಪಡೆಯುವಿಕೆ

ಹೊಸ fence_sanlock ಮತ್ತು checkquorum.wdmd ಫೆನ್ಸ್‍ ಮಧ್ಯವರ್ತಿಗಳನ್ನು, Red Hat Enterprise Linux 6.4 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದ್ದು, ಇವು ವಾಚ್‌ಡಾಗ್ ಸಾಧನವನ್ನು ಬಳಸಿಕೊಂಡು ಒಂದು ನೋಡ್ ಅನ್ನು ಹಿಂದಕ್ಕೆ ಪಡೆಯಲು ಒಂದು ಹೊಸ ನಿರ್ಮಾಣವ್ಯವಸ್ಥೆಯನ್ನು ಒದಗಿಸುತ್ತದೆ. ಈ ತಂತ್ರಜ್ಞಾನ ಮುನ್ನೋಟವನ್ನು ಹೇಗೆ ಸಕ್ರಿಯಗೊಳಿಸಬೇಕು ಎನ್ನುವ ಕುರಿತಾದ ಮಾಹಿತಿಯು https://fedorahosted.org/cluster/wiki/HomePage ಎಂಬಲ್ಲಿ ನೀಡಲಾಗಿದೆ.

VMDK-ಆಧರಿತ ಶೇಖರಣೆಗಾಗಿನ ಬೆಂಬಲ

Red Hat Enterprise Linux 6.4 ರಲ್ಲಿ VMware ನ ಬಹು-ಬರೆಯುವಿಕೆಯೊಂದಿಗಿನ VMDK (ವರ್ಚುವಲ್ ಮೆಶೀನ್ ಡಿಸ್ಕ್) ಡಿಸ್ಕ್‍ ಚಿತ್ರಿಕೆ ತಂತ್ರಜ್ಞಾನವನ್ನು ಹೊಂದಿರುವ ಕ್ಲಸ್ಟರುಗಳಿಗಾಗಿನ ಬೆಂಬಲವನ್ನು ಸೇರಿಸಲಾಗಿದೆ. ಉದಾಹರಣೆಗೆ, ಇದು GFS2 ನಂತಹ ಕ್ಲಸ್ಟರ್ ಮಾಡಲಾದ ಕಡತವ್ಯವಸ್ಥೆಗಾಗಿ ಬಹು-ಬರೆಯುವಿಕೆ ಆಯ್ಕೆಯೊಂದಿಗೆ VMDK-ಆಧರಿತವಾದ ಶೇಖರಣೆಯನ್ನು ಬಳಸಲು ಅನುವು ಮಾಡಿಕೊಡುತ್ತದೆ.

ಅಧ್ಯಾಯ 10. ಶೇಖರಣೆ

ಸಮಾನಾಂತರ NFS ಸಂಪೂರ್ಣ ಬೆಂಬಲಿತಗೊಂಡಿದೆ

ಪ್ಯಾರಲೆಲ್ NFS (pNFS) ಎನ್ನುವುದು NFS v4.1 ಶಿಷ್ಟತೆಯ ಒಂದು ಭಾಗವಾಗಿದ್ದು, ಇದು ಶೇಖರಣಾ ಸಾಧನಗಳನ್ನು ನೇರವಾಗಿ ಮತ್ತು ಸಮಾನಾಂತರವಾಗಿ ನಿಲುಕಿಸಿಕೊಳ್ಳಲು ಕ್ಲೈಂಟ್‌ಗಳಿಗೆ ಅನುಮತಿ ನೀಡುತ್ತದೆ. pNFS ಆರ್ಕಿಟೆಕ್ಚರ್ ಹಲವಾರು ಸಾಮಾನ್ಯ ಕಾರ್ಯದ ಹೊರೆಗಳಲ್ಲಿ NFS ಪೂರೈಕೆಗಣಕಗಳ ಸ್ಕೇಬಿಲಿಟಿ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಬಲ್ಲದು. Red Hat Enterprise Linux 6.4 ರಲ್ಲಿ, pNFS ಸಂಪೂರ್ಣವಾಗಿ ಬೆಂಬಲಿತವಾಗಿರುತ್ತದೆ.
pNFS ಎನ್ನುವುದು 3 ವಿವಿಧ ಶೇಖರಣಾ ಪ್ರೊಟೊಕಾಲ್ ಅಥವ ಲೇಔಟ್‌ಗಳಾದಂತಹ ಕಡತಗಳು, ವಸ್ತುಗಳು ಹಾಗು ಖಂಡಗಳನ್ನು ಬೆಂಬಲಿಸುತ್ತದೆ. Red Hat Enterprise Linux 6.4 NFS ಕ್ಲೈಂಟ್ ಕಡತಗಳ ಲೇಔಟ್‌ ಪ್ರೊಟೊಕಾಲ್‌ ಅನ್ನು ಬೆಂಬಲಿಸುತ್ತದೆ.
ಈ ಹೊಸ ಕಾರ್ಯಶೀಲತೆಯನ್ನು ಸಕ್ರಿಯಗೊಳಿಸಲು pNFS-ಸಕ್ರಿಯಗೊಂಡ ಪೂರೈಕೆಗಣಕದಿಂದ ಈ ಕೆಳಗಿನ ಏರಿಸುವಿಕೆ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ: -o minorversion=1 or -o v4.1.
ಪೂರೈಕೆಗಣಕವು pNFS-ಸಕ್ರಿಯಗೊಂಡಿದ್ದಲ್ಲಿ, nfs_layout_nfsv41_files ಕರ್ನಲ್ ಮಾಡ್ಯೂಲ್ ಮೊದಲೆಯ ಏರಿಕೆಯಲ್ಲಿಯೆ ಸ್ವಯಂಚಾಲಿತವಾಗಿ ಲೋಡ್ ಮಾಡಲ್ಪಡುತ್ತದೆ. ಈ ಮಾಡ್ಯೂಲ್ ಅನ್ನು ಲೋಡ್ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಆಜ್ಞೆಯನ್ನು ಬಳಸಿ:
~]$ lsmod | grep nfs_layout_nfsv41_files
pNFS ಕುರಿತು ಹೆಚ್ಚಿನ ಮಾಹಿತಿಗಾಗಿ, http://www.pnfs.com/ ಅನ್ನು ನೋಡಿ.

XFS ಆನ್‌ಲೈನ್ ಡಿಸ್ಕಾರ್ಡ್ ಬೆಂಬಲ

ಕಡತವ್ಯವಸ್ಥೆಯಿಂದ ಬಳಸಲ್ಪಡಲಾಗುತ್ತಿರದೆ ಇರುವ ಏರಿಸಲಾದ ಕಡತ ವ್ಯವಸ್ಥೆ ನಿರಾಕರಣೆಗಳ ಬ್ಲಾಕ್‌ಗಳ ಮೇಲೆ ಒಂದು ಆನ್‌ಲೈನ್ ನಿರಾಕರಣೆ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ. ಆನ್‌ಲೈನ್ ನಿರಾಕರಣ ಕಾರ್ಯಾಚರಣೆಗಳು ಈಗ XFS ಕಡತವ್ಯವಸ್ಥೆಗಳಲ್ಲಿ ಬೆಂಬಲಿತವಾಗಿರುತ್ತವೆ. ಹೆಚ್ಚಿನ ಮಾಹಿತಿಗಾಗಿ, Red Hat Enterprise Linux 6 Storage Administration Guide ನಲ್ಲಿನ Discard Unused Blocks ವಿಭಾಗವನ್ನು ನೋಡಿ.

ಮೈಕ್ರಾನ್ PCIe SSD ಗಾಗಿ LVM ಬೆಂಬಲ

Red Hat Enterprise Linux 6.4 ರಲ್ಲಿ, LVM ಪರಿಮಾಣ ಗುಂಪಿನ (ವಾಲ್ಯೂಮ್ ಗ್ರೂಪ್‌) ಒಂದು ಭಾಗವಾಗಿರಬಹುದಾದ ಸಾಧನವಾಗಿ Micron PCIe Solid State Drives (SSDs) ಅನ್ನು ಬೆಂಬಲಿಸುತ್ತದೆ.

2-way Mirror RAID10 ಗಾಗಿ LVM ಬೆಂಬಲ

LVM ಈಗ RAID10 ತಾರ್ಕಿಕ ಪರಿಮಾಣಗಳನ್ನು ರಚನೆ, ತೆಗೆದುಹಾಕುವಿಕೆ, ಮರುಗಾತ್ರಗೊಳಿಕೆಯ ಸಾಮರ್ಥ್ಯವನ್ನು ಹೊಂದಿರುತ್ತದೆ. ಒಂದು RAID10 ತಾರ್ಕಿಕ ಪರಿಮಾಣವನ್ನು ರಚಿಸಲು, ಇತರೆ RAID ಬಗೆಗಳಂತೆ, ವಿಭಾಗದ ಬಗೆಯನ್ನು ಈ ಕೆಳಗಿನ ರೀತಿಯಲ್ಲಿ ಸೂಚಿಸಿ:
~]# lvcreate --type raid10 -m 1 -i 2 -L 1G -n lv vg
-m ಮತ್ತು -i ಆರ್ಗ್ಯುಮೆಂಟ್‌ಗಳು ಇತರೆ ವಿಭಾಗದ ಬಗೆಗಗಳು ವರ್ತಿಸುವ ರೀತಿಯಲ್ಲಿಯೆ ವರ್ತಿಸುತ್ತವೆ ಎಂದು ನೆನಪಿಡಿ. ಅಂದರೆ, -i ಎನ್ನುವುದು ಒಟ್ಟು ಸಂಖ್ಯೆಯ ಪಟ್ಟಿಗಳು ಮತ್ತು -m ಎನ್ನುವುದು ಪ್ರತಿಗಳ (ಹೆಚ್ಚುವರಿ) ಸಂಖ್ಯೆಯಾಗಿರುತ್ತದೆ (ಅಂದರೆ, -m 1 -i 2 ಎನ್ನುವುದು 2-ಮಾರ್ಗದ ಬಿಂಬಗಳಲ್ಲಿ 2 ಪಟ್ಟಿಗಳನ್ನು ಒದಗಿಸುತ್ತದೆ).

ಸಾಧನ ಮ್ಯಾಪರ್ ಸಾಧನಗಳ ಮುಖಾಂತರ SCSI ಸ್ಥಿರ ಮೀಸಲಾತಿಗಳನ್ನು ಸಿದ್ಧಗೊಳಿಸಿ ಮತ್ತು ಮೇಲ್ವಿಚಾರಣೆ ನಡೆಸಿ

ಈ ಹಿಂದೆ, ಬಹುಮಾರ್ಗದ ಸಾಧನಗಳಲ್ಲಿ ಸ್ಥಿರವಾದ ಮೀಸಲಾತಿಗಳನ್ನು ಸಿದ್ಧಗೊಳಿಸಬೇಕಿದ್ದಲ್ಲಿ, ಅದನ್ನು ಎಲ್ಲಾ ಬಗೆಯ ಮಾರ್ಗದ ಸಾಧನಗಳಲ್ಲಿ ಸಿದ್ಧಗೊಳಿಸುವುದು ಅನಿವಾರ್ಯವಾಗಿರುತ್ತಿತ್ತು. ಒಂದು ಮಾರ್ಗ ಸಾಧನಗಳನ್ನು ನಂತರ ಸೇರಿಸಿದಲ್ಲಿ, ಆ ಮಾರ್ಗಕ್ಕೆ ಕೈಯಾರೆ ಮೀಸಲಾತಿಗಳನ್ನು ಸೇರಿಸುವುದು ಅಗತ್ಯವಾಗಿರುತ್ತಿತ್ತು. Red Hat Enterprise Linux 6.4 ರಲ್ಲಿ ಒಂದು ಸಾಧನ ಮ್ಯಾಪರ್ ಸಾಧನಗಳ ಮುಖಾಂತರ SCSI ಸ್ಥಿರ ಮೀಸಲಾತಿಗಳನ್ನು mpathpersist ಆಜ್ಞೆಯ ಮುಖಾಂತರ ಸಿದ್ಧಗೊಳಿಸುವ ಸಾಮರ್ಥ್ಯವನ್ನು ಸೇರಿಸಲಾಗಿದೆ. ಮಾರ್ಗ ಸಾಧನಗಳನ್ನು ಸೇರಿಸಿದಾಗ, ಆ ಸಾಧನಗಳಿಗಾಗಿಯೂ ಸಹ ಸ್ಥಿರ ಮೀಸಲಾತಿಗಳನ್ನು ಸಿದ್ಧಗೊಳಿಸಬಹುದಾಗಿರುತ್ತದೆ.

ಅಧ್ಯಾಯ 11. ಕಂಪೈಲರ್ ಹಾಗು ಉಪಕರಣಗಳು

SystemTap ಅನ್ನು ಆವೃತ್ತಿ 1.8 ಕ್ಕೆ ಅಪ್‌ಡೇಟ್ ಮಾಡಲಾಗಿದೆ

SystemTap ಎನ್ನುವುದು ಬಳಕೆದಾರರಿಗೆ ಕಾರ್ಯ ವ್ಯವಸ್ಥೆಯ (ವಿಶೇಷವಾಗಿ, ಕರ್ನಲ್) ಚಟುವಟಿಕೆಗಳನ್ನು ಸೂಕ್ಷ್ಮವಾದ ರೀತಿಯಲ್ಲಿ ಅರಿತುಕೊಳ್ಳಲು ಹಾಗು ಮೇಲ್ವಿಚಾರಣೆ ನಡೆಸಲು ಅನುಮತಿಸುವ ಜಾಡನ್ನು ಇರಿಸುವ ಹಾಗು ತನಿಖೆ ನಡೆಸುವ ಒಂದು ಉಪಕರಣವಾಗಿರುತ್ತದೆ. ಇದು netstat, ps, top, ಹಾಗು iostat ಉಪಕರಣಗಳನ್ನು ಹೋಲುವ ಔಟ್‌ಪುಟ್‌ ಅನ್ನು ಒದಗಿಸುತ್ತದೆ. ಆದರೆ, SystemTap ಸಂಗ್ರಹಿಸಲಾದ ಮಾಹಿತಿಗಾಗಿ ಹೆಚ್ಚಿನ ಫಿಲ್ಟರಿಂಗ್ ಹಾಗು ಹೆಚ್ಚಿನ ವಿಶ್ಲೇಷಣೆ ಆಯ್ಕೆಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
Red Hat Enterprise Linux 6.4 ರಲ್ಲಿನ systemtap ಅನ್ನು ಅಪ್‌ಸ್ಟ್ರೀಮ್ ಆವೃತ್ತಿ 1.8 ಕ್ಕೆ ನವೀಕರಿಸಲಾಗಿದ್ದು, ಇದು ಹಲವಾರು ದೋಷ ಪರಿಹಾರಗಳು ಮತ್ತು ಸುಧಾರಣೆಗಳನ್ನು ಒದಗಿಸುತ್ತದೆ:
  • @var ಸಿಂಟ್ಯಾಕ್ಸ್ ಈಗ uprobe ಮತ್ತು kprobe ಹ್ಯಾಂಡ್ಲರುಗಳಲ್ಲಿ (ಪ್ರಕ್ರಿಯೆ, ಕರ್‌ನಲ್, ಮಾಡ್ಯೂಲ್) DWARF ವೇರಿಯೇಬಲ್‌ಗಳಿಗಾಗಿ ಪರ್ಯಾಯ ಭಾಷೆ ಸಿಂಟ್ಯಾಕ್ಸ್ ಆಗಿರುತ್ತದೆ.
  • SystemTap ಈಗ ಟ್ಯಾಪ್‌ಸೆಟ್‌ಗಳಿಂದ ಸೇರಿಸಲಾದ C ಹೆಡರುಗಳೊಂದಿಗೆ ಘರ್ಷಣೆಯಾಗುವುದನ್ನು ತಪ್ಪಿಸಲು ಸ್ಥಳೀಯ ವೇರಿಯೇಬಲ್‌ಗಳನ್ನು ವಿರೂಪಗೊಳಿಸುತ್ತದೆ.
  • SystemTap ಕಂಪೈಲ್-ಪೂರೈಕೆಗಣಕ ಮತ್ತು ಕ್ಲೈಂಟ್ ಈಗ IPv6 ಜಾಲಬಂಧಗಳನ್ನು ಬೆಂಬಲಿಸುತ್ತವೆ.
  • SystemTap ಚಾಲನಾಸಮಯ (staprun) ಈಗ ಸ್ಕ್ರಿಪ್ಟಿನಿಂದ ಕಡಿಮೆ-ತ್ರೂಪುಟ್‌ ಔಟ್‌ಪುಟ್‌ಗಳಿಗಾಗಿನ ಪೋಲ್‌ಗಾಗಿ ಕಡಿಮೆ ಬಾರಿ ಎಚ್ಚರಗೊಳ್ಳುವುದನ್ನು ಅನುಮತಿಸಲು -T ಕಾಲಾವಧಿ ತೀರಿಕೆಗಳನ್ನು ಅಂಗೀಕರಿಸುತ್ತದೆ.
  • SystemTap ಸ್ಕ್ರಿಪ್ಟ್ ಅನುವಾದಕ ಚಾಲಕ (stap) ಈಗ ಈ ಕೆಳಗಿನ ಸಂಪನ್ಮೂಲ ಮಿತಿಯ ಆಯ್ಕೆಗಳನ್ನು ಒದಗಿಸುತ್ತದೆ:
    --rlimit-as=NUM
    --rlimit-cpu=NUM
    --rlimit-nproc=NUM
    --rlimit-stack=NUM
    --rlimit-fsize=NUM
    
  • SystemTap ಮಾಡ್ಯೂಲ್‌ಗಳು ಈಗ ಚಿಕ್ಕದಾಗಿದೆ ಮತ್ತು ವೇಗವಾಗಿದೆ ಕಂಪೈಲ್ ಆಗುತ್ತದೆ. ಮಾಡ್ಯೂಲ್‌ಗಳ debuginfo ಈಗ ಪೂರ್ವನಿಯೋಜಿತವಾಗಿ ತಡೆಹಿಡಿಯಲಾಗುತ್ತದೆ.
  • CVE-2012-0875 ದೋಷ (ತಪ್ಪಾಗಿರುವ DWARF ಅನ್‌ವೈಂಡ್ ದತ್ತಾಂಶವನ್ನು ಸಂಸ್ಕರಿಸುವಾಗ ಆಗುತ್ತಿದ್ದ ಕರ್ನಲ್ ಪ್ಯಾನಿಕ್) ಅನ್ನು ಈಗ ಸರಿಪಡಿಸಲಾಗಿದೆ.

lscpu ಮತ್ತು chcpu ಸವಲತ್ತುಗಳು

ಲಭ್ಯವಿರುವ CPUಗಳ ಕುರಿತು ಮಾಹಿತಿಯನ್ನು ತೋರಿಸುವ lscpu ಸವಲತ್ತನ್ನು ಹಲವಾರು ಹೊಸ ಉತ್ತಮ ಅಂಶಗಳನ್ನು ಒಳಗೊಳ್ಳುವಂತೆ ಅಪ್‌ಡೇಟ್ ಮಾಡಲಾಗಿದೆ. ಅಲ್ಲದೆ, chcpu ಎನ್ನುವ ಹೊಸ ಸವಲತ್ತನ್ನೂ ಸೇರಿಸಲಾಗಿದ್ದು, ಇದು CPU ಸ್ಥಿತಿಯನ್ನು ಬದಲಾಯಿಸಲು (ಆನ್‌ಲೈನ್/ಆಫ್‌ಲೈನ್, ಸ್ಥಗಿತ/ಸಕ್ರಿಯ, ಮತ್ತು ಇತರೆ ಸ್ಥಿತಿಗಳು), CPUಗಳನ್ನು ನಿಷ್ಕ್ರಿಯ ಮತ್ತು ಸಕ್ರಿಯಗೊಳಿಸಲು, ಮತ್ತು ನಿಶ್ಚಿತ CPUಗಳನ್ನು ಸಂರಚಿಸಲು ಅನುವು ಮಾಡುತ್ತದೆ.
ಈ ಸವಲತ್ತುಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, lscpu(1) ಮತ್ತು chcpu(8) ಮಾಹಿತಿ ಪುಟಗಳನ್ನು ನೋಡಿ.

ಅಧ್ಯಾಯ 12. ಸಾಮಾನ್ಯ ಅಪ್‌ಡೇಟ್‌ಗಳು

samba ಪ್ಯಾಕೇಜುಗಳನ್ನು ಅಪ್‌ಡೇಟ್ ಮಾಡಲಾಗಿದೆ

Red Hat Enterprise Linux 6.4 ರಲ್ಲಿ ಹಲವಾರು ದೋಷ ಸರಿಪಡಿಕೆಗಳು ಮತ್ತು ಸುಧಾರಣೆಗಳನ್ನು ಪರಿಚಯಿಸುವ ರಿಬೇಸ್ ಮಾಡಲಾದ samba3x ಪ್ಯಾಕೇಜುಗಳನ್ನು ಹೊಂದಿರುತ್ತದೆ. ಇದರಲ್ಲಿ ಮುಖ್ಯವಾದ ಸುಧಾರಣೆಯೆಂದರೆ SMB2 ಪ್ರೊಟೊಕಾಲ್‌ಗಾಗಿನ ಬೆಂಬಲವನ್ನು ಸೇರಿಸಲಾಗಿದ್ದು, ಇದು ಈ ಕೆಳಗಿನ ನಿಯತಾಂಕವನ್ನು ಹೊಂದಿರುತ್ತದೆ. SMB2 ಪ್ರೊಟಕಾಲ್ ಅನ್ನು /etc/samba/smb.conf ಕಡತದಲ್ಲಿನ [global] ನಿಯತಾಂಕದಲ್ಲಿ ಸರಿಪಡಿಸಬಹುದಾಗಿರುತ್ತದೆ:
max protocol = SMB2
ಅಷ್ಟೆ ಅಲ್ಲದೆ, Samba ಈಗ AES ಕರ್ಬರೋಸ್ ದೃಢೀಕರಣವನ್ನು ಬೆಂಬಲವನ್ನು ಹೊಂದಿರುತ್ತದೆ. AES ಬೆಂಬಲವು Windows Vista ಮತ್ತು Windows Server 2008 ರ ನಂತರದ Microsoft Windows ಕಾರ್ಯಾಚರಣೆ ವ್ಯವಸ್ಥೆಗಳಲ್ಲಿ ಲಭ್ಯವಿರುತ್ತದೆ. ಇದು Windows 7 ನಂತರ ಪೂರ್ವನಿಯೋಜಿತ ಕರ್ಬರೋಸ್ ಗೂಢಲಿಪೀಕರಣ ಬಗೆಯಾಗಿದೆ ಎಂದು ವರದಿ ಮಾಡಲಾಗಿದೆ. Samba ಈಗ ಅದು ನಿಯಂತ್ರಿಸುವ ಕೀಟ್ಯಾಬ್‌ಗೆ AES ಕರ್ಬರೋಸ್ ಕೀಲಿಗಳನ್ನು ಸೇರಿಸುತ್ತದೆ. ಅಂದರೆ samba ಕೀಟ್ಯಾಬ್ ಅನ್ನು ಬಳಸುವ ಮತ್ತು ಅದೇ ಗಣಕದಲ್ಲಿ ಚಲಾಯಿತಗೊಳ್ಳುವ ಇತರೆ ಕರ್ಬರೈಸ್ಡ್‍ ಸೇವೆಗಳು AES ಗೂಢಲಿಪೀಕರಣದಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿರುತ್ತದೆ. AES ಅಧಿವೇಶನ ಕೀಲಿಗಳನ್ನು ಬಳಸಲು (ಮತ್ತು ಕೇವಲ AES ಗೂಢಲಿಪೀಕರಿಸಲಾದ ಟಿಕೆಟ್ ನೀಡುವ ವ್ಯವಸ್ಥೆಗಾಗಿ ಅಲ್ಲದ), ಆಕ್ಟೀವ್ ಡಿರಕ್ಟರಿಯ LDAP ಪೂರೈಕೆಗಣಕವನ್ನು ಕೈಯಾರೆ ಮಾರ್ಪಡಿಸುವ ಅಗತ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, Microsoft Open Specifications Support Team Blog ಅನ್ನು ನೋಡಿ.

ಎಚ್ಚರಿಕೆ

ಅಪ್‌ಡೇಟ್ ಮಾಡಲಾದ samba ಪ್ಯಾಕೇಜುಗಳು ID ಮ್ಯಾಪಿಂಗ್ ಅನ್ನು ಸಂರಚಿಸುವ ರೀತಿಯನ್ನೂ ಸಹ ಬದಲಾಯಿಸುತ್ತದೆ. ಬಳಕೆದಾರರು ತಮ್ಮ ಈಗಿರುವ Samba ಸಂರಚನಾ ಕಡತಗಳನ್ನು ಮಾರ್ಪಡಿಸುವಂತೆ ಸಲಹೆ ಮಾಡಲಾಗುತ್ತದೆ.
ಹಲವಾರು ಟ್ರಿವಿಯಲ್ ಡೇಟಾಬೇಸ್ (TDB) ಕಡತಗಳನ್ನು ಅಪ್‌ಡೇಟ್ ಮಾಡಲಾಗಿದೆ ಮತ್ತು ನಿಜವಾದ ರಿಜಿಸ್ಟ್ರಿ ಅಳವಡಿಕೆಯನ್ನು ಬಳಸಿಕೊಳ್ಳುವಂತೆ ಮುದ್ರಣದ ಬೆಂಬಲವನ್ನು ಮರಳಿ ಬರೆಯಲಾಗಿದೆ. ಇದರರ್ಥ ನೀವು smbd ಯ ಹೊಸ ಆವೃತ್ತಿಯನ್ನು ಪ್ರಾರಂಭಿಸಿದ ಕೂಡಲೇ ಎಲ್ಲಾ TDB ಕಡತಗಳನ್ನು ನವೀಕರಿಸಲಾಗುತ್ತದೆ. ನೀವು ಹಳೆಯ TDB ಕಡತಗಳ ಬ್ಯಾಕ್‌ಅಪ್‌ಗಳನ್ನು ಹೊಂದಿರದೆ ಇದ್ದಲ್ಲಿ Samba 3.x ಆವೃತ್ತಿಗೆ ಇಳಿಸಲು ಸಾಧ್ಯವಿಲ್ಲ.
ಈ ಬದಲಾವಣೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, Samba 3.6.0 ಯ ಬಿಡುಗಡೆ ಟಿಪ್ಪಣಿಗಳನ್ನು ನೋಡಿ.

ಹೊಸ SciPy ಪ್ಯಾಕೇಜುಗಳು

Red Hat Enterprise Linux 6.4 ರಲ್ಲಿ ಒಂದು ಹೊಸ scipy ಪ್ಯಾಕೇಜನ್ನು ಸೇರಿಸಲಾಗಿದೆ. SciPy ಪ್ಯಾಕೇಜು ಗಣಿತ, ವಿಜ್ಞಾನ, ಮತ್ತು ಇಂಜಿನಿಯರಿಂಗ್‌ಗಾಗಿನ ತಂತ್ರಾಂಶವನ್ನು ಒದಗಿಸುತ್ತದೆ. ಆರ್ಬಿಟ್ರರಿ ದಾಖಲೆಗಳ ದೊಡ್ಡದಾದ ಬಹು-ಆಯಾಮ ವ್ಯೂಹಗಳನ್ನು ಕುಶಲತೆಯಿಂದ ನಿರ್ವಹಿಸಲು ವಿನ್ಯಾಸಗೊಳಿಸಲಾದಂತ NumPy ಪ್ಯಾಕೇಜು SciPy ಗಾಗಿನ ಪ್ರಮುಖ ಲೈಬ್ರರಿಯಾಗಿದೆ. SciPy ಲೈಬ್ರರಿಯನ್ನು, NumPy ವ್ಯೂಹಗಳೊಂದಿಗೆ ಕೆಲಸ ಮಾಡುವಂತೆ ಮತ್ತು ಹಲವಾರು ಸಕ್ಷಮವಾದ ಅಂಕೀತ ದಿನಚರಿಗಳನ್ನು ಒದಗಿಸುವಂತೆ ನಿರ್ಮಾಣಗೊಳಿಸಲಾಗಿದೆ, ಉದಾಹರಣೆಗೆ ಅಂಕೀಯ ಸಂಘಟಿಸುವಿಕೆ ಮತ್ತು ಸೂಕ್ತಗೊಳಿಕೆಗಾಗಿ.

NSS ನಲ್ಲಿ TLS v1.1

nss ಮತ್ತು nss-util ಪ್ಯಾಕೇಜುಗಳನ್ನು ಅಪ್‌ಸ್ಟ್ರೀಮ್ ಆವೃತ್ತಿ 3.14 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು ಇತರೆ ಸೌಲಭ್ಯಗಳ ಜೊತೆಗೆ, TLS ಆವೃತ್ತಿ 1.1 ಕ್ಕೆ ಬೆಂಬಲವನ್ನು ನೀಡುತ್ತದೆ. ಅಷ್ಟೆ ಅಲ್ಲದೆ nspr ಪ್ಯಾಕೇಜನ್ನು ಆವೃತ್ತಿ 4.9.2 ಕ್ಕೆ ರೀಬೇಸ್ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ NSS 3.14 ಬಿಡುಗಡೆ ಟಿಪ್ಪಣಿಗಳನ್ನು ನೋಡಿ.

ಅಡಕಗೊಳಿಸಲಾದ Valgrind gdbserver

valgrind ಪ್ಯಾಕೇಜನ್ನು ಅಪ್‌ಸ್ಟ್ರೀಮ್ ಆವೃತ್ತಿ 3.8.1 ಕ್ಕೆ ನವೀಕರಿಸಲಾಗಿದೆ. ಈ ಅಪ್‌ಡೇಟ್ ಮಾಡಲಾದ ಆವೃತ್ತಿಯು, ಇನ್ನಿತರೆ ಸುಧಾರಣೆಗಳು ಮತ್ತು ದೋಷ ಪರಿಹಾರಗಳೊಂದಿಗೆ, ಒಂದು ಅಡಕಗೊಳಿಸಲಾದ gdbserver ಅನ್ನು ಹೊಂದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, Red Hat Developer Toolset 1.1 User Guide ನಲ್ಲಿನ Valgrind ಅಧ್ಯಾಯ ಮತ್ತು Changes in Valgrind 3.8.1 ಅನುಸೂಚಿಯನ್ನು ನೋಡಿ.

ಹೊಸ libjpeg-turbo ಪ್ಯಾಕೇಜುಗಳು

Red Hat Enterprise Linux 6.4 ರಲ್ಲಿ ಈ ಕೆಳಗಿನ ಹೊಸ ಪ್ಯಾಕೇಜುಗಳನ್ನು ಸೇರಿಸಲಾಗಿದೆ: libjpeg-turbo. ಈ ಪ್ಯಾಕೇಜುಗಳು ಸಾಂಪ್ರದಾಯಿಕವಾದ libjpeg ಪ್ಯಾಕೇಜುಗಳನ್ನು ತೆಗೆದುಹಾಕುತ್ತದೆ, ಮತ್ತು ಉತ್ತಮ ಕಾರ್ಯನಿರ್ವಹಣೆಗಾಗಿ libjpeg ನಂತಹ ಕಾರ್ಯಶೀಲತೆ ಮತ್ತು API ಅನ್ನು ಒದಗಿಸುತ್ತದೆ.

ಹೊಸ redhat-lsb-core ಪ್ಯಾಕೇಜು

redhat-lsb ಪ್ಯಾಕೇಜನ್ನು ಅನುಸ್ಥಾಪಿಸುವಾಗ, LSB ಶಿಷ್ಟತೆಗೆ ಹೊಂದಿಕೆಯಾಗುವಂತೆ ದೊಡ್ಡ ಮೊತ್ತದ ಅವಲಂಬನೆಗಳನ್ನು ವ್ಯವಸ್ಥೆಗೆ ಸೆಳೆದುಕೊಳ್ಳಲಾಗುತ್ತದೆ. Red Hat Enterprise Linux 6.4 ರಲ್ಲಿ redhat-lsb-core ಉಪಪ್ಯಾಕೇಜನ್ನು ಸೇರಿಸಲಾಗಿದ್ದು, ಇದು redhat-lsb-core ಪ್ಯಾಕೇಜನ್ನು ಅನುಸ್ಥಾಪಿಸುವ ಮೂಲಕ ಕೇವಲ ಕನಿಷ್ಟ ಅಗತ್ಯವಿರುವ ಪ್ಯಾಕೇಜುಗಳನ್ನು ಮಾತ್ರ ಪಡೆದುಕೊಳ್ಳುವುದು ಸುಲಭವಾಗುವಂತೆ ಮಾಡುತ್ತದೆ.

createrepo ಸವಲತ್ತನ್ನು ಅಪ್‌ಡೇಟ್ ಮಾಡಲಾಗಿದೆ

createrepo ಸೌಲಭ್ಯವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಮೆಮೊರಿ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು --workers ಆಯ್ಕೆಯ ಮೂಲಕ ಬಹುಕಾರ್ಯನಿರ್ವಹಣೆಯ (ಮಲ್ಟಿಟಾಸ್ಕಿಂಗ್) ಬೆಂಬಲವನ್ನು ಸೇರಿಸುತ್ತದೆ.

ಪರಿಷ್ಕರಣ ಇತಿಹಾಸ

ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 1.2-0Thu Feb 21 2013Martin Prpič
Release of the Red Hat Enterprise Linux 6.4 Release Notes.